Advertisement

ಎ. 15ರ ತನಕ ಪ್ರೊ ಲೀಗ್‌ ಹಾಕಿ ಸ್ಥಗಿತ

10:41 PM Mar 14, 2020 | Sriram |

ಲುಸಾನ್ನೆ (ಸ್ವಿಜರ್‌ಲ್ಯಾಂಡ್‌): ಸದ್ಯ ನಡೆಯುತ್ತಿರುವ ಎಫ್ಐಎಚ್‌ ಪ್ರೊ ಲೀಗ್‌ ಹಾಕಿ ಪಂದ್ಯಾವಳಿಯನ್ನು ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್‌ (ಎಫ್ಐಎಚ್‌) ಎ. 15ರ ತನಕ ತಡೆಹಿಡಿದಿದೆ. ಕಾರಣ, ಕೊರೊನಾ!

Advertisement

“ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆ ಮೇರೆಗೆ ಹಾಗೂ ವಿಶ್ವದೆಲ್ಲ ಸರಕಾರಗಳು ವಿವಿಧ ಕ್ರೀಡಾಕೂಟಗಳನ್ನು ಮುಂದೂಡಿದ ಕಾರಣ ಎಫ್ಐಎಚ್‌ ಪ್ರೊ ಲೀಗ್‌ ಹಾಕಿ ಪಂದ್ಯಾವಳಿಯನ್ನು ಎ. 15ರ ತನಕ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ತತ್‌ಕ್ಷಣದಿಂದಲೇ ಈ ಆದೇಶ ಜಾರಿಗೆ ಬರಲಿದೆ’ ಎಂದು ಹಾಕಿ ಆಡಳಿತ ಸಂಸ್ಥೆ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

ಆದರೆ ಈ ಅವಧಿಯಲ್ಲಿ ಭಾರತದ ಯಾವುದೇ ಪಂದ್ಯಗಳಿಲ್ಲ. ಭಾರತ ತನ್ನ ಮುಂದಿನ ಪಂದ್ಯಗಳನ್ನು ಎ. 26ರಿಂದ ಜರ್ಮನಿ ವಿರುದ್ಧ ಬರ್ಲಿನ್‌ನಲ್ಲಿ ಆಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next