Advertisement

Pro kabaddi; ಪ್ಲೇ ಆಫ್ ನತ್ತ ಪಾಟ್ನಾ: ಯು ಮುಂಬಾಗೆ ಸೋಲು

10:49 PM Feb 10, 2024 | Team Udayavani |

ಕೋಲ್ಕತಾ: ಯು ಮುಂಬಾವನ್ನು 44-23 ಅಂಕಗಳಿಂದ ಪರಾಭವಗೊಳಿಸಿದ ಪಾಟ್ನಾ ಪೈರೇಟ್ಸ್‌ ಪ್ರೊ ಕಬಡ್ಡಿ ಕೂಟದ ಪ್ಲೇ ಆಫ್ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿದೆ.

Advertisement

ಇದು 20 ಪಂದ್ಯಗಳಲ್ಲಿ ಪಾಟ್ನಾ ಸಾಧಿಸಿದ 10ನೇ ಗೆಲುವು. ಸದ್ಯ 4ನೇ ಸ್ಥಾನದಲ್ಲಿದೆ. ಮುಂಬಾ 19 ಪಂದ್ಯಗಳಲ್ಲಿ 11ನೇ ಸೋಲನುಭವಿಸಿತು. ಪಾಟ್ನಾ ಪರ ನಾಯಕ ಸಚಿನ್‌ (10 ಅಂಕ), ಡಿಫೆಂಡರ್‌ ಕಿೃಶನ್‌ (8 ಅಂಕ), ರೈಡರ್‌ ಸುಧಾಕರ್‌ ಎಂ. (7 ಅಂಕ) ಭರ್ಜರಿ ಆಟವಾಡಿದರು.
ಬೆಂಗಾಲ್‌ ವಿಜಯ: ದ್ವಿತೀಯ ಪಂದ್ಯದಲ್ಲಿ ಬೆಂಗಾಲ್‌ ವಾರಿಯರ್ 55-35 ಅಂತರದಿಂದ ತೆಲುಗು ಟೈಟಾನ್ಸ್‌ಗೆ ಸೋಲುಣಿಸಿ ತವರಲ್ಲಿ ಗೆಲುವಿನ ಖಾತೆ ತೆರೆಯಿತು. ಇದು 19 ಪಂದ್ಯಗಳಲ್ಲಿ ಬೆಂಗಾಲ್‌ ಸಾಧಿಸಿದ 8ನೇ ಜಯ.

Advertisement

Udayavani is now on Telegram. Click here to join our channel and stay updated with the latest news.

Next