Advertisement

ಚೈತನ್ಯ ಬ್ಯಾಂಕ್‌ ವಿರುದ್ದ ತನಿಖೆಗೆ ಆಗ್ರಹ

03:49 PM May 17, 2022 | Shwetha M |

ವಿಜಯಪುರ: ನಗರದ ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ್‌ನಿಂದ ಮಹಿಳಾ ಸಂಘಟನೆಗಳಿಗೆ ವಂಚನೆಯಾಗುತ್ತಿದೆ. ಅಲ್ಲದೇ ಬ್ಯಾಂಕ್‌ ನಲ್ಲೂ ಅವ್ಯವಹಾರ ನಡೆಯುತ್ತಿದೆ. ಈ ಬಗ್ಗೆ ಕೂಡಲೇ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

Advertisement

ನಗರದ ಡಾ| ಬಿ.ಆರ್‌.ಅಂಬೇಡ್ಕರ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಅವರಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾ ಸಂಚಾಲಕ ವಿನಾಯಕ ಗುಣಸಾಗರ ಹಾಗೂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯಅಶೋಕ ಚಲವಾದಿ ಮಾತನಾಡಿ, ಚೈತನ್ಯ ಬ್ಯಾಂಕ್‌ನಿಂದಾಗುತ್ತಿರುವ ಮೋಸ-ಅನ್ಯಾಯ ಪ್ರಶ್ನಿಸಿದರೆ ಬ್ಯಾಂಕ್‌ ಅಧಿಕಾರಿ-ಸಿಬ್ಬಂದಿ ದಬ್ಟಾಳಿಕೆ ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಮಹಿಳಾ ಸಂಘಗಳಿಗೆ ಸಾಲ ನೀಡಿ, ಮರು ಪಾವತಿ ವಿಷಯದಲ್ಲಿ ಭಾರಿ ಪ್ರಮಾಣದಲ್ಲಿ ವಂಚನೆ ಮಾಡಲಾಗುತ್ತಿದೆ ಎಂದು ದೂರಿದರು.

ದಸಂಸ ಸಂಚಾಲಕ ಸಿದ್ದು ರಾಯಣ್ಣವರ ಮಾತನಾಡಿ, ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ್‌ನ ಎಲ್ಲ ವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಗ್ರಾಮೀಣ ಮಹಿಳೆಯರಿಗೆ ವಂಚಿಸಿರುವ ಎಲ್ಲ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ತವರುಮನೆ ಮಹಿಳಾ ಸಂಸ್ಥೆ ಅಧ್ಯಕ್ಷೆ ಮಂಜುಳಾ ಮ್ಯಾಗೇರಿ, ಶರಣು ಶಿಂಧೆ, ರಮೇಶ ಧರಣಾಕರ, ಪರಶುರಾಮ ದಿಂಡವಾರ, ವಿಜಯಕುಮಾರ ಕಾಂಬಳೆ, ಪ್ರಕಾಶ ಗುಡಿಮನಿ, ಕವಿತಾ ಹಿರೇಮಠ, ಸುನಿತಾ ಭಜಂತ್ರಿ, ಪವಿತ್ರಾ ಶೀಲವಂತ, ಸವಿತಾ ಯಳವಾರ, ಗಿರಿಜಾ ಚಿರಲದಿನ್ನಿ, ಶಶಿಕಲಾ ಮ್ಯಾಗೇರಿ, ರತ್ನಾ ಮ್ಯಾಗೇಶಿ, ರಜಿಯಾ ಅತ್ತಾರ, ರೇಣುಕಾ ಚಿರಲದಿನ್ನಿ, ಮಲಕಮ್ಮ ಪಾಟೀಲ ಸೇರಿದಂತೆ ಇನ್ನಿತರರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next