Advertisement

ಪ್ರೊ ವಾಲಿಬಾಲ್ : ಕ್ಯಾಲಿಕಟ್‌ ಫೈನಲ್‌ ಪ್ರವೇಶ

05:21 AM Feb 20, 2019 | |

ಚೆನ್ನೈ: ಪ್ರೊ ವಾಲಿಬಾಲ್‌ ಪಂದ್ಯಾವಳಿಯಲ್ಲಿ ಕ್ಯಾಲಿಕಟ್‌ ಹೀರೋ ಅಜೇಯ ಓಟವನ್ನು ಮುಂದುವರಿಸಿ ಉದ್ಘಾಟನಾ ಆವೃತ್ತಿಯ ಫೈನಲ್‌ ಪ್ರವೇಶಿಸಿದೆ.

Advertisement

ಮಂಗಳವಾರ ನಡೆದ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಕ್ಯಾಲಿಕಟ್‌ ತಂಡ ಯು ಮುಂಬಾ ವಾಲಿ ತಂಡವನ್ನು 3-0 ಅಂತರದಿಂದ ಸೋಲಿಸಿದೆ. ಒಟ್ಟು ಆರು ಪಂದ್ಯಗಳನ್ನು ಆಡಿರುವ ಕ್ಯಾಲಿಕಟ್‌ ಎಲ್ಲ ಪಂದ್ಯ ಗಳಲ್ಲೂ ಜಯಭೇರಿ ಬಾರಿಸಿದೆ. ಮೂರು ಸೆಟ್‌ಗಳನ್ನೂ ಕ್ಯಾಲಿಕಟ್‌ 15-12, 15-9, 16-14 ಸೆಟ್‌ಗಳ ಅಂತರದಿಂದ ಗೆದ್ದಿದೆ.  

ನಾಯಕ ಜೆರೊಮ್‌ ವಿನೀತ್‌  ಈ ಪಂದ್ಯದಲ್ಲೂ ಪಾರಮ್ಯ ಮೆರೆದು ಬೆಸ್ಟ್‌ ಸ್ಕೋರರ್‌ ಎನಿಸಿಕೊಂಡಿದ್ದಾರೆ. ಅವರು ಒಟ್ಟು 12 ಅಂಕಗಳನ್ನು ಸಂಪಾದಿಸಿ ತಂಡದ ಗೆಲುವಿಗೆ ಕಾರಣರಾದರು.

Advertisement

Udayavani is now on Telegram. Click here to join our channel and stay updated with the latest news.

Next