Advertisement

ಪಾಕಿಸ್ಥಾನ ಪರ ಪೋಸ್ಟ್‌ ; ಕ್ಷಮೆ ಕೋರಿದ ಪ್ರಾಧ್ಯಾಪಕ 

12:30 AM Mar 03, 2019 | Team Udayavani |

ವಿಜಯಪುರ: ಪಾಕ್‌ ಪ್ರಧಾನಿ ಇಮ್ರಾನ್‌ಖಾನ್‌ ಅವರು ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರನ್ನು ಭಾರತಕ್ಕೆ ಮರಳಿಸಿದ ಕ್ರಮವನ್ನು ಸಮರ್ಥಿಸಿದ ಪ್ರಾಧ್ಯಾಪಕರೊಬ್ಬರು ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ಪರಿಣಾಮ ಮಂಡಿಯೂರಿ ಕ್ಷಮೆ ಕೋರಿದ ಘಟನೆ ನಡೆದಿದೆ.

Advertisement

 ಫೇಸ್‌ ಬುಕ್‌ನಲ್ಲಿ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಪರ ಬಿಎಲ್‌ ಡಿಇ ಸಂಸ್ಥೆಯ ಎಂಜಿನಿಯರಿಂಗ್‌ ಕಾಲೇಜಿನ ಪ್ರಾಧ್ಯಾಪಕ ಸಂದೀಪ ವಠಾರ ಪೋಸ್ಟ್‌ ಶೇರ್‌ ಮಾಡಿದ್ದರು. ಇದನ್ನು ವಿರೋಧಿ ಸಿ ಶನಿವಾರ ಬೆಳಗ್ಗೆ ಎಬಿವಿಪಿ ಕಾರ್ಯಕರ್ತರು ಪ್ರಾಧ್ಯಾಪಕನ ವಿರುದಟಛಿ ಪ್ರತಿಭಟನೆ ನಡೆಸಿದ್ದಲ್ಲದೇ, ಮಂಡಿಯೂರಿ ಕೂರಿಸಿ ಕ್ಷಮೆಯಾಚಿಸುವಂತೆ ಮಾಡಿದರು.

ಗೃಹ ಸಚಿವ ಎಂ.ಬಿ. ಪಾಟೀಲ ಅಧ್ಯಕ್ಷತೆಯ ಬಿಎಲ್‌ಡಿಇ ಸಂಸ್ಥೆ ಪ್ರಾಧ್ಯಾಪಕನಿಂದ ಜರುಗಿದ ಘಟನೆಯ ಕುರಿತು ಸಂಸ್ಥೆ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಸಂಸ್ಥೆಯ ಸಾರ್ವಜನಿಕಸಂಪರ್ಕಾಧಿಕಾರಿ ಮಹಾಂತೇಶ ಬಿರಾದಾರ ಫೇಸ್‌ಬುಕ್‌ ಪೋಸ್ಟ್‌ ಹಾಗೂ ನಂತರದ ಘಟನೆ ಕುರಿತು ಸತ್ಯಾಸತ್ಯತೆ ಅರಿಯಲು ಎಸ್ಪಿ ಅವರಿಗೆ ದೂರು ನೀಡಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next