Advertisement

ಕುಂಜಿಬೆಟ್ಟು ಪರಿಸರ ರಸ್ತೆ ದಾಟಲು ಸಮಸ್ಯೆ; ಮೇಲ್ಸೇತುವೆ ನಿರ್ಮಾಣಕ್ಕೆ ಹೆಚ್ಚಿದ ಬೇಡಿಕೆ

10:12 PM Sep 07, 2020 | Team Udayavani |

ಉಡುಪಿ: ಮಲ್ಪೆ- ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿಯು ಉಡುಪಿ ನಗರದ ಹೃದಯಭಾಗದಿಂದ ಹಾದುಹೋಗುತ್ತಿದ್ದು ಡಿವೈಡರ್‌ನಲ್ಲಿ ಕಬ್ಬಿಣದ ಬೇಲಿ ಅಳವಡಿಸುವ ಕಾರ್ಯ ಈಗ ಭರದಿಂದ ಸಾಗಿದೆ. ಅಪಘಾತ ನಿಯಂತ್ರಣಕ್ಕೆ ಇದು ಪರಿಣಾಮಕಾರಿ ಯಾದರೂ ಜನರು ರಸ್ತೆ ದಾಟಲು ಸಾಧ್ಯವಿಲ್ಲದಾದ್ದರಿಂದ ಮೇಲ್ಸೇತುವೆ ನಿರ್ಮಾಣಕ್ಕೆ ಆಗ್ರಹ ಕೇಳಿಬಂದಿದೆ.

Advertisement

ಕುಂಜಿಬೆಟ್ಟು ಪರಿಸರದಲ್ಲಿ ಎರಡು ಶಾಲೆ, ನಾಲ್ಕು ಕಾಲೇಜುಗಳಿವೆ. ಒಟ್ಟು ಆರು ಶಿಕ್ಷಣ ಸಂಸ್ಥೆಯಲ್ಲಿ ಸುಮಾರು ಎರಡೂವರೆ ಸಾವಿರ ವಿದ್ಯಾರ್ಥಿಗಳಿದ್ದಾರೆ. ಶಾಲಾ ಕಾಲೇಜುಗಳು ಆರಂಭವಾಗುವಾಗ ಮತ್ತು ಬಿಡುವಾಗ ಇಲ್ಲಿ ದಟ್ಟನೆ ಹೆಚ್ಚು. ವಿದ್ಯಾರ್ಥಿಗಳು ಬಸ್‌ಗಳಿಂದ ಇಳಿದು ಶಾಲಾ, ಕಾಲೇಜುಗಳತ್ತ ಚಲಿಸುತ್ತಾರೆ. ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ ಧುತ್ತನೆ ರಸ್ತೆ ಮೇಲೆ ಧಾವಿಸುವ ವಿದ್ಯಾರ್ಥಿಗಳಿಂದ ವಾಹನ ಚಾಲಕರು, ಸವಾರರು ಅಪಘಾತ ಎದುರಿಸಿದ್ದಾರೆ. ಈ ದೃಷ್ಟಿಯಿಂದ ಈ ಬೇಲಿಗಳು ಸುರಕ್ಷಿತ. ಆದರೆ…

ಟ್ರಾಫಿಕ್‌ ದಟ್ಟನೆ ಸಾಧ್ಯತೆ
ಕುಂಜಿಬೆಟ್ಟು ಪರಿಸರದಲ್ಲಿ ಎಂಜಿಎಂ ಕಾಲೇಜಿನ ನೂತನ ಕಟ್ಟಡದ ಎದುರು ರಸ್ತೆ ದಾಟಲು ಅವಕಾಶವಿದೆ. ಬೆಳಗ್ಗೆ-ಸಂಜೆ ವೇಳೆ ನೂರಾರು ವಿದ್ಯಾರ್ಥಿಗಳು, ಜನರು ರಸ್ತೆ ದಾಟುವುದರಿಂದ ಟ್ರಾಫಿಕ್‌ ದಟ್ಟನೆ ಸಾಧ್ಯತೆ ಇದೆ. ಇಲ್ಲಿ ಸೂಕ್ತವಾಗಿ ಝೀಬ್ರಾ ಕ್ರಾಸ್‌ ಕೂಡ ಬೇಕಾಗಿದೆ. ಟ್ರಾಫಿಕ್‌ ನಿರ್ವಹಣೆ ದೃಷ್ಟಿಯಿಂದ ಸಂಚಾರ ಠಾಣೆಯ ಪೊಲೀಸರ ಆವಶ್ಯಕತೆಯೂ ಅಗತ್ಯವಿದೆ.

ಮೇಲ್ಸೇತುವೆ ಬೇಡಿಕೆ
ರಾ.ಹೆ.ಯ ಮಾರ್ಗಸೂಚಿಯಂತೆ ಇದೀಗ ರಸ್ತೆ ದಾಟದಂತೆ ತಡೆಬೇಲಿ ನಿರ್ಮಿಸಿದ್ದೂ ಸ್ವಾಗತವಾದರೂ ಭವಿಷ್ಯ ದಲ್ಲಿ ಇದು ಸಮಸ್ಯೆಯಾಗಿಯೇ ಉಳಿಯ ಲಿದೆ. ಹಾಗಾಗಿ ಪಾದಚಾರಿಗಳಿಗೆ ಮೇಲ್ಸೇ ತುವೆಯೊಂದೇ ಪರಿಹಾರವೆಂದು ಕಾಣುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ, ರಾ.ಹೆ. ನಿರ್ಮಾಣ ಇಲಾಖೆಯವರು ಗಂಭೀರ ವಾಗಿ ಚಿಂತಿಸಿ, ಪರಿಹಾರ ಕಂಡುಕೊಳ್ಳುವ ಅನಿವಾರ್ಯವಿದೆ.

ಮೇಲ್ಸೇತುವೆಯಿಂದ ಪರಿಹಾರ
ಸುತ್ತು ಬಳಸಿ ಸಂಚರಿಸುವುದು ವಿಳಂಬವಾದರೂ ಸುರಕ್ಷತೆಯ ದೃಷ್ಟಿಯಿಂದ ಕಬ್ಬಿಣದ ತಡೆಬೇಲಿ ನಿರ್ಮಾಣ ಉತ್ತಮ ಪರಿಹಾರ. ಏಕಕಾಲದಲ್ಲಿ ವಿದ್ಯಾರ್ಥಿಗಳು ರಸ್ತೆ ದಾಟುವುದು, ವಾಹನಗಳ ಸಂಚಾರದಿಂದಾಗಿ ಹೆದ್ದಾರಿಯಲ್ಲಿ ಟ್ರಾಫಿಕ್‌ ದಟ್ಟನೆಯೂ ಉಂಟಾಗುವ ಸಾಧ್ಯತೆಗಳಿವೆ. ಆಯಕಟ್ಟಿನ ಸ್ಥಳಗಳಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಿದರೆ ಟ್ರಾಫಿಕ್‌ ಸಮಸ್ಯೆಗೆ ಕಡಿವಾಣ ಬೀಳಲಿದೆ.
-ಡಾ| ದೇವಿದಾಸ್‌ ನಾಯ್ಕ, ಪ್ರಾಂಶುಪಾಲರು, ಎಂಜಿಎಂ ಕಾಲೇಜು

Advertisement
Advertisement

Udayavani is now on Telegram. Click here to join our channel and stay updated with the latest news.

Next