Advertisement

Pro Kabaddi: ಪಾಟ್ನಾ ವಿರುದ್ಧ ಮುಂಬಾ ವಿಜಯ ; ಪುಣೆಗೆ ಸೋಲು

11:21 PM Dec 15, 2023 | Team Udayavani |

ಪುಣೆ: ಪುಣೆ ಆವೃತ್ತಿಯ ಮೊದಲ ಪ್ರೊ ಕಬಡ್ಡಿ ಪಂದ್ಯದಲ್ಲಿ ಯು ಮುಂಬಾ ಪಡೆ ಪಾಟ್ನಾ ಪೈರೇಟ್ಸ್‌ ವಿರುದ್ಧ 42-40 ಅಂತರದ ರೋಚಕ ಜಯ ದಾಖಲಿಸಿದೆ. ಆಲ್‌ರೌಂಡರ್‌ ಆಮೀರ್‌ ಮೊಹಮ್ಮದ್‌ 13 ಅಂಕ, ಮತ್ತೋರ್ವ ಆಲ್‌ರೌಂಡರ್‌ ವಿಶ್ವಾಂತ್‌ ವಿ. ಮತ್ತು ರೈಡರ್‌ ಗುಮಾನ್‌ ಸಿಂಗ್‌ ತಲಾ 8 ಅಂಕ ಗಳಿಸಿ ಮುಂಬಾ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಾಟ್ನಾ ಪ್ರದರ್ಶನವೂ ಉತ್ತಮ ಮಟ್ಟದಲ್ಲಿತ್ತು. ರೈಡರ್‌ಗಳಾದ ಸಚಿನ್‌ 12, ಸುಧಾಕರ್‌ ಎಂ. 7, ಮಂಜೀತ್‌ 5 ಅಂಕ ತಂದಿತ್ತರು.

Advertisement

ಪುಣೆಗೆ ಸೋಲು
ತವರಿನ ಮೊದಲ ಪಂದ್ಯದಲ್ಲೇ ಪುನೇರಿ ಪಲ್ಟಾನ್‌ ಸೋಲನುಭವಿಸಿದೆ. ಹರ್ಯಾಣ ಸ್ಟೀಲರ್ 44-39 ಅಂಕಗಳಿಂದ ಆತಿಥೇಯ ತಂಡವನ್ನು ಕೆಡವಿತು. ರೈಡರ್‌ ವಿನಯ್‌ ಅವರ ಅಮೋಘ ಪ್ರದರ್ಶನ (15 ಅಂಕ) ಹರ್ಯಾಣ ಜಯದಲ್ಲಿ ಪ್ರಮುಖ ಪಾತ್ರ ವಹಿಸಿತು. ಪುನೇರಿ ಪರ ನಾಯಕ ಅಸ್ಲಾಮ್‌ ಮುಸ್ತಾಫಾ 9, ಮೋಹಿತ್‌ ಗೋಯತ್‌ 8 ಅಂಕ ತಂದಿತ್ತರು.

Advertisement

Udayavani is now on Telegram. Click here to join our channel and stay updated with the latest news.

Next