Advertisement

ಪ್ರೊ ಕಬಡ್ಡಿ : ಆಟಗಾರರ ಹರಾಜು

10:23 PM Aug 07, 2021 | Team Udayavani |

ಹೊಸದಿಲ್ಲಿ: ಕೊರೊನಾದಿಂದಾಗಿ ಸ್ಥಗಿತಗೊಂಡಿದ್ದ  ಪ್ರೊ ಕಬಡ್ಡಿ ಋತು ಮತ್ತೆ ಆರಂಭವಾಗುವ ಸೂಚನೆ ಲಭಿಸಿದೆ.

Advertisement

ಮುಂಬರುವ 8ನೇ ಆವೃತ್ತಿಗೆ ವೇದಿಕೆ ಸಿದ್ಧವಾಗುತ್ತಿದೆ. ಇದರ ಮೊದಲ ಹೆಜ್ಜೆ ಎಂಬಂತೆ ಪಿಕೆಎಲ್‌ ಆಟಗಾರರ ಹರಾಜು ದಿನಾಂಕ ನಿಗದಿಯಾಗಿದೆ. ಆಗಸ್ಟ್‌ 29 ರಿಂದ 31ರ ನಡುವೆ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ.

ಆಟಗಾರರನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ದೇಶಿ ಸ್ಟಾರ್‌ ಆಟಗಾರರು, ವಿದೇಶಿ ಆಟಗಾರರು, ಯುವ ಹಾಗೂ ಹೊಸ ಆಟಗಾರು ಈ ಯಾದಿಯಲ್ಲಿರುತ್ತಾರೆ. 4 ಗುಂಪಿನ ಆಟಗಾರರಿಗೆ ಕ್ರಮವಾಗಿ 30 ಲಕ್ಷ ರೂ, 20 ಲಕ್ಷ ರೂ, 10 ಲಕ್ಷ ರೂ. ಮತ್ತು 6 ಲಕ್ಷ ರೂ. ಮೂಲ ಬೆಲೆ ನಿಗದಿಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next