Advertisement

ಪ್ರೊ ಕಬಡ್ಡಿ: ನಾಳೆಯಿಂದ ಪ್ಲೇ-ಆಫ್ ಪೈಪೋಟಿ

12:30 AM Dec 29, 2018 | Team Udayavani |

ಕೊಚ್ಚಿ: ಪ್ರೊ ಕಬಡ್ಡಿ ಲೀಗ್‌ ಹಂತಕ್ಕೆ ಡಿಸೆಂಬರ್‌ ತೆರೆ ಬಿದ್ದಾಗಿದೆ. ಇನ್ನು ಪ್ಲೇ-ಆಫ್ ಕುತೂಹಲ. ಇದು ನಾಕೌಟ್‌ ಹಂತದ ಇನ್ನೊಂದು ರೂಪ. ವ್ಯತ್ಯಾಸವಿಷ್ಟೇ, ಕ್ವಾಲಿಫೈಯರ್‌-1ರಲ್ಲಿ ಆಡಿ ಸೋತ ತಂಡಕ್ಕೆ ಫೈನಲ್‌ಗೆ ಏರಲು ಇನ್ನೊಂದು ಅವಕಾಶ ಸಿಗಲಿದೆ. ಡಿ. 30ರಂದು ಪ್ಲೇ ಆಫ್ ಹಂತ ಶುರುವಾಗಲಿದೆ. ಕೊಚ್ಚಿಯಲ್ಲಿ ನಡೆಯುವ ಮೊದಲ ಎಲಿಮಿನೇಟರ್‌ ಪಂದ್ಯದಲ್ಲಿ ಯು ಮುಂಬಾ-ಯುಪಿ ಯೋಧ ಆಡುವ ಮೂಲಕ ಈ ಬಾರಿ ಪ್ರೊ ಕಬಡ್ಡಿಯ ಅಂತಿಮ ಹಂತ ಶುರುವಾಗಲಿದೆ.

Advertisement

ಪ್ಲೇ ಆಫ್ ವಿಧಾನ
ಫೈನಲ್‌ ಆಡುವ ಎರಡು ತಂಡಗಳನ್ನು ನಿರ್ಧರಿಸಲು, ಫೈನಲ್‌ಗ‌ೂ ಮುನ್ನ 5 ಪಂದ್ಯಗಳನ್ನು ಆಡಿಸಲಾಗುತ್ತದೆ. 3 ಎಲಿಮಿನೇಟರ್‌ ಪಂದ್ಯಗಳಿರುತ್ತವೆ. ಮೊದಲೆರಡು ಎಲಿಮಿನೇಟರ್‌ನಲ್ಲಿ ಸೋತ ತಂಡಗಳ ಬಾಗಿಲು ಮುಚ್ಚುತ್ತದೆ. ಗೆದ್ದ ಎರಡು ತಂಡಗಳು 3ನೇ ಎಲಿಮಿನೇಟರ್‌ನಲ್ಲಿ ಆಡುತ್ತವೆ. ಇಲ್ಲಿ ಗೆದ್ದ ತಂಡ ಹಾಗೂ ಕ್ವಾಲಿಫೈಯರ್‌ 1ರಲ್ಲಿ ಸೋತ ತಂಡದ ನಡುವೆ ಕ್ವಾಲಿಫೈಯರ್‌ 2 ನಡೆಯುತ್ತದೆ. ಗೆದ್ದ ತಂಡ ಫೈನಲ್‌ಗೇರುತ್ತದೆ. ಕ್ವಾಲಿಫೈಯರ್‌ 1ರಲ್ಲಿ ಗೆದ್ದ ತಂಡ ಮೊದಲೇ ಫೈನಲ್‌ಗೇರಿರುತ್ತದೆ. ಅಂತಿಮವಾಗಿ ಕ್ವಾಲಿಫೈಯರ್‌ 1-2ರಲ್ಲಿ ಗೆದ್ದ ತಂಡಗಳ ನಡುವೆ ಫೈನಲ್‌ ನಡೆಯುತ್ತದೆ.

ಈ ಬಾರಿ ಬಿ ವಲಯದ ಅಗ್ರಸ್ಥಾನಿ ತಂಡ ಬೆಂಗಳೂರು ಬುಲ್ಸ್‌ ತಂಡ ಕ್ವಾಲಿಫೈಯರ್‌ 1ರಲ್ಲಿ ಆಡುವ ಅವಕಾಶ ಪಡೆದಿದೆ. ಡಿ. 31ರಂದು ಕೊಚ್ಚಿಯಲ್ಲಿ ನಡೆಯುವ ಮೊದಲ ಕ್ವಾಲಿಫೈಯರ್‌ನಲ್ಲಿ ಬೆಂಗಳೂರು ತಂಡ ಗುಜರಾತ್‌ ಫಾರ್ಚೂನ್‌ ಜೈಂಟ್ಸ್‌ ತಂಡವನ್ನು ಎದುರಿಸಲಿದೆ. ಗೆದ್ದರೆ ನೇರವಾಗಿ ಫೈನಲ್‌ಗೇರಲಿದೆ. ಸೋತರೆ ಕ್ವಾಲಿಫೈಯರ್‌ 2ರಲ್ಲಿ ಆಡಲಿದೆ. ಇಲ್ಲಿ ಗೆದ್ದರೂ ಅದು ಫೈನಲ್‌ಗೇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next