Advertisement

ಹಳ್ಳಿ ಯುವಕನ ಪ್ರೋ ಕಬಡ್ಡಿ ಯಾನ: ಆರ್ಥಿಕ ಬಡತನ ಮೆಟ್ಟಿ ನಿಂತ ಸಚಿನ್ ‘ಯು ಮುಂಬಾ’ಪರ ಆಟ

11:33 AM Dec 23, 2021 | Team Udayavani |

ಸುಳ್ಯ: ಆರ್ಥಿಕ ಬಡತನವಿದ್ದರೂ ಪ್ರತಿಭೆಗೆ ಬಡತನವಿಲ್ಲ. ಇದಕ್ಕೆ ನಿದರ್ಶನ, ಈ ಹಳ್ಳಿ ಯುವಕ. ಕಳೆದ ಬಾರಿಯ ಭಾರತ ಕಬಡ್ಡಿ ತಂಡದ ಸಂಭಾವ್ಯ ಆಟಗಾರರ ಯಾದಿಯಲ್ಲಿ ಸ್ಥಾನ ಪಡೆದ ಕರ್ನಾಟಕದ ಏಕೈಕ ಕಬಡ್ಡಿ ಪಟುವಾಗಿದ್ದ ಐವರ್ನಾಡು ಗ್ರಾಮದ ಪಾಲೆಪ್ಪಾಡಿಯ ಸಚಿನ್‌ ಪ್ರತಾಪ್‌ ಈ ಬಾರಿ ಫ್ರೋ ಕಬಡ್ಡಿ ಪಂದ್ಯಾಟದಲ್ಲಿ ಯು ಮುಂಬಾ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗುವ ಮೂಲಕ ಸಾಧನೆ ಮೆರೆದಿದ್ದಾರೆ.

Advertisement

ಅತ್ಯುತ್ತಮ ರೈಡರ್‌

ಈಗಾಗಲೇ 50ಕ್ಕೂ ಅಧಿಕ ರಾಜ್ಯ ಮಟ್ಟದ ಕ್ರೀಡಾಕೂಟ, ದಕ್ಷಿಣ ವಲಯ ಕಬಡ್ಡಿ ಕೂಟದಲ್ಲಿ ಭಾಗವಹಿಸಿರುವ ಪ್ರತಾಪ್‌ ಸೀನಿಯರ್‌ ರಾಷ್ಟ್ರೀಯ ಕಬಡ್ಡಿ ಕೂಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ಆ ಪಂದ್ಯಾವಳಿಯಲ್ಲಿ ರಾಜ್ಯ ತಂಡ ಕ್ವಾರ್ಟರ್‌ ಪೈನಲ್‌ನಲ್ಲಿ ಪರಾಭವಗೊಂಡರೂ, ಪ್ರತಾಪ್‌ ಎರಡು ಪಂದ್ಯಗಳಲ್ಲಿ “ಅತ್ಯುತ್ತಮ ರೈಡರ್‌’ ಎನಿಸಿಕೊಂಡಿದ್ದರು. ಅಲ್ಲಿನ ಪ್ರದರ್ಶನ ಇವರನ್ನು ಭಾರತ ತಂಡದ ಕದ ತಟ್ಟುವಂತೆ ಮಾಡಿದೆ. ಜತೆಗೆ ಪ್ರೊ ಕಬಡ್ಡಿ ಹರಾಜು ಬಿಡ್ಡಿಂಗ್‌ನಲ್ಲೂ ಪಾಲ್ಗೊಳ್ಳಲು ಅರ್ಹತೆ ಪಡೆದಿದ್ದರು. ಹರಾಜಿನಲ್ಲಿ ಯು ಮುಂಬಾ ತಂಡವು ಸಚಿನ್ ಪ್ರತಾಪ್ ಅವರನ್ನು ಖರೀದಿ ಮಾಡಿತ್ತು.

ಕೆಎಫ್ಡಿಸಿ ನೌಕರರಾದ ಸುಂದರಲಿಂಗಂ ಮತ್ತು ವಲ್ಲಿ ದಂಪತಿಯ ಮೂವರು ಮಕ್ಕಳಲ್ಲಿ ಸಚಿನ್‌ ಪ್ರತಾಪ್‌ ಎರಡನೆಯವರು. ಮನೆಯಲ್ಲಿ ಆರ್ಥಿಕ ಬಡತನವಿದ್ದರೂ, ಕಬಡ್ಡಿ ಆಟಗಾರರಾಗಬೇಕೆಂಬ ಆಸಕ್ತಿಗೆ ಹೆತ್ತವರು, ಬಂಧುಗಳು ಪ್ರೋತ್ಸಾಹ ನೀಡಿದರು. ಹಿರಿಯ ಸಹೋದರಿ ಶರ್ಮಿಳಾ ರಾಜ್ಯ ಮಟ್ಟದ ಕಬಡ್ಡಿ ಆಟಗಾರ್ತಿ. ಕಿರಿಯ ಸಹೋದರಿ ಸುಮಾ ಎನ್‌ಎಂಸಿ ಕಾಲೇಜಿನಲ್ಲಿ ಕ್ರೀಡಾ ಕೋಟಾದಡಿ ತರಬೇತಿ ಪಡೆಯುತ್ತಿದ್ದಾರೆ.

Advertisement

ಇದನ್ನೂ ಓದಿ:ಕನ್ನಡಿಗನಿಗೆ ನಾಯಕತ್ವ ನೀಡಲು ಮುಂದಾಗಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು

ಕಬಡ್ಡಿಯೇ ಜೀವಾಳ

ಪ್ರಾಥಮಿಕ, ಪ್ರೌಢ ಮತ್ತು ಪ.ಪೂ. ಶಿಕ್ಷಣವನ್ನು ಐವರ್ನಾಡಿನಲ್ಲಿ ಪೂರೈಸಿರುವ ಸಚಿನ್‌ ಪ್ರತಾಪ್‌, 10ನೇ ತರಗತಿ ತನಕ ಖೋ-ಖೋ ಆಟಗಾರನಾಗಿದ್ದರು. ಅನಂತರ ಕಬಡ್ಡಿ ಕ್ರೀಡೆಯತ್ತ ಆಸಕ್ತಿ ತೋರಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಜತೆಗೆ ಹರ್ಷಿತ್‌ ಬೇಂಗಮಲೆ, ವೀರನಾಥ, ಕುಮಾರ್‌ ಅವರು ಆರಂಭದಲ್ಲಿ ತರಬೇತಿ ನೀಡಿ ಪ್ರೋತ್ಸಾಹಿಸಿದರು. ಅನಂತರ ಉಜಿರೆ ಎಸ್‌ಡಿಎಂ ಕಾಲೇಜಿಗೆ ಕ್ರೀಡಾ ಕೋಟಾದಡಿ ಸೇರ್ಪಡೆಗೊಂಡು ಇಲ್ಲಿನ ಕಬಡ್ಡಿ ತರಬೇತುದಾರ ಕೃಷ್ಣಾನಂದ ಅವರು ಪೂರ್ಣ ಸಹಕಾರ ನೀಡಿ ಪ್ರತಾಪ್‌ ಅವರ ಪ್ರತಿಭೆಗೆ ಇನ್ನಷ್ಟು ನೀರೆರೆದು ಪೋಷಿಸಿದರು.

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next