Advertisement

ಪ್ರೊ ವಾಲಿಬಾಲ್‌: ಚೆನ್ನೈ ಚಾಂಪಿಯನ್‌

12:30 AM Feb 23, 2019 | Team Udayavani |

ಚೆನ್ನೈ: ಆತಿಥೇಯ ಚೆನ್ನೈ ಸ್ಪಾರ್ಟನ್ಸ್‌ ಮೊದಲ ಆವೃತ್ತಿಯ ಪ್ರೊ ವಾಲಿಬಾಲ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಶುಕ್ರವಾರ ನಡೆದ ಪ್ರಶಸ್ತಿ ಕಾಳಗದಲ್ಲಿ ಅದು ಕೂಟದ ಅಜೇಯ ತಂಡವಾದ ಕ್ಯಾಲಿಕಟ್‌ ಹೀರೋಸ್‌ ವಿರುದ್ಧ 3 ನೇರ ಸೆಟ್‌ಗಳ ಜಯ ಸಾಧಿಸಿ ಕಿರೀಟ ಏರಿಸಿಕೊಂಡಿತು. ಕ್ಯಾಲಿಕಟ್‌ ಹೀರೋಸ್‌ ಲೀಗ್‌ ಹಂತದಲ್ಲಿ ಆಡಿದ ಐದೂ ಪಂದ್ಯಗಳನ್ನು ಗೆದ್ದು ಕೂಟದ ನೆಚ್ಚಿನ ತಂಡವಾಗಿ ಹೊರಹೊಮ್ಮಿತ್ತು. ಆದರೆ ಚೆನ್ನೈ ಸ್ಪಾರ್ಟನ್ಸ್‌ ಲೀಗ್‌ ಹಂತದಲ್ಲಿ ಮೂರನ್ನು ಸೋತು, ಎರಡನ್ನಷ್ಟೇ ಗೆದ್ದು 4 ಅಂಕಗಳೊಂದಿಗೆ ನಾಕೌಟ್‌ ಪ್ರವೇಶಿಸಿತ್ತು. ತೀವ್ರ ಪೈಪೋಟಿಯಿಂದ ಕೂಡಿದ ಫೈನಲ್‌ನಲ್ಲಿ ಚೆನ್ನೈ 15-11, 15-12, 16-14 ಅಂಕಗಳಿಂದ ಕ್ಯಾಲಿಕಟ್‌ ಆಟ ಮುಗಿಸಿತು. ರುಡಿ ವೆರೋಫ್ 13 ಅಂಕಗಳೊಂದಿಗೆ ಚೆನ್ನೈ ಗೆಲುವಿನ ರೂವಾರಿಯಾಗಿ ಮೂಡಿಬಂದರು. ನವೀನ್‌ ರಾಜ ಜೇಕಬ್‌ 8 ಅಂಕ ತಂದಿತ್ತರು.

Advertisement

ನಾಯಕ ಜೆರೋಮ್‌ ವಿನೀತ್‌ ವೈಫ‌ಲ್ಯ (5 ಅಂಕ) ಕ್ಯಾಲಿಕಟ್‌ ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿತು. ಅಜಿತ್‌ ಲಾಲ್‌ ಸರ್ವಾಧಿಕ 9 ಅಂಕ, ಪೌಲ್‌ ಲೋಟನ್‌ 6 ಅಂಕ ಗಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next