Advertisement

ಅ. 5ರಿಂದ ಪ್ರೊ ಕಬಡ್ಡಿ ಲೀಗ್‌

10:24 AM Jul 31, 2018 | Team Udayavani |

ಮುಂಬಯಿ: ಕ್ರೀಡಾಪ್ರೇಮಿಗಳು ಕಾತುರದಿಂದ ನಿರೀಕ್ಷಿಸುತ್ತಿರುವ ಪ್ರೊ ಕಬಡ್ಡಿಯ 6ನೇ ಆವೃತ್ತಿ ಅಕ್ಟೋಬರ್‌ 5ರಿಂದ ಮುಂದಿನ 2019ರ ಜನವರಿ 5ರ ವರೆಗೆ ನಡೆಯಲಿವೆ. ಮಶಾಲ್‌ ನ್ಪೋರ್ಟ್ಸ್ ಪ್ರೈ. ಲಿಮಿಟೆಡ್‌ ಪಂದ್ಯಾವಳಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

Advertisement

ಈ ಬಾರಿಯ ಪ್ರೊ ಕಬಡ್ಡಿಗೆ ನಾಲ್ಕು ಹೊಸ ತಂಡಗಳು ಸೇರ್ಪಡೆ ಗೊಂಡಿವೆ. ಇದರಿಂದ ತಂಡಗಳ ಸಂಖ್ಯೆ ಎಂಟರಿಂದ 12ಕ್ಕೆ ಏರಿದೆ. 13 ವಾರಗಳ ಕಾಲ ನಡೆಯುವ ಕಬಡ್ಡಿ ಕೂಟದಲ್ಲಿ ಒಟ್ಟು 138 ಪಂದ್ಯಗಳು ನೋಡುಗರ ಕಣ್ಮನ ತಣಿಸಲಿವೆ.

ವೇಳಾಪಟ್ಟಿ ಬದಲು
ಪ್ರತಿ ಬಾರಿಯಂತೆ ಈ ಬಾರಿಯೂ ಉತ್ತಮ ಜನಪ್ರಿಯತೆ ಪಡೆಯುವ ನಿರೀಕ್ಷೆ ಆಯೋಜಕರದ್ದು. ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ಪ್ರೊ ಕಬಡ್ಡಿ ಲೀಗ್‌ ಆಯುಕ್ತ ಅನುಪಮ್‌ ಗೋಸ್ವಾಮಿ, “ಸಾಮಾನ್ಯವಾಗಿ ಜುಲೈನಿಂದ ಅಕ್ಟೋಬರ್‌ ವರೆಗೆ ಪ್ರೊ ಕಬಡ್ಡಿ ನಡೆಸಲಾಗುತ್ತಿತ್ತು. ಆದರೆ ಈ ವರ್ಷ ಆಗಸ್ಟ್‌ನಲ್ಲಿ ಏಶ್ಯನ್‌ ಗೇಮ್ಸ್‌ ಇರುವುದರಿಂದ ದೇಶಿ ಹಾಗೂ ವಿದೇಶಿ ಆಟಗಾರರ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು ಈ ಬಾರಿಯ ಪ್ರೊ ಕಬಡ್ಡಿ ಲೀಗ್‌ ಕೂಟವನ್ನು ಅಕ್ಟೋಬರ್‌ನಿಂದ ಜನವರಿ ಆರಂಭದ ತನಕ ನಡೆಸಲು ತೀರ್ಮಾನಿಸಲಾಗಿದೆ. ವೇಳಾಪಟ್ಟಿ ಬದಲಾದರೂ ಜನರು ಈ ಕೂಟ ವನ್ನು ಬೆಂಬಲಿಸುತ್ತಾರೆಂಬ ನಿರೀಕ್ಷೆಯಿದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next