Advertisement
ಈ ಪಂದ್ಯ ಏಕಪಕ್ಷೀಯವಾಗಿ ಸಾಗಿದರೆ, ದ್ವಿತೀಯ ಮುಖಾಮುಖೀ ತೀವ್ರ ಪೈಪೋಟಿಯಿಂದ ಕೂಡಿತ್ತು. ಆದರೆ ದಬಾಂಗ್ ಡೆಲ್ಲಿ ವಿರುದ್ಧದ ಈ ಪಂದ್ಯವನ್ನು ಆತಿಥೇಯ ತೆಲುಗು ಟೈಟಾನ್ಸ್ 34-33ರಿಂದ ಕಳೆದುಕೊಂಡು ಹ್ಯಾಟ್ರಿಕ್ ಸೋಲಿಗೆ ತುತ್ತಾಯಿತು.
ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರಂಭದಿಂದಲೇ ಯುಪಿ ಯೋಧಾ ಮೇಲೆ ಬೆಂಗಾಲ್ ಸವಾರಿ ಮಾಡಲು ಆರಂಭಿಸಿತು. ಅದರಲ್ಲೂ ರೈಡರ್‌ಗಳಾದ ಮೊಹಮ್ಮದ್ ನಬಿಭಕ್Ò, ಮಣಿಂದರ್ ಸಿಂಗ್ ಮತ್ತು ಕೆ. ಪ್ರಪಂಜನ್ ಶ್ರೇಷ್ಠ ದಾಳಿ ಸಂಘಟಿಸುವ ಮೂಲಕ ಯೋಧಾಕ್ಕೆ ಆರಂಭದಲ್ಲೇ ನಡುಕ ಹುಟ್ಟಿಸಿದರು. ನಬಿಭಕ್Ò 11 ರೈಡಿಂಗ್ ನಡೆಸಿ 10 ಟಚ್ ಪಾಯಿಂಟ್ ತಂದರು. ಬಹುತೇಕ ಎಲ್ಲ ಸಲವೂ ಅಂಕ ತರುವಲ್ಲಿ ನಬಿಭಕ್Ò ಸಫಲರಾದರು. ಮತ್ತೂಬ್ಬ ತಾರಾ ರೈಡರ್ ಮಣಿಂದರ್ ಸಿಂಗ್ 13 ರೈಡಿಂಗ್‌ನಿಂದ 9 ಅಂಕ ತಂದು ಬೆಂಗಾಲ್ ಪರ ರೈಡಿಂಗ್‌ನಿಂದ ಅತ್ಯಧಿಕ ಅಂಕ ಗಳಿಸಿದ 2ನೇ ಆಟಗಾರನೆನಿಸಿದರು. ಪ್ರಪಂಜನ್ ರೈಡಿಂಗ್‌ನಿಂದ 5 ಅಂಕ ತಂದರು.
Related Articles
Advertisement
ಯುಪಿ ಸೋಲಿನ ಆರಂಭಯುಪಿ ಯೋಧಾ ತಂಡದ ತಾರಾ ಆಟಗಾರರ್ಯಾರೂ ದಿಟ್ಟ ಪ್ರದರ್ಶನ ನೀಡಲಿಲ್ಲ. ಪ್ರಮುಖ ರೈಡರ್ ಮೋನು ಗೊಯತ್ ತಂದಿದ್ದು 6 ಅಂಕ ಮಾತ್ರ. ಒಟ್ಟು 14 ಸಲ ಎದುರಾಳಿ ಕೋಟೆಗೆ ನುಗ್ಗಿದರೂ 5 ಸಲ ಖಾಲಿ ಕೈಯಿಂದ ವಾಪಸ್ ಆದರು. ಸುರೇಂದ್ರ ಸಿಂಗ್ ಅವರಿಂದ 3 ಅಂಕ ಪಡೆಯಲಷ್ಟೇ ಸಾಧ್ಯವಾಯಿತು. ನಿತೇಶ್ ಟ್ಯಾಕ್ಲಿಂಗ್ ಕೇವಲ 2 ಅಂಕಕ್ಕೆ ಮಾತ್ರ ಸೀಮಿತವಾಯಿತು. ಅಮಿತ್, ನರೇಂದ್ರ, ನಿರೀಕ್ಷೆ ಮೂಡಿಸಿದ್ದ ಶ್ರೀಕಾಂತ್ ಜಾಧವ್, ಸಚಿನ್ ಕುಮಾರ್ ಸಮಯಕ್ಕೆ ಸರಿಯಾಗಿ ತಂಡದ ನೆರವಿಗೆ ಬರಲಿಲ್ಲ. ಗಂಭೀರ್ ರಾಯಭಾರಿ
ಪ್ರೊ ಕಬಡ್ಡಿ 7ನೇ ಆವೃತ್ತಿಯಲ್ಲಿ ಆಡುತ್ತಿರುವ ಯುಪಿ ಯೋಧಾ ತಂಡಕ್ಕೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. “ಯೋಧಾ ತಂಡಕ್ಕೆ ರಾಯಭಾರಿಯಾಗಿ ಆಯ್ಕೆಯಾಗಿರುವುದಕ್ಕೆ ಸಂತೋಷವಾಗುತ್ತಿದೆ. ನನ್ನ ಜೀವನದಲ್ಲಿ ಎಂದೂ ಸತ್ತವರಂತೆ ಇರುವುದನ್ನು ಬಯಸುವುದಿಲ್ಲ. ಸೋಲನ್ನು ಎದುರಿಸಿ ಗೆಲ್ಲುವುದರ ಕಡೆಗೆ ಚಿಂತಿಸುತ್ತಿದ್ದೆ. ಇಂತಹುದನ್ನೇ ಯುಪಿ ತಂಡದಿಂದಲೂ ನಿರೀಕ್ಷಿಸುವೆ’ ಎಂದು ಗಂಭೀರ್ ತಿಳಿಸಿದ್ದಾರೆ.