ವಿದ್ಯುತ್ ಸಂಪರ್ಕವಿಲ್ಲ
ಕಾಬೆಟ್ಟು ವಾರ್ಡ್‌ನಲ್ಲಿ 25 ಲಕ್ಷ ರೂ.ವೆಚ್ಚದಲ್ಲಿ ಬಾವಿ ನಿರ್ಮಾಣವಾಗಿದೆ. ಪೈಪ್‌ಲೈನ್ ಕೂಡ ಮಾಡಲಾಗಿದ್ದು, ಆದರೆ ಅದಕ್ಕೆ ವಿದ್ಯುತ್ ಸಂಪರ್ಕವಿಲ್ಲ. ಈ ಬಾವಿಯಿಂದ ನೀರು ತೆಗೆದರೆ ಸಮಸ್ಯೆ ಸ್ವಲ್ಪ ಕಡಿಮೆಯಾಗಲಿದೆ.ಹತ್ತಿರದಲ್ಲಿ ಬೋರ್‌ವೆಲ್ ಇದ್ದರೂ ಅದರ ನೀರು ಸಾಲುತ್ತಿಲ್ಲ.ರೋಟರಿ ಕಾಲನಿ,ಭಾರತ್ ಬೀಡಿ ಕಾಲನಿ,ಕಾಬೆಟ್ಟು ಕುಚೇಲಪಾದೆ, ಪ್ರಶಾಂತ್ ನಗರ ಮೊದಲಾದ ಕಡೆ ನೀರಿನ ಆವಶ್ಯಕತೆ ಇದೆ.
Advertisement
ನಿತ್ಯ 3 ಎಂಎಲ್‌ಡಿ ನೀರು ಅಗತ್ಯಪುರಸಭೆಯ ವ್ಯಾಪ್ತಿಗೆ ಮುಂಡ್ಲಿ ಜಲಾಶಯದಿಂದ ನೀರು ಒದಗಿಸಲಾಗುತ್ತದೆ.ಮುಂಡ್ಲಿಯಲ್ಲಿ ಇನ್ನೂ ಒಂದು ತಿಂಗಳ ಕಾಲ ನೀರು ಸಿಗಬಹುದು ಎನ್ನುವ ಲೆಕ್ಕಾಚಾರವಿದೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ನೀರಿನ ಪ್ರಮಾಣ ಹೆಚ್ಚಳವಾಗಿದೆ. ಸದ್ಯ ಒಂದೂವರೆ ಮೀಟರ್‌ನಷ್ಟು ನೀರಿದೆ.ಅಲ್ಲಿನ ನೀರು ಕಡಿಮೆಯಾದರೆ ಸ್ವರಾಜ್ಯ ಮೈದಾನದ ಸಮೀಪವಿರುವ ರಾಮಸಮುದ್ರದಿಂದ ನೀರು ತೆಗೆಯಲಾಗುತ್ತದೆ. ಉಳಿದಂತೆ ಪುರಸಭೆಯ ವ್ಯಾಪ್ತಿಯಲ್ಲಿ 10 ಬೋರ್‌ವೆಲ್‌ಗಳು ಹಾಗೂ 8 ಬಾವಿಗಳಿವೆ. 8,127 ಮನೆಗಳಲ್ಲಿ 4,426 ಮನೆಗಳಿಗೆ ಪುರಸಭೆಯ ನೀರಿನ ಸಂಪರ್ಕವಿದೆ. ಪುರಸಭೆ ವ್ಯಾಪ್ತಿಯಲ್ಲಿ ಪ್ರತಿ ದಿನ 3 ಎಂಎಲ್‌ಡಿ ನೀರಿನ ಅಗತ್ಯವಿದೆ.
ಎರಡು ದಿನಗಳಿಗೊಮ್ಮೆ ನೀರು ಬರುತ್ತದೆ.ಆ ನೀರು ದಿನಬಳಕೆಗೆ ಸಾಕಾಗುವುದಿಲ್ಲ.ಕಳೆದ ಬಾರಿ ನಾವೇ ಹಣ ಖರ್ಚು ಮಾಡಿ ಟ್ಯಾಂಕರ್ ನೀರು ತರಿಸಿದ್ದೆವು.ಎಪ್ರಿಲ್, ಮೇ ತಿಂಗಳಲ್ಲಿ ನೀರಿನ ಅಭಾವ ತೀವ್ರವಾಗಿರುತ್ತದೆ. ಹೀಗಾಗಿ ಮುಂದಿನ ಎರಡು ತಿಂಗಳಲ್ಲಿ ಎದುರಾಗುವ ಸಮಸ್ಯೆ ಬಗೆಹರಿಸಲು ಪುರಸಭೆ ಈಗಲೇ ಎಚ್ಚೆತ್ತುಕೊಳ್ಳಬೇಕಿದೆ.
– ಪ್ರವೀಣ್ ಕುಮಾರ್,ಕಾಬೆಟ್ಟು ನಿವಾಸಿ ದೊಡ್ಡ ಸಮಸ್ಯೆ ಇಲ್ಲ
ಪುರಸಭೆ ವ್ಯಾಪ್ತಿಗೆ ಸದ್ಯಕ್ಕೆ ದೊಡ್ಡಮಟ್ಟದಲ್ಲಿ ನೀರಿನ ಸಮಸ್ಯೆ ಇಲ್ಲ. ಮುಂಡ್ಲಿಯಲ್ಲಿ ನೀರು ಕಡಿಮೆಯಾದರೆ ರಾಮಸಮುದ್ರದಿಂದ ಪೂರೈಕೆ ಮಾಡಲಾಗುತ್ತದೆ.ಬಾವಿ, ಬೋರ್‌ವೆಲ್‌ಗಳಿವೆ. ಕೆಲವೊಂದು ಭಾಗಗಳಿಗೆ ಟ್ಯಾಂಕರ್ ಮೂಲಕವೂ ನೀರು ಪೂರೈಕೆ ಮಾಡಲಾಗಿದೆ.
– ಮೇಬಲ್ ಡಿಸೋಜಾ,ಪುರಸಭೆಯ ಮುಖ್ಯಾಧಿಕಾರಿ
Related Articles
Advertisement