Advertisement
ಇಲ್ಲಿನ ಒಂದು ಪ್ರದೇಶ ಕಿನ್ನಿಗೋಳಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುತ್ತಿದೆ.ಆದರೆ ಈ ಪ್ರದೇಶದಲ್ಲಿ ತ್ಯಾಜ್ಯ ರಾಶಿ ಬಿದ್ದಿದ್ದು,ಪಂಚಾಯತ್‌ಗೆ ಸಮಸ್ಯೆಯಾಗಿದೆ. ಅನತಿ ದೂರದಲ್ಲಿ ಬಹು ಮಹಡಿಯ ಕಟ್ಟಡಗಳು ಹಾಗೂ ಕಿನ್ನಿಗೋಳಿ ಪೇಟೆಯ ಅಂಗಡಿ ಮುಂಗಟ್ಟುಗಳ ಕಸವನ್ನು ಇಲ್ಲಿ ತಂದು ಬಿಸಾಡಲಾಗುತ್ತಿದೆ ಎನ್ನಲಾಗುತ್ತಿದೆ.
Related Articles
ಎಸ್‌ಕೋಡಿಯಲ್ಲಿ ವಾಸುದೇವ ಅಗ್ರಹಾರದಲ್ಲಿ 100 ಮನೆಗಳಿದ್ದು, ಗ್ರಾಮ ಪಂಚಾಯತ್‌ಗೆ ವರ್ಷಕ್ಕೆ ಕಸದ ವೀಲೆವಾರಿಗೆ 365 ರೂ. ಕಟ್ಟುತಿದ್ದಾರೆ. ಆದರೂ ತ್ಯಾಜ್ಯ ವಿಲೇವಾರಿ ಸಮಸ್ಯೆ ಪರಿಹಾರ ಆಗಿಲ್ಲ. ಅದಲ್ಲದೆ ಇಲ್ಲಿಗೆ ಪಂಚಾಯತ್ ವಾಹನವಾಗಲಿ ಬರುತ್ತಿಲ್ಲ. ಮಳೆಗಾಲ ಆರಂಭವಾಗಿರುವುದರಿಂದ ಪ್ಲಾಸ್ಟಿಕ್‌ನೊ ಳಗೆ ಇದ್ದ ಕೆಲವು ತ್ಯಾಜ್ಯಗಳು ಕೊಳೆತು ದುರ್ನಾತ ಆರಂಭವಾಗಿದ್ದು, ಸೊಳ್ಳೆ ಉಪಟಳ ಪ್ರಾರಂಭವಾಗಿದೆ. ಇದು ಸಾಂಕ್ರಾಮಿಕ ರೋಗಕ್ಕೂ ಕಾರಣ ಆಗಬಹುದು ಎಂಬುದು ಸ್ಥಳೀಯರ ಭೀತಿಯಾಗಿದೆ.
Advertisement
ಸೂಕ್ತ ಕ್ರಮಕಿನ್ನಿಗೋಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಮ್ರಾಲ್ ಪಂಚಾಯತ್ ಪರಿಸರ ಗಡಿಭಾಗವಿದ್ದು, ತ್ಯಾಜ್ಯ ತಂದು ಸುರಿಯವ ಪರಿಪಾಠ ಕೆಲವು ಸಮಯದಿಂದ ನಡೆಯುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
- ಅರುಣ್ ಪ್ರದೀಪ್ ಡಿ’ಸೋಜಾ, ಪಿಡಿಒ,ಕಿನ್ನಿಗೋಳಿ ಗ್ರಾಮ ಪಂಚಾಯತ್