Advertisement

ಪ್ರೊ ಕಬಡ್ಡಿ : ಪಿಂಕ್‌ ಪ್ಯಾಂಥರ್ ತಂಡವನ್ನು ಮಣಿಸಿ ಮತ್ತೆ ಅಗ್ರಸ್ಥಾನಕ್ಕೆ ನೆಗೆದ ಬುಲ್ಸ್‌

11:04 PM Jan 06, 2022 | Team Udayavani |

ಬೆಂಗಳೂರು : ಬೆಂಗಳೂರು ಬುಲ್ಸ್‌ 5ನೇ ಗೆಲುವಿ ನೊಂದಿಗೆ ಮುನ್ನುಗ್ಗಿ ಮತ್ತೆ ಅಗ್ರಸ್ಥಾನ ಅಲಂಕರಿಸಿದೆ. ಗುರುವಾರದ ಪ್ರೊ ಕಬಡ್ಡಿ ಹಣಾಹಣಿಯಲ್ಲಿ ಬುಲ್ಸ್‌ ಪಡೆ ಜೈಪುರ್‌ ಪಿಂಕ್‌ ಪ್ಯಾಂಥರ್ ತಂಡವನ್ನು 38-31ಅಂಕಗಳಿಂದ ತಿವಿಯಿತು. ತಂಡದ ಅಂಕ 28ಕ್ಕೆ ಏರಿತು. ಪಾಟ್ನಾ-ತಮಿಳ್‌ ನಡುವೆ ನಡೆದ ದಿನದ ಮೊದಲ ಪಂದ್ಯ ಟೈ ಆಗಿತ್ತು.

Advertisement

ನಾಯಕ ಪವನ್‌ ಸೆಹ್ರಾವತ್‌ ಭರ್ಜರಿ ಆಟವಾಡಿ ಬೆಂಗಳೂರು ಬುಲ್ಸ್‌ ಗೆಲುವಿನ ಹೀರೋ ಆಗಿ ಮೆರೆದಾಡಿದರು. 28 ರೈಡ್‌ಗಳ ಮೂಲಕ 18 ಅಂಕ ತಂದು ಕೊಟ್ಟರು. 4 ಬೋನಸ್‌ ಅಂಕಗಳೂ ಇದರಲ್ಲಿ ಸೇರಿವೆ. ಇವರನ್ನು ಹೊರತುಪಡಿಸಿದರೆ ದೀಪಕ್‌ ನರ್ವಾಲ್‌ ಅವರದೇ ಉತ್ತಮ ಸಾಧನೆ (4 ಅಂಕ).

ಜೈಪುರ್‌ ತಂಡದಲ್ಲಿ ಮಿಂಚಿದವರು ರೈಡರ್‌ ಅರ್ಜುನ್‌ ದೇಶ್ವಾಲ್‌ (13 ಅಂಕ). 6 ಪಂದ್ಯಗಳಲ್ಲಿ ಜೈಪುರಕ್ಕೆ ಎದುರಾದ 4ನೇ ಸೋಲು ಇದಾಗಿದೆ.

ಪಾಟ್ನಾ-ತಮಿಳ್‌ ಟೈ
ಪಾಟ್ನಾ ಪೈರೆಟ್ಸ್‌ ಹ್ಯಾಟ್ರಿಕ್‌ ಜಯದೊಂದಿಗೆ ತಮಿಳ್‌ ತಲೈವಾಸ್‌ ತಂಡವನ್ನು ಎದುರಿಸಲಿಳಿದಿತ್ತು. ಆದರೆ ಕೊನೆಯ ಹಂತದಲ್ಲಿ ಗೆಲುವನ್ನು ತಪ್ಪಿಸಿಕೊಂಡಿತು. ಇದು ಪಾಟ್ನಾ ದಾಖಲಿಸಿದ ಮೊದಲ ಟೈ ಫ‌ಲಿತಾಂಶ. ಹಾಗೆಯೇ ತಮಿಳ್‌ ತನ್ನ ಅಜೇಯ ಓಟವನ್ನು 5 ಪಂದ್ಯಗಳಿಗೆ ವಿಸ್ತರಿಸಿತು.

ಇದನ್ನೂ ಓದಿ : ಭುವನೇಶ್ವರ: ಮೊಬೈಲ್‌ ಟವರ್‌ ಉದ್ಘಾಟನೆಗೆ ಬಂದ ಶಾಸಕರಿಗೇ ಶಾಕ್‌ ನೀಡಿದ ಗ್ರಾಮಸ್ಥರು !

Advertisement

ಪಾಟ್ನಾ ಪರ ರೈಡರ್‌ಗಳಾದ ಮೋನು ಗೋಯತ್‌ (9 ಅಂಕ) ಮತ್ತು ಪ್ರಶಾಂತ್‌ ಕುಮಾರ್‌ (7 ಅಂಕ) ಅಮೋಘ ಪ್ರದರ್ಶನವಿತ್ತರು. ತಮಿಳ್‌ ತಂಡದ ಬದಲಿ ರೈಡರ್‌ ಆಗಿ ಬಂದ ಅಜಿಂಕ್ಯ ಪವಾರ್‌ ಮಿಂಚಿನ ಆಟವಾಡಿ 12 ಅಂಕ ಗಳಿಸಿ ಕೊಟ್ಟರು. ಜತೆಗೆ ಅತುಲ್‌ ಎಂ.ಎಸ್‌. (6 ಅಂಕ), ನಾಯಕ ಸುರ್ಜೀತ್‌ ಸಿಂಗ್‌ (4 ಅಂಕ) ಮತ್ತು ಆಲ್‌ರೌಂಡರ್‌ ಸಾಗರ್‌ ಕೃಷ್ಣ (3 ಅಂಕ) ಕೂಡ ಗಮನ ಸೆಳೆದರು. ಅತುಲ್‌ ಸಾಹಸದಿಂದ 30ನೇ ಅಂಕ ಸಂಪಾದಿಸಿದ ತಮಿಳ್‌ ಸೋಲಿನಿಂದ ಪಾರಾಯಿತು.

Advertisement

Udayavani is now on Telegram. Click here to join our channel and stay updated with the latest news.

Next