ಕಲಬುರಗಿ: ನರಗದ ರಾಮಮಂದಿರ ಬಳಿ ತರಬೇತಿ ನಿರತ ಪಿಎಸ್‌ಐವೊರ್ವರು ರಸ್ತೆಯಲ್ಲೇ ಬಿದ್ದು ಪ್ರಾಣ ಬಿಟ್ಟ ಘಟನೆ ಭಾನುವಾರ ನಡೆದಿದೆ.
ಮೃತ ಪಿಎಸ್‌ಐ ಬಸವರಾಜ ಶಂಕರಪ್ಪ ಮಂಚೆನ್ನವರ(27) ಎನ್ನುವವರಾಗಿದ್ದು, ಸೇಡಂ ತಾಲೂಕಿನ ಬೆನಕನಹಳ್ಳಿಯ ನಿವಾಸಿ ಎಂದು ತಿಳಿದು ಬಂದಿದೆ.
ರಸ್ತೆಯಲ್ಲಿ ಕಾಂಪ್ಲೆಕ್ಸ್ ಎದುರು ಬಸವರಾಜ ಅವರು ಬಿದ್ದಿದ್ದ ರು. ಸಾರ್ವಜನಿಕರು ಕುಡಿದು ಬಿದ್ದ ವ್ಯಕ್ತಿಯೆಂದು ತಿಳಿದು ಎತ್ತಲು ಹೋಗಿರಲಿಲ್ಲ. ಪರಿಣಾಮ ರಸ್ತೆಯಲ್ಲೇ ಪ್ರಾಣ ಹಾರಿ ಹೋಗಿದೆ.
ಕಳೆದ 9 ತಿಂಗಳಿನಿಂದ ನಾಗನಹಳ್ಳಿ ತರಬೇತಿ ಕೇಂದ್ರದಲ್ಲಿ ತರಬೇತಿ ನಿರತರಾಗಿದ್ದರು.
ಅಶೋಕನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಮುಂದುವರಿದಿದೆ.
ಶನಿವಾರ ಸಂಜೆ ತರಬೇತಿ ಕೇಂದ್ರದಿಂದ ಅನಾರೋಗ್ಯ ಎಂದು ಹೇಳಿ ಹೊರ ಹೋಗಿದ್ದರು ಎಂದು ತಿಳಿದು ಬಂದಿದೆ.
ಯಾವ ಕಾರಣಕ್ಕಾಗಿ ಬಸವರಾಜ್ ಸಾವನ್ನಪ್ಪಿದ್ದಾರೆ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ.