Advertisement
ಈಗಾಗಲೇ ನಾಕೌಟ್ ಸುತ್ತಿಗೆ ಅರ್ಹತೆ ಪಡೆದುಕೊಂಡಿರುವ ಗುಜರಾತ್ ತಂಡ ಬುಧವಾರ “ರಾಜೀವ್ ಗಾಂಧಿ ಒಳಾಂಗಣ ಕ್ರೀಡಾಂಗಣ’ದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಒತ್ತಡ ರಹಿತ ಆಟ ಪ್ರದರ್ಶಿಸಿತು. ಪ್ರಪಂಜನ್ಗೆ ತಂಡದ ಸಹ ಆಟಗಾರ ಸಚಿನ್ (10 ಅಂಕ) ಅತ್ಯುತ್ತಮ ಸಾಥ್ ನೀಡಿದರು. ಉಳಿದಂತೆ ಪರ್ವೇಶ್ (4 ಅಂಕ) ಟ್ಯಾಕಲ್ ನಡೆಸಿ ಮಿಂಚಿದರೆ, ಡಾಂಗ್ ಲೀ (4 ಅಂಕ) ರೈಡಿಂಗ್ನಿಂದ ತಂಡಕ್ಕೆ ನೆರವಾದರು. ಇವರೆಲ್ಲರ ಒಗ್ಗಟ್ಟಿನ ಆಟದಿಂದಾಗಿ ಗುಜರಾತ್ಗೆ ಬೃಹತ್ ಅಂಕ ಗಳಿಸಲು ಸಾಧ್ಯವಾಯಿತು. ಇದರೊಂದಿಗೆ ಗುಜರಾತ್ ತನ್ನ ಗೆಲುವನ್ನು 14ಕ್ಕೆ ವಿಸ್ತರಿದೆ. ಹರ್ಯಾಣ 13ನೇ ಸೋಲನುಭವಿಸಿತು.
ದಿನದ ದ್ವಿತೀಯ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವು ಆತಿಥೇಯ ತೆಲುಗು ಟೈಟಾನ್ಸ್ಗೆ 37-24 ಅಂಕಗಳ ಅಂತರದಿಂದ ಆಘಾತವಿಕ್ಕಿತು. ಇಂದಿನ ಪಂದ್ಯ
1. ತೆಲುಗು-ಪಾಟ್ನಾ
ಸ್ಥಳ: ವಿಶಾಖಪಟ್ಟಣ
ಆರಂಭ: ರಾತ್ರಿ 8.00