Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ವಿಧಾನ ಪರಿಷತ್ ಸದಸ್ಯರು ಇತ್ತೀಚೆಗೆ ನಡೆಸಿದ ಸಭೆ, ಪಕ್ಷದೊಳಗಿನ ಕೆಲವೊಂದು ವಿಷಯಗಳ ಕುರಿತ ಅಸಮಾಧಾನದ ಚರ್ಚೆಯೇ ವಿನಃ ಪಕ್ಷ ಇಲ್ಲವೆ ನಾಯಕತ್ವದ ವಿರುದ್ಧದ ಬಂಡಾಯದ ಸಭೆಯಲ್ಲ, ವಿಧಾನ ಪರಿಷತ್ ಸದಸ್ಯರ ಸಭೆಯಲ್ಲಿ ನಡೆದ ಚರ್ಚೆ, ಸದಸ್ಯರ ಭಾವನೆ, ಅಸಮಾಧಾನಕ್ಕೆ ಕಾರಣವಾದ ಸಂಗತಿಗಳ ಕುರಿತಾಗಿ ದೇವೇಗೌಡರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ನ.6 ಅಥವಾ 7ರಂದು ಸಭೆ ಸೇರಿ ಎಲ್ಲರೂ ಕುಳಿತು ಚರ್ಚಿಸಿ, ಪಕ್ಷ ಸಂಘಟನೆಗೆ ಒತ್ತು ಕೊಡೋಣ ಎಂದಿದ್ದು, ಅವರ ಭರವಸೆಯಲ್ಲಿ ನಮಗೆ ವಿಶ್ವಾಸವಿದೆ ಎಂದರು.
ಧ್ವಜ ಬದಲಾವಣೆ ವಿಷಯವಾಗಿ ಒಣ ಗುದ್ದಾಟಕ್ಕೆ ಹೋಗಬೇಡಿ ಎಂದು ಈ ಹಿಂದೆಯೇ ನಾನು ಹೇಳಿದ್ದೆ. ಸರ್ಕಾರ ಬದಲಾದಂತೆ ಕನ್ನಡ ಧ್ವಜದ ಗೊಂದಲ ಸೃಷ್ಟಿ ಮಾಡುತ್ತಿವೆ. ಈ ಹಿಂದೆ ಸಿದ್ದರಾಮಯ್ಯ ರಾಜ್ಯಧ್ವಜ ವಿಚಾರವಾಗಿ ಕೆಲವೊಂದು ನಿರ್ಣಯಕ್ಕೆ ಮುಂದಾಗಿದ್ದಾಗ, ಇಂತಹ ಕೆಲಸ ಮಾಡಬೇಡಿ ಎಂದು ಹೇಳಿದ್ದೆ. ಇದೀಗ ಬಿಜೆಪಿ ಸರ್ಕಾರ ಮತ್ತೂಂದು ರೀತಿ ನಿರ್ಣಯಕ್ಕೆ ಮುಂದಾಗಿದೆ. ಸರ್ಕಾರಗಳು ಬದಲಾದಾಗ ಧ್ವಜ ವಿಚಾರದಲ್ಲಿ ಒಂದೊಂದು ರೀತಿ ಮಾಡುವುದು ಸರಿಯಲ್ಲ ಎಂದರು.