Advertisement
ಗ್ರಾಮಸಭೆ ಫೆ. 24ರಂದು ಕುಂಬ್ರ ರೈತ ಸಭಾಭವನದಲ್ಲಿ ಅಧ್ಯಕ್ಷ ಯತಿರಾಜ್ ರೈ ನೀರ್ಪಾಡಿ ಅಧ್ಯಕ್ಷತೆಯಲ್ಲಿ ನಡೆಯಿತು. ಗ್ರಾಮಸ್ಥರು ಮಾತನಾಡಿ, ಒಳಮೊಗ್ರು ಗ್ರಾಮದ ಕುದ್ಕಲ್, ಅಜಲಡ್ಕದಲ್ಲಿ ಕಂದಾಯ ಇಲಾಖೆ ನೀಡಿದ ಭೂಮಿಯಲ್ಲಿ ರೈತರು ಕೃಷಿ ಮಾಡಿದ್ದಾರೆ. ಆದರೆ ಆ ಜಾಗ ತನ್ನದೆಂದು ಅರಣ್ಯ ಇಲಾಖೆ ಹೇಳುತ್ತಿದೆ. ಅವರಲ್ಲಿ ಜಾಗದ ನಕ್ಷೆ ಇದೆ. ಪಹಣಿ ಪತ್ರವಿಲ್ಲ. ಏಕೆ ಹೀಗೆ? ಪಹಣಿಪತ್ರದಲ್ಲಿ ಅರಣ್ಯ ಇಲಾಖೆಯ ಜಾಗವನ್ನು ನಮೂದಿಸುವ ಕಾರ್ಯವನ್ನು ಸರಕಾರ ಮಾಡಬೇಕು. ಆ ಮೂಲಕ ಸಮಸ್ಯೆಯನ್ನು ಪರಹರಿಸಬೇಕು ಎಂದು ಸಭೆಯಲ್ಲಿ ಮನವಿ ಮಾಡಿದರು.
ಗ್ರಾಮದ ದರ್ಬೆತ್ತಡ್ಕದಲ್ಲಿ ತ್ಯಾಜ್ಯ ವಿಲೇ ಘಟಕ ನಿರ್ಮಾಣಕ್ಕೆ ಗುರುತಿಸಿದ ಜಾಗವನ್ನು ಕೊನೇ ಗಳಿಗೆಯಲ್ಲಿ ತನ್ನದೆಂದು ಅರಣ್ಯ ಇಲಾಖೆ ತಕರಾರು ಎತ್ತಿದೆ. ಆದರೆ ಪಹಣಿ ಪತ್ರದಲ್ಲಿ ಸರಕಾರದ ಭೂಮಿ ಎಂದು ದಾಖಲಾಗಿದೆ. ಎಲ್ಲವೂ ಆದ ಬಳಿಕ ಅರಣ್ಯ ಇಲಾಖೆಯಿಂದ ಘಟಕಕ್ಕೆ ಸಮಸ್ಯೆಯಾಗಿದೆ ಎಂದು ಗ್ರಾ.ಪಂ. ಸದಸ್ಯ ಅಬ್ದುಲ್ ರಹಿಮಾನ್ ಅರಿಯಡ್ಕ ಆರೋಪಿಸಿದರು. ಈ ವಿಚಾರವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಯನ್ನು ಪರಿಹರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ನಾಟಿ ಕೋಳಿ ಕೊಡಿ
ಗ್ರಾಮಸ್ಥರಿಗೆ ಇಲಾಖೆ ಯಿಂದ ಗಿರಿರಾಜ ಕೋಳಿಯ ಬದಲು ನಾಟಿ ಕೋಳಿಯನ್ನೇ ನೀಡಬೇಕು. ಗಿರಿರಾಜ ಕೋಳಿ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದಿಲ್ಲ. ನಾಟಿ ಕೋಳಿ ನೀಡಿದರೆ ಗ್ರಾಮಸ್ಥರಿಗೆ ಪ್ರಯೋಜನವಾಗುತ್ತದೆ ಎಂದು ಗ್ರಾಮಸ್ಥರು ಮನವಿ ಮಾಡಿದ್ದು, ಈ ಬಗ್ಗೆ ನಿರ್ಣಯವನ್ನು ಕೈಗೊಳ್ಳಲಾಯಿತು.
Related Articles
Advertisement
ತಾ.ಪಂ. ಸದಸ್ಯ ಹರೀಶ್ ಬಿಜತ್ರೆ, ಗ್ರಾ.ಪಂ. ಉಪಾಧ್ಯಕ್ಷೆ ಸುನಂದಾ, ಸದಸ್ಯರಾದ ಮಹೇಶ್ ಕೇರಿ, ಉಷಾ ನಾರಾಯಣ, ಚಂದ್ರಕಲಾ, ತ್ರಿವೇಣಿ, ವಸಂತಿ ಆರ್. ಶೆಟ್ಟಿ, ಸುಂದರಿ, ವಿಶ್ವನಾಥ, ಶೀನಪ್ಪ ನಾಯ್ಕ, ಶಶಿಕಿರಣ್ ರೈ ಉಪಸ್ಥಿತರಿದ್ದರು.
ಪಶುವೈದ್ಯಾಧಿಕಾರಿ ಡಾ| ಪ್ರಕಾಶ್ ನೋಡಲ್ ಅಧಿಕಾರಿಯಾಗಿದ್ದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಗೀತಾ ಬಿ.ಎಸ್., ಸ್ವಾಗತಿಸಿ, ವರದಿ ವಾಚಿಸಿ ವಂದಿಸಿದರು.ಸಿಬಂದಿ ಜಾನಕಿ, ಗುಲಾಬಿ, ಕೇಶವ ಸಹಕರಿಸಿದರು. ಜಿ.ಪಂ. ಸದಸ್ಯೆ ಸಭೆಗೆ ಬಂದೇ ಇಲ್ಲ
ಸ್ಥಳೀಯ ಜಿ.ಪಂ. ಸದಸ್ಯೆ ಐದು ವರ್ಷಗಳಲ್ಲಿ ಒಂದು ಬಾರಿಯೂ ಗ್ರಾಮಸಭೆಗೆ ಬಂದಿಲ್ಲವೇಕೆ? ಜಿ.ಪಂ. ವ್ಯಾಪ್ತಿಯಲ್ಲಿ ಪರಿಹಾರ ಕಂಡುಕೊಳ್ಳಬಹುದಾದ ಸಮಸ್ಯೆಯನ್ನು ಅವರ ಬಳಿ ಹೇಳುವುದಾದರೂ ಹೇಗೆ ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಅವರು ಜಿ.ಪಂ. ಅಧ್ಯಕ್ಷರೂ ಆಗಿರುವ ಕಾರಣ ಕಾರ್ಯಕ್ರಮದ ಒತ್ತಡವಿರಬಹುದು. ಅವರಿಗೆ ತಲುಪಿಸಬೇಕಾದ ಸಮಸ್ಯೆಯನ್ನು ಅವರಿಗೆ ಗ್ರಾ.ಪಂ. ಪತ್ರ ಮುಖೇನ ತಿಳಿಸಿದರೆ ಒಳಿತು ಎಂದು ಅಭಿಪ್ರಾಯ ವ್ಯಕ್ತವಾಯಿತು. ಉಚಿತ ನೀರು ಕೊಡಿ
ಸರಕಾರ ಬಡವರಿಗೆ ಉಚಿತ ಅಕ್ಕಿ, ಉಚಿತ ವೈದ್ಯಕೀಯ ಸೇವೆ, ರೈತರ ಸಾಲಮನ್ನಾ ಮಾಡುತ್ತಿದೆ. ಆದರೆ ಸರಕಾರ ಏಕೆ ಬಡವರಿಗೆ ಕುಡಿಯುವ ನೀರನ್ನು ಉಚಿತವಾಗಿ ನೀಡುತ್ತಿಲ್ಲ? ಈ ವಿಚಾರವನ್ನು ನಿರ್ಣಯ ಮಾಡಿ ಸರಕಾರಕ್ಕೆ ಮನವಿ ಮಾಡಬೇಕು. ಕುಡಿಯುವ ನೀರಿನ ವಿದ್ಯುತ್ ಬಿಲ್ ಮನ್ನಾ ಮಾಡುವಂತೆ ಇಂಧನ ಸಚಿವರಿಗೂ ಮನವಿ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ವಿಷಯ ಪ್ರಸ್ತಾವಿಸಿದ ಸಂತೋಷ್ ಭಂಡಾರಿ ಚೆಲ್ಮೆತ್ತಾರು ಹಾಗೂ ರಾಜೇಶ್ ಪರ್ಪುಂಜ, ಈ ವಿಚಾರವನ್ನು ಕಳೆದ ಗ್ರಾಮಸಭೆಯಲ್ಲೇ ನಿರ್ಣಯ ಮಾಡಿತ್ತು. ಹಾಗಾಗಿ ಮುತುವರ್ಜಿ ವಹಿಸಿ ಸರಕಾರದ ಗಮನಕ್ಕೆ ತರುವಂತೆ ಆಗ್ರಹಿಸಿದರು.