Advertisement

Pro Kabaddi: ಮುಂಬಾ ವಿರುದ್ಧ ಬೆಂಗಳೂರು ಬುಲ್ಸ್‌  ಪಲ್ಟಿ

11:26 PM Jan 05, 2024 | Team Udayavani |

ಮುಂಬಯಿ: ಮುಂಬಯಿ ಆವೃತ್ತಿಯ ಪ್ರೊ ಕಬಡ್ಡಿ ಮುಖಾಮುಖಿಯಲ್ಲೂ ಬೆಂಗಳೂರು ಬುಲ್ಸ್‌ ಕಳಪೆ ಆರಂಭ ಕಂಡಿದೆ. ಶುಕ್ರವಾರದ ಸ್ಪರ್ಧೆಯಲ್ಲಿ ಆತಿಥೇಯ ಯು ಮುಂಬಾ ಕೈಯಲ್ಲಿ 35-40 ಅಂಕಗಳ ಆಘಾತಕ್ಕೆ ಸಿಲುಕಿದೆ.
ಇದರೊಂದಿಗೆ ಬುಲ್ಸ್‌ 11 ಪಂದ್ಯಗಳಲ್ಲಿ 7 ಸೋಲು ಅನುಭವಿಸಿತು. ಮುಂಬಾ 8 ಪಂದ್ಯಗಳಲ್ಲಿ 6ನೇ ಗೆಲುವು ಸಾಧಿಸಿತು. ವಿಜೇತ ತಂಡದ ಪರ ಆಮೀರ್‌ ಮೊಹಮ್ಮದ್‌, ಗುಮಾನ್‌ ಸಿಂಗ್‌ (ತಲಾ 7 ಅಂಕ) ಉತ್ತಮ ಪ್ರದರ್ಶನವಿತ್ತರು. ಬುಲ್ಸ್‌ ಪರ ಸುಶೀಲ್‌ ಮತ್ತು ಸಚಿನ್‌ ತಲಾ 6 ಅಂಕ ಗಳಿಸಿದರು.

Advertisement

ಪಾಟ್ನಾಗೆ ಸೋಲು
ಮೊದಲ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್‌ ಅಪರೂಪದ ಸೋಲುಂಡಿತು. ಈ ರೋಚಕ ಹಣಾಹಣಿಯನ್ನು ದಬಾಂಗ್‌ ಡೆಲ್ಲಿ 38-37 ಅಂತರದಿಂದ ತನ್ನದಾಗಿಸಿಕೊಂಡಿತು.

ಇದು 10 ಪಂದ್ಯಗಳಲ್ಲಿ ಪಾಟ್ನಾಕ್ಕೆ ಎದುರಾದ ಕೇವಲ 2ನೇ ಸೋಲು. ಡೆಲ್ಲಿ ಇಷ್ಟೇ ಪಂದ್ಯಗಳಲ್ಲಿ 6ನೇ ಜಯ ಸಾಧಿಸಿತು. ನಾಯಕ ಆಶು ಮಲಿಕ್‌ ಅತ್ಯಧಿಕ 10 ಅಂಕ, ಮನ್‌ಜೀತ್‌ ಮತ್ತು ಯೋಗೇಶ್‌ ತಲಾ 5 ಅಂಕ ಗಳಿಸಿದರು. ಪಾಟ್ನಾ ಪರ ರೈಡರ್‌ ಸಚಿನ್‌ ಅತ್ಯಧಿಕ 10 ಅಂಕ ತಂದಿತ್ತರು.

Advertisement

Udayavani is now on Telegram. Click here to join our channel and stay updated with the latest news.

Next