Advertisement
ಪ್ರಾಯೋಜಕರಿಗೆ ಸ್ಫೂರ್ತಿಪ್ರೊ ಕಬಡ್ಡಿಯ ಜನಪ್ರಿಯತೆ ಆ ಮಟ್ಟದಲ್ಲಿದೆ. ಪ್ರೋತ್ಸಾಹ, ಪ್ರಾಯೋಜನೆ, ವೀಕ್ಷಕ ವರ್ಗ, ದುಡ್ಡಿನ ಪ್ರವಾಹ ದೊಡ್ಡ ಮಟ್ಟದಲ್ಲೇ ಹರಿದು ಬರುತ್ತಿದೆ. ಇವೆಲ್ಲಕ್ಕಿಂತ ಮಿಗಿಲಾಗಿ ಇದು ದೇಶದ “ಕ್ರೀಡಾ ಸ್ಥಿತ್ಯಂತರ’ದ ಕಾಲಘಟ್ಟವೂ ಆಗಿದೆ. ಕ್ರೀಡೆಯೆಂದರೆ ಕೇವಲ ಕ್ರಿಕೆಟ್ ಎಂಬಷ್ಟಕ್ಕೇ ಸೀಮಿತಗೊಂಡ ಭಾರತದಲ್ಲೀಗ ದೇಶಿ ಕ್ರೀಡೆಯಾದ ಕಬಡ್ಡಿಯತ್ತ ಭಾರೀ ಪ್ರಮಾಣದಲ್ಲಿ ವೀಕ್ಷಕರು ಒಲವು ತೋರುತ್ತಿದ್ದಾರೆ. ಟಿ20 ಪಂದ್ಯಕ್ಕೂ ಕಡಿಮೆ ಅವಧಿಯಲ್ಲಿ, ಕೇವಲ ಒಂದು ಗಂಟೆಯೊಳಗಾಗಿ ಮುಗಿದು ಹೋಗುವ ಕಬಡ್ಡಿ ಅದೆಷ್ಟೋ ರೋಚಕ ಕ್ಷಣಗಳಿಗೆ ಸಾಕ್ಷಿಯಾಗುತ್ತ ಹೋಗುತ್ತಿದೆ. ಇದು ಪ್ರಾಯೋಜಕರಿಗೆ ಹೊಸ ಸ್ಫೂರ್ತಿ ತಂದಿದೆ.
ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಬರೋಬ್ಬರಿ 91 ದಿನಗಳ ಕಾಲ ನಡೆಯಲಿದೆ. ಬಹುಶಃ ಕ್ರೀಡಾ ಇತಿಹಾಸದಲ್ಲೇ ಇದೊಂದು ದಾಖಲೆಯಾಗಿರಬಹುದು. ಆದರೆ ಕೂಟದ ಅಂತಿಮ ದಿನದ ತನಕವೂ ಕ್ರೀಡಾಪ್ರೇಮಿಗಳ ಆಸಕ್ತಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ದೊಡ್ಡ ಸವಾಲು. ಆರಂಭದಲ್ಲಿ ಎಲ್ಲರಿಗೂ ವಿಪರೀತ ಕುತೂಹಲ ಸಹಜ. ಆದರೆ ನಡುವಲ್ಲಿ ಈ ಕೌತುಕ ಧೊಪ್ಪನೆ ಕುಸಿಯಲೂಬಹುದು. ಅದರಲ್ಲೂ ಬೇರೊಂದು ಪಂದ್ಯಾವಳಿ ಇದ್ದರಂತೂ ವೀಕ್ಷಕರ ಪಲ್ಲಟ ನಿರೀಕ್ಷಿತ. ಲೀಗ್ ಮುಗಿದು ನಾಕೌಟ್ ಹಂತದ ಪಂದ್ಯ ಮೊದಲ್ಗೊಳ್ಳುವ ಹಂತದಲ್ಲಿ ಮತ್ತೆ ಕುತೂಹಲ ಗರಿ ಗೆದರಬಹುದು. ಹೀಗಾಗಿ “ನಡು ಅವಧಿ’ ಎನ್ನುವುದು ಬೂಸ್ಟ್ ಆಗುವುದು ಮುಖ್ಯ. ಹಾದಿ ತಪ್ಪದಿರಲಿ ಕಬಡ್ಡಿ
ಲೀಗ್ ಒಂದರ ಜನಪ್ರಿಯತೆ, ಆಕರ್ಷಣೆ ಹೆಚ್ಚಿದ ಮಾತ್ರಕ್ಕೆ ಇದರ ಕಾಲಾವಧಿಯನ್ನು ವಿಸ್ತರಿಸುವ ಅಗತ್ಯವೇನೂ ಕಾಣಿಸದು. ಆಗದು ಹಾದಿ ತಪ್ಪುವ ಸಾಧ್ಯತೆ ಹೆಚ್ಚು. ಪ್ರೊ ಕಬಡ್ಡಿ ಇಂಥ ಕೆಟ್ಟ ಕಾರಣಗಳಿಂದ ಸುದ್ದಿಯಾಗ ಬಾರದೆಂಬುದು ಸದಾಶಯ.
Related Articles
ಇನ್ನು ಆಟಗಾರರ ಸಂಕಟ ಬೇರೆಯೇ ಇದೆ. ಅದೆಂದರೆ ಫಿಟ್‌ನೆಸ್. ನಿರಂತರ 3 ತಿಂಗಳ ಕಾಲ ಯಾವುದೇ ಗಾಯ-ನೋವು ಎದುರಾಗದಂತೆ ದೈಹಿಕ ಕ್ಷಮತೆ ಕಾಯ್ದುಕೊಳ್ಳುವುದು ಕಬಡ್ಡಿಪಟುಗಳ ಮುಂದಿರುವ ದೊಡ್ಡ ಸವಾಲು. ಭಾರೀ ಮೊತ್ತ ಪಡೆದು ಬರುವ ಈ ಆಟಗಾರರು ನಡುವಲ್ಲಿ ಇಂಥ ಸಂಕಟಕ್ಕೆ ಸಿಲುಕಿ ಹೊರಬಿದ್ದರೆ ಎಲ್ಲರಿಗೂ ನಷ್ಟ. 2 ವರ್ಷಗಳ ಹಿಂದಕ್ಕೆ ಪಯಣಿಸಿದರೆ, ಒಂದೇ ಋತುವಿನಲ್ಲಿ 2 ಪ್ರೊ ಕಬಡ್ಡಿ ಲೀಗ್ ಪಂದ್ಯಾವಳಿಯನ್ನು ಆಯೋಜಿಸಿದ ನಿದರ್ಶನ ಕಾಣಸಿಗುತ್ತದೆ. ಇದು ಕೂಡ ಒಂದು ರೀತಿಯಲ್ಲಿ ಅತಿರೇಕವೆನಿಸಿತ್ತು. ಪುನಃ ಕಳೆದ ವರ್ಷದಿಂದ ಒಂದೇ ಕೂಟವನ್ನು ಆಯೋಜಿಸಲಾಯಿತು. ಇದು ಕೂಡ 3 ತಿಂಗಳ ಕಾಲ ನಡೆದಿತ್ತು.
Advertisement
ಮಾಮೂಲಿ ಕಬಡ್ಡಿಯಂತಲ್ಲ ಪ್ರೊ ಕಬಡ್ಡಿಪ್ರೊ ಕಬಡ್ಡಿ ಹಲವು ಕ್ರಾಂತಿಕಾರಕ ಬದಲಾವಣೆ ಮಾಡಿಕೊಂಡಿದ್ದು ಅಭಿಮಾನಿಗಳ ಕುತೂಹಲ ಸೆಳೆಯುವುದಕ್ಕೆ ಕಾರಣವಾಗಿದೆ. ಟಿ20 ಕ್ರಿಕೆಟ್‌ನ ಹಾಗೆ ಕಬಡ್ಡಿಯಲ್ಲೂ ವೇಗ ಹೆಚ್ಚಿಸಲು ಹಲವು ಬದಲಾವಣೆ ಮಾಡಲಾಗಿದೆ. ಸೂಪರ್ ರೈಡ್‌ಗೆ ಹೆಚ್ಚುವರಿ ಅಂಕ
ಒಬ್ಬ ರೈಡರ್ ಎದುರಾಳಿ ಅಂಕಣದ ಮೂರು ಅಥವಾ ಹೆಚ್ಚಿನ ಆಟಗಾರರನ್ನು ಔಟ್ ಮಾಡಿದರೆ ಅದನ್ನು ಸೂಪರ್ ರೈಡ್ ಎಂದು ಪರಿಗಣಿಸಲ್ಪ ಡುತ್ತದೆ. ಹೆಚ್ಚಿನ ಒಂದು ಅಂಕ ಸಿಗುತ್ತದೆ. ಪಂದ್ಯದ ಅವಧಿ 40 ನಿಮಿಷ
ಮಾಮೂಲಿ ಕಬಡ್ಡಿಗೂ ಪ್ರೊ ಕಬಡ್ಡಿಗೂ ಇಲ್ಲಿ ಅಂಥ ವ್ಯತ್ಯಾಸವೇನಿಲ್ಲ. ಒಟ್ಟಾರೆ ಅವಧಿ 40 ನಿಮಿಷವಿರುತ್ತದೆ. ಆದರೆ ಪ್ರೊ ಕಬಡ್ಡಿಯಲ್ಲಿ ತಂಡವೊಂದಕ್ಕೆ 90 ಸೆಕೆಂಡ್‌ಗಳ ಕಿರು ವಿರಾಮ ತೆಗೆದುಕೊಳ್ಳುವ ಅವಕಾಶ ನೀಡಲಾಗುತ್ತದೆ. 20 ನಿಮಿಷ ಮುಗಿದಾಗ 5 ನಿಮಿಷದ ಅಂತರವಿರುತ್ತದೆ. ರೈಡ್ ಅವಧಿ 30 ಸೆಕೆಂಡ್
ಮಾಮೂಲಿ ಕಬಡ್ಡಿಯಲ್ಲಿ ರೈಡಿಂಗ್ ಅವಧಿ 45 ಸೆಕೆಂಡ್ ಇರುತ್ತದೆ. ಪ್ರೊ ಕಬಡ್ಡಿಯಲ್ಲಿ ಇದನ್ನು 30 ಸೆಕೆಂಡ್‌ಗೆ ಇಳಿಸಲಾಗಿದೆ.
ಸೂಪರ್ ಟ್ಯಾಕಲ್‌ಗೆ ಹೆಚ್ಚುವರಿ ಅಂಕ
3 ಮತ್ತು ಅದಕ್ಕಿಂತ ಕಡಿಮೆ ಆಟಗಾರರು ಉಳಿದಿರುವಾಗ ರೈಡರನ್ನು ಔಟ್ ಮಾಡಲು ಯಶಸ್ವಿಯಾದರೆ ಅದನ್ನು ಸೂಪರ್ ಟ್ಯಾಕಲ್ ಎನ್ನಲಾಗುತ್ತದೆ. ಅದಕ್ಕೆ ಹೆಚ್ಚುವರಿ ಅಂಕ ಸಿಗುತ್ತದೆ. ಉದ್ಘಾಟನೆಗೆ ರಂಗೇರಿಸಲಿದ್ದಾರೆ ವಿಜಯ್, ಶ್ರುತಿ ಹಾಸನ್
ಚೆನ್ನೈ: ಬಹುನಿರೀಕ್ಷೆಯ 6ನೇ ಪ್ರೊ ಕಬಡ್ಡಿ ಆವೃತ್ತಿ ರವಿವಾರ ಚೆನ್ನೈಯಲ್ಲಿ ಆರಂಭವಾಗಲಿದೆ. ಸುದೀರ್ಘ 91 ದಿನಗಳ ಕಾಲ “ಕಾಲೆಳೆಯುವ ಆಟ’ ಕಾವೇರಿಸಿಕೊಳ್ಳಲಿದೆ. ಕೂಟದ ಉದ್ಘಾಟನ ಸಮಾರಂಭದಲ್ಲಿ ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ, ನಟಿ ಶ್ರುತಿ ಹಾಸನ್ ಪಾಲ್ಗೊಂಡು ರಸಸಂಜೆಗೆ ರಂಗೇರಿಸಲಿದ್ದಾರೆ. ಚೆನ್ನೈ-ಪಾಟ್ನಾ ಆರಂಭಿಕ ಪಂದ್ಯ
ಮೊದಲ ಪಂದ್ಯ ಆತಿಥೇಯ ತಮಿಳ್ ತಲೈವಾಸ್ ಮತ್ತು ಹಾಲಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ನಡುವೆ ನಡೆಯಲಿದೆ. ಪಾಟ್ನಾ ಪೈರೇಟ್ಸ್ ಹ್ಯಾಟ್ರಿಕ್ ಪ್ರಶಸ್ತಿಯೊಂದಿಗೆ ಕೂಟದ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ತಂಡವಾಗಿ ಹೊರಹೊಮ್ಮಿದೆ. ಈ ತಂಡದಲ್ಲಿ ಪ್ರದೀಪ್ ನರ್ವಾಲ್‌ರಂತಹ ಪ್ರಬಲ ಆಟಗಾರರಿದ್ದಾರೆ. ಪ್ರೊ ಕಬಡ್ಡಿ ಇತಿಹಾಸದಲ್ಲೇ ಕೂಟವೊಂದರಲ್ಲಿ ಗರಿಷ್ಠ ಅಂಕ ಸಂಪಾದಿಸಿದ ಆಟಗಾರನೆಂಬುದು ಪ್ರದೀಪ್ ಹೆಗ್ಗಳಿಕೆ. ಆದರೆ ಈ ಬಾರಿ ಪಾಟ್ನಾ ಸ್ವಲ್ಪ ದುರ್ಬಲ. ಕಳೆದ ಬಾರಿ ಪ್ರತಿಭಾವಂತ ಆಟಗಾರ ಮೋನು ಗೋಯತ್ ಇದ್ದರು. ಈಗವರು ಪ್ರೊ ಕಬಡ್ಡಿ ಇತಿಹಾಸದಲ್ಲೇ ದುಬಾರಿ ಮೊತ್ತವೆನಿಸಿಕೊಂಡ 1.51 ಕೋಟಿ ರೂ.ಗೆ ಹರ್ಯಾಣ ಸ್ಟೀಲರ್ಸ್ ಪಾಲಾಗಿದ್ದಾರೆ.
ಆತಿಥೇಯ ತಮಿಳ್ ತಲೈವಾಸ್ ಕಳೆದ ಬಾರಿ ಕಳಪೆ ಪ್ರದರ್ಶನ ನೀಡಿತ್ತು. ಈ ಸಲ ತವರಿನಿಂದಲೇ ಹೋರಾಟ ಶುರು ಮಾಡುವುದರಿಂದ ಹೊಸ ಪ್ರಭಾವ ಬೀರುವ ನಿರೀಕ್ಷೆಯಲ್ಲಿದೆ. ಮತ್ತೂಂದು ಪಂದ್ಯ ಮುಂಬೈ- ಪುಣೆ ನಡುವೆ ನಡೆಯಲಿದೆ.
ಯು ಮುಂಬಾ 3 ಬಾರಿ ಫೈನಲ್ ತಲುಪಿ ಒಮ್ಮೆ ಚಾಂಪಿಯನ್ ಆಗಿ ಅತ್ಯುತ್ತಮ ದಾಖಲೆ ಹೊಂದಿದೆ. ಆದರೆ ಪ್ರಸ್ತುತ ಆ ತಂಡದ ಪ್ರಮುಖರೆಲ್ಲ ಅನ್ಯ ತಂಡದ ಪಾಲಾಗಿದ್ದಾರೆ. ಹಾಗಾಗಿ ಅದರಿಂದ ಮಹತ್ವದ್ದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಎದುರಾಳಿ ಪುನೇರಿ ಪಲ್ಟಾನ್‌ನಲ್ಲೂ ಹೊಸಮುಖಗಳೇ ತುಂಬಿಕೊಂಡಿವೆ. ಟಾಪ್ 5 ಪ್ರೊ ಕಬಡ್ಡಿ ವೀರರು
ಈ ವರೆಗಿನ 5 ಪ್ರೊ ಕಬಡ್ಡಿ ಕೂಟದಲ್ಲಿ ಆಟಗಾರರ
ನಿರ್ವಹಣೆಯ ಆಧಾರದಲ್ಲಿ ಅಗ್ರ ಐವರು ಆಟಗಾರರ ಸಾಧನೆಯನ್ನು ಇಲ್ಲಿ ಅವಲೋಕನ ಮಾಡಲಾಗಿದೆ. ಇವರಿಂದ ಈ ಬಾರಿಯೂ ಉತ್ಕೃಷ್ಟ ನಿರ್ವಹಣೆ ನಿರೀಕ್ಷಿಸಲಾಗಿದೆ.
1.ರಾಹುಲ್ ಚೌಧರಿ (ರೈಡರ್)
ಆರಂಭದಿಂದಲೂ ತೆಲುಗು ಟೈಟಾನ್ಸ್ ಜತೆಗಿದ್ದ ರಾಹುಲ್ ಚೌಧರಿ ಅಪ್ರತಿಮ ರೈಡರ್. ಪ್ರೊ ಕಬಡ್ಡಿ ಇತಿಹಾಸದಲ್ಲಿ ದಾಖಲೆಯ 666 ರೈಡಿಂಗ್ ಅಂಕ ಪಡೆದವರು. 25ರ ಹರೆಯದ ಅವರು ರೈಡ್ ಮತ್ತು ಟ್ಯಾಕಲ್‌ನಲ್ಲಿ ಒಟ್ಟು 710 ಅಂಕ ಗಳಿಸಿದ್ದಾರೆ. ರೈಡ್ ಮಾಡಿದ ವೇಳೆ ಅಂಕವಿಲ್ಲದೇ ಮರಳಿ ಬರುವುದು ಅಪರೂಪ. ಚೌಧರಿ ರೈಡ್‌ಗೆ ಹೋದರೆ ಅಂಕ ಗ್ಯಾರೆಂಟಿ. ಆದರೆ ಅವರಿದ್ದ ತಂಡ ಪ್ರೊ ಕಬಡ್ಡಿಯಲ್ಲಿ ಸಾಧಾರಣ ನಿರ್ವಹಣೆ ದಾಖಲಿಸಿದೆ. 2. ಪ್ರದೀಪ್ ನರ್ವಾಲ್ (ರೈಡರ್)
ಪಾಟ್ನಾ ಪೈರೇಟ್ಸ್ ಹ್ಯಾಟ್ರಿಕ್ ಪ್ರಶಸ್ತಿ ಗೆಲ್ಲಲು ಕಾರಣರಾದ ಪ್ರದೀಪ್ ನರ್ವಾಲ್ ಸತತ ಎರಡು ಋತುಗಳಲ್ಲಿ “ಅತ್ಯಂತ ಉಪಯುಕ್ತ ಆಟಗಾರ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. 4ನೇ ಋತುವಿನಲ್ಲಿ 369 ಅಂಕ ಪಡೆದು ಶ್ರೇಷ್ಠ ರೈಡರ್ ಎನಿಸಿಕೊಂಡಿದ್ದರು. ಎರಡನೇ ಶ್ರೇಷ್ಠ ರೈಡರ್ ಪ್ರಶಸ್ತಿ ಪಡೆದ ರೋಹಿತ್ ಕುಮಾರ್ 150 ಅಂಕ ಗಳಿಸಿದ್ದರು. ಐದನೇ ಋತುವಿನಲ್ಲಿ ಅವರ ನಿರ್ವಹಣೆ ಅದ್ಭುತವಾಗಿತ್ತು. ಒಂದು ರೈಡ್‌ನಲ್ಲಿ ಗರಿಷ್ಠ 8 ಅಂಕ ಪಡೆದ ಹಿರಿಮೆ ಅವರದ್ದು. ಒಂದು ಪಂದ್ಯದಲ್ಲಿ ಗರಿಷ್ಠ 34 ಅಂಕ ಗಳಿಸಿದ ವೀರರಾಗಿದ್ದರು. 3. ಫಜೆಲ್ ಅತ್ರಾಚಲಿ (ಡಿಫೆಂಡರ್)
ಪ್ರೊ ಕಬಡ್ಡಿ ಇತಿಹಾಸದ ಅತ್ಯಂತ ಯಶಸ್ವಿ ವಿದೇಶಿ ಆಟಗಾರರೆಂಬ ಖ್ಯಾತಿಗೆ ಫಜೆಲ್ ಅತ್ರಾಚಲಿ ಪಾತ್ರರಾಗಿದ್ದಾರೆ. ಇರಾನಿನ ಅತ್ರಾಚಲಿ ಒಂದು ಕೋಟಿ ರೂ.ಗೆ ಯು ಮುಂಬಾ ಮಾರಾಟವಾಗಿದ್ದರು. ಗರಿಷ್ಠ ಟ್ಯಾಕಲ್ ಅಂಕ ಗಳಿಸಿದವರಲ್ಲಿ ಅತ್ರಾಚಲಿಗೆ 11ನೇ ಸ್ಥಾನ. 56 ಪಂದ್ಯಗಳಲ್ಲಿ 230 ಟ್ಯಾಕಲ್ ಅಂಕ ಸಂಪಾದಿಸಿದ ಹಿರಿಮೆ ಅವರದ್ದು. 26ರ ಹರೆಯದ ಅವರು ನಾಲ್ಕು ಪ್ರೊಕಬಡ್ಡಿ ಫೈನಲ್ಸ್‌ನಲ್ಲಿ ಆಡಿದ ಏಕೈಕ ವಿದೇಶಿ ಆಟಗಾರ. 52 ಅಂಕ ಪಡೆದ ಅವರಿಗೆ 4ನೇ ಋತುವಿನ ಶ್ರೇಷ್ಠ ಡಿಫೆಂಡರ್ ಗೌರವ ಒಲಿದಿದೆ. 4. ಅಜಯ್ ಠಾಕೂರ್ (ರೈಡರ್)
ಖ್ಯಾತ ರೈಡರ್‌ಗಳ ಸಾಲಿನಲ್ಲಿ ಅಜಯ್ ಠಾಕೂರ್‌ಗೆ ಮೂರನೇ ಸ್ಥಾನ. 80 ಪಂದ್ಯಗಳಿಂದ ಅವರು 529 ರೈಡ್ ಅಂಕ ಪಡೆದಿದ್ದಾರೆ. 32ರ ಹರೆಯದ ಅವರು ಹೆಚ್ಚಿನ ರೈಡಿಂಗ್ ವೇಳೆ ಅಜೇಯ ಸಾಧನೆ ಮಾಡಿದವರು. 2016ರ ವಿಶ್ವಕಪ್ ಫೈನಲ್ ನಲ್ಲಿ ಸೂಪರ್ 10 ಅಂಕ ಪಡೆದ ಸಾಹಸಿ. ಈ ಮೂಲಕ ಭಾರತ ಇರಾನ್ ತಂಡವನ್ನು ಸೋಲಿಸಲು ನೆರವಾಗಿ ದ್ದರು. ಐದನೇ ಪ್ರೊ ಕಬಡ್ಡಿಯಲ್ಲಿ ಅವರು ತಮಿಳ್ ತಲೈವಾಸ್ ತಂಡವನ್ನು ಮುನ್ನಡೆಸಿದ್ದರು. 5. ಮಿರಾಜ್ ಶೇಖ್ (ಆಲ್‌ರೌಂಡರ್)
ಇರಾನ್‌ನ 30ರ ಹರೆಯದ ಮಿರಾಜ್ ಶೇಖ್ ಪ್ರೊ ಕಬಡ್ಡಿಯಲ್ಲಿ ತಂಡದ ನೇತೃತ್ವ ವಹಿಸಿದ್ದ ಮೊದಲ ವಿದೇಶಿ ಆಟಗಾರ. ಎರಡನೇ ಋತುವಿನಲ್ಲಿ ತೆಲುಗು ಟೈಟಾನ್ಸ್ ತಂಡದ ನಾಯಕರಾಗಿದ್ದರು. 4ನೇ ಋತುವಿನ ಶ್ರೇಷ್ಠ ಆಲ್‌ರೌಂಡರ್ ಗೌರವಕ್ಕೆ ಪಾತ್ರರಾಗಿದ್ದರು. ಎರಡು ಋತುಗಳಲ್ಲಿ ದಬಾಂಗ್ ಡೆಲ್ಲಿ ಪರ ಆಡಿದ್ದ ಮಿರಾಜ್ 63 ಪಂದ್ಯಗಳಿಂದ 265 ಆಲ್‌ರೌಂಡ್ ಅಂಕ ಪಡೆದಿದ್ದಾರೆ. ಇರಾನ್ ತಂಡದ ನಾಯಕರೂ ಆಗಿದ್ದರು. ಕಬಡ್ಡಿ ಸ್ವಾರಸ್ಯ
*ಭಾರತದಲ್ಲಿ 4 ಸಾವಿರ ವರ್ಷಗಳ ಹಿಂದೆ ಕಬಡ್ಡಿಯನ್ನು ಆಡಲಾಗಿತ್ತು ಎಂದು ಹೇಳಲಾಗುತ್ತಿದೆ. ಆದರೆ ಇದರ ಮೂಲ ಯಾವುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮಹಾಭಾರತದ ಕುರುಕ್ಷೇತ್ರ ಯುದ್ಧದ ಸಂದರ್ಭದಲ್ಲಿ ಅಭಿಮನ್ಯು ಕಬಡ್ಡಿ ಕ್ರೀಡೆಯನ್ನು ಪರಿಚಯಿಸಿದನೆಂಬ ಉಲ್ಲೇಖವಿದೆ.
*ಕಬಡ್ಡಿ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಪಂಜಾಬ್‌ನ “ರಾಜ್ಯ ಕ್ರೀಡೆ’ಯಾಗಿದೆ.
*ಕಬಡ್ಡಿ ಭಾರತೀಯ ಮೂಲದ ಕ್ರೀಡೆಯಾದರೂ ಇದು ರಾಷ್ಟ್ರೀಯ ಕ್ರೀಡೆ ಆಗಿ ಮಾನ್ಯತೆ ಪಡೆದಿರುವುದು ಬಾಂಗ್ಲಾದೇಶದಲ್ಲಿ !
*ಕಬಡ್ಡಿ ಹೆಸರಿನ ಮೂಲ ತಮಿಳು. ತಮಿಳಿನ ಕೈ-ಪಿ (ಕೈಯನ್ನು ಹಿಡಿ) ಎಂಬ ಶಬ್ದದಿದ ಕಬಡ್ಡಿ ಎಂಬ ಪದ ಹುಟ್ಟಿಕೊಂಡಿದೆ ಎನ್ನಲಾಗುತ್ತಿದೆ.
*ಕಬಡ್ಡಿ ಏಶ್ಯದಲ್ಲಿ ಹೆಚ್ಚು ಜನಪ್ರಿಯ. ಇಟಲಿ, ಸ್ಪೇನ್, ಅಜೇಟಿನಾ, ಡೆನ್ಮಾರ್ಕ್, ಯುಎಸ್‌ಎ ಹಾಗೂ ಬೆಲ್ಜಿಯಂ ದೇಶಗಳಲ್ಲೂ ಕಬಡ್ಡಿ ಆಡಲಾಗುತ್ತಿದೆ.
*1936ರ ಬರ್ಲಿನ್ ಒಲಿಂಪಿಕ್ಸ್‌ನಲ್ಲಿ ಭಾರತ ಪ್ರದರ್ಶನ ಕ್ರೀಡೆಯಾಗಿ ಕಬಡ್ಡಿ ಆಡಿ ತೋರಿಸಿದ ಬಳಿಕ ಕಬಡ್ಡಿ ವಿಶ್ವ ಮಟ್ಟದಲ್ಲಿ ಜನಪ್ರಿಯಗೊಂಡಿತು. ತಂಡಗಳು
ಬೆಂಗಾಲ್ ವಾರಿಯರ್
ನಾಯಕ: ಸುರ್ಜೀತ್ ಸಿಂಗ್
ರಾಣ ಸಿಂಗ್, ಜಂಗ್ ಕುನ್‌ಲೀ, ಜಿಯಾ ವುರ್ ರೆಹಮನ್, ಶೀಕಾಂತ್ ಟೆವಾಟಿಯ, ಮಹೇಶ್ ಗೌಡ್, ವಿಜಿನ್ ತಂಗದೊರೈ, ಭೂಪೇಂದ್ರ ಸಿಂಗ್, ವಿಟಲ್ ಮೇಟಿ, ಅಮಿತ್ ಕುಮಾರ್, ರಾಕೇಶ್ ನರ್ವಾಲ್, ಅಮಿತ್ ನಗರ್, ಅನಿಸ್ ಖೋಕರ್, ಮನೋಜ್ ಧುಲ್, ಮಣಿಂದರ್ ಸಿಂಗ್, ರವೀಂದ್ರ ಕುಮಾವತ್, ಅಮರೇಶ್ ಮೊಂಡಲ್, ಮಿಥಿನ್ ಕುಮಾರ್. ಬೆಂಗಳೂರು ಬುಲ್ಸ್
ನಾಯಕ: ರೋಹಿತ್ ಕುಮಾರ್
ಪವನ್ ಕುಮಾರ್, ಮಹೇಂದರ್ ಸಿಂಗ್, ಕಾಶೀಲಿಂಗ್ ಅಡಕೆ, ಜಶೆರ್ ಸಿಂಗ್ ಗುಲಿಯ, ರಾಜುಲಾಲ್ ಚೌಧರಿ, ಡಾಂಗ್ ಜು ಹಾಂಗ್, ಗ್ಯುಂಗ್ ತೆ ಕಿಮ್, ಸಂದೀಪ್, ಜವಾಹರ್ ವಿವೇಕ್, ಮಹೇಶ್ ಮಾರುತಿ ಮಾಗುಮ್, ಮಹೇಂದ್ರ ಸಿಂಗ್ ಧಾಕ, ನಿತೇಶ್ ಬಿ.ಆರ್., ಅನಿಲ್, ಆನಂದ್ ವಿ., ರೋಹಿತ್, ಹರೀಶ್ ನಾಯ್ಕ, ಅಮಿತ್ ಶೆರೋ ನ್, ಸುಮಿತ್ ಸಿಂಗ್. ದಬಾಂಗ್ ಡೆಲ್ಲಿ
ನಾಯಕ: ಜೋಗಿಂದರ್ ನರ್ವಾಲ್
ಚಂದ್ರನ್ ರಜಿಂತ್, ವಿಶಾಲ್ ಮಾನೆ, ವಿರಾಜ್ ಲಾಂಡ್‌ಗೆ, ಪವನ್ ಕುಮಾರ್, ರವೀಂದರ್ ಪಹಾಲ್, ರಾಜೇಶ್ ನರ್ವಾಲ್, ಶಬೀರ್ ಬಾಬು,ಸಿದ್ಧಾರ್ಥ್, ಖೋಮ್ಸನ್ ತೋಂಗ್ ಕಾಮ್, ಅನಿಲ್ ಕುಮಾರ್, ಕಮಾಲ್ ಕಿಶೋರ್ ಜಾಟ್, ಯೋಗೀಶ್ ಹೂಡಾ, ಸತ್ಪಾಲ್ ನರ್ವಾಲ್, ಮಿರಾಜ್ ಶೇಖ್, ತುಷಾರ್ ಬಲರಾಮ್, ತಾಪಸ್ ಪಾಲ್,ವಿಶಾಲ್, ನವೀನ್. ಗುಜರಾತ್ ಫಾರ್ಚೂನ್‌ಜೈಂಟ್ಸ್
ನಾಯಕ: ಸುನೀಲ್ ಕುಮಾರ್
ಕೆ. ಪ್ರಪಂಜನ್, ಪ್ರವೇಶ್ ಭೈಂಸ್‌ವಾಲ್, ಋತುರಾಜ್ ಕೊರವಿ, ಅಜಯ್ ಕುಮಾರ್, ದಾಂಗ್ ಜಿಯೋನ್ ಲೀ, ಹದಿ ಒಸ್ತೋರಕ್, ಶುಭಂ ಪಾಲ್‌ಕರ್, ಅಮಿತ್ ಶರ್ಮ, ಧರ್ಮೇಂದರ್, ಸಚಿನ್, ಸುನೀಲ್ ಕುಮಾರ್, ಮಹೇಂದ್ರ ರಜಪುತ್, ಲಲಿತ್ ಚೌಧರಿ, ವಿಕ್ರಮ್ ಖಂಡೋಲ, ಅನಿಲ್. ಹರ್ಯಾಣ ಸ್ಟೀಲರ್
ನಾಯಕ: ಸುರೇಂದರ್ ನಾಡ
ಮೋನು ಗೋಯತ್, ವಿಕಾಸ್ ಖಂಡೋಲ, ವಜೀರ್ ಸಿಂಗ್, ಎಂ.ಡಿ. ಜಾಕಿರ್ ಹುಸೇನ್, ಪ್ರತೀಕ್, ಪ್ಯಾಟ್ರಿಕ್ ನಜುಮುವೈ, ಕುಲ್‌ದೀಪ್ ಸಿಂಗ್, ಮಯೂರ್ ಶಿವತಾರ್ಕರ್, ನೀರಜ್ ಕುಮಾರ್, ವಿಕಾಸ್, ಅರುಣ್ ಕುಮಾರ್. ಜೈಪುರ್ ಪಿಂಕ್ ಪ್ಯಾಂಥರ್
ನಾಯಕ: ಅನೂಪ್ ಕುಮಾರ್
ದೀಪಕ್ ನಿವಾಸ್ ಹೂಡಾ, ಸಂದೀಪ್ ಧುಲ್, ಮೋಹಿತ್ ಚಿಲ್ಲರ್, ಕೆ. ಸೆಲ್ವಮಣಿ, ಬಾಜೀರಾವ್ ಹೊಡಗೆ, ಚಾಂಗ್ ಕೊ, ಡೇವಿಡ್ ಮೊಸಬಾಯಿ, ಗಂಗಾಧರಿ ಮಲ್ಲೆಶ್, ಸಿನಿಲ್ ಸಿದ್ದಗವಳಿ, ಆನಂದ್ ಪಾಟೀಲ್, ಶಿವರಾಮ ಕೃಷ್ಣ, ಬೃಜೇಂದ್ರ ಚೌಧರಿ, ಲೊಕೇಶ್ ಕೌಶಿಕ್. ಪಾಟ್ನಾ ಪೈರೇಟ್ಸ್
ನಾಯಕ: ಪ್ರದೀಪ್ ನರ್ವಾಲ್
ದೀಪಕ್ ನರ್ವಾಲ್, ವಿಕಾಶ್ ಕಾಳೆ, ಕುಲ್‌ದೀಪ್ ಸಿಂಗ್, ಮನ್‌ಜಿತ್, ತುಷಾರ್ ಪಾಟೀಲ್, ಸುರೇಂದರ್ ಸಿಂಗ್, ತೆಯೋಕ್ ಇಒಮ್, ಹ್ಯುನಿಲ್ ಪಾರ್ಕ್, ಜೆಮಿನ್ ಲೀ, ವಿಕಾಸ್ ಜಗ್ಲಾನ್, ವಿಜಯ್ ಕುಮಾರ್, ರವೀಂದ್ರ ಕುಮಾರ್ , ಮನೀಷ್ ಕುಮಾರ್, ಪರ್ವೀಣ್ ಬಿರ್ವಾಲ್, ಜೈದೀಪ್, ಜವಾಹರ್ ದಾಗರ್, ಅರವಿಂದ ಕುಮಾರ್, ವಿಜಯ್. ಪುನೇರಿ ಪಲ್ಟಾನ್
ನಾಯಕ: ಗಿರೀಶ್ ಎರ್ನಾಕ್
ನಿತಿನ್ ತೋಮರ್, ವಿನೋದ್ ಕುಮಾರ್, ಸಂಜಯ್ ಶ್ರೇಷ್ಠ, ಪ್ರವೇಶ್, ಅಕ್ಷಯ್ ಜಾಧವ್, ಭಜರಂಗ್, ತಕಮಿತ್ಸು ಕೊನೊ, ಸಂದೀಪ್ ನರ್ವಾಲ್, ರಾಜೇಶ್ ಮೊಂಡಲ್, ಮೋರೆ ಜಿ.ಬಿ., ವಿಕಾಶ್ ಖತ್ರಿ, ರಿಂಕು ನರ್ವಾಲ್, ಮೋನು, ಅಮಿತ್ ಕುಮಾರ್. ತಮಿಳ್ ತಲೈವಾಸ್
ನಾಯಕ: ಅಜಯ್ ಠಾಕೂರ್
ಸುಕೇಶ್ ಹೆಗ್ಡೆ , ದರ್ಶನ್ ಜೆ., ಮನ್‌ಜೀತ್ ಚಿಲ್ಲರ್, ಜಶ್‌ವೀರ್ ಸಿಂಗ್, ಕೆ. ಜಯಸೆಲನ್, ಅತುಲ್ ಎಂ.ಎಸ್., ಚಾನ್ ಸಿಕ್ ಪಾರ್ಕ, ಅನಿಲ್ ಶರ್ಮ, ಅಭಿನಂದನ್ ಚಾಂಡೇಲ, ಡಿ. ಗೋಪು, ವಿಮಲ್ ರಾಜ್, ಜೆ ಮಿನ್ ಲೀ, ಅಮಿತ್ ಹೂಡಾ, ಸಿ.ಅರುಣ್, ಡಿ. ಪ್ರತಾಪ್, ರಜನೀಶ್. ಯು.ಪಿ. ಯೋಧ
ನಾಯಕ: ರಿಶಾಂಕ್ ದೇವಾಡಿಗ
ಪ್ರಶಾಂತ್ ಕುಮಾರ್ ರೈ, ಜೀವಾ ಕುಮಾರ್, ಶ್ರೀಕಾಂತ್ ಜಾಧವ್, ಸಚಿನ್ ಕುಮಾರ್, ದರ್ಶನ್ ಕದಿಯಾನ್, ಸಿವೋಂಗ್ ರಿಯೋಲ್ ಕಿಮ್, ಸುಲೇಮಾನ್ ಕಬೀರ್, ನರೇಂದರ್, ರೋಹಿತ್ ಕುಮಾರ್ ಚೌಧರಿ, ಅಮಿತ್, ಭಾನು ಪ್ರತಾಪ್ ತೋಮರ್, ಪಂಕಜ್, ನಿತೇಶ್ ಕುಮಾರ್, ಆಜಾದ್ ಸಿಂಗ್, ಅಕ್ರಮ್ ಶೇಖ್. ಯು ಮುಂಬಾ
ನಾಯಕ: ಫಜಲ್ ಅತ್ರಾಚಲಿ
ಧರ್ಮರಾಜನ್ ಚೆರಲತನ್, ಅಭಿಷೇಕ್ ಸಿಂಗ್, ಸಿದ್ಧಾರ್ಥ ದೇಸಾಯಿ, ವಿನೋದ್ ಕುಮಾರ್, ಅಬೋಫಲ್, ಆರ್. ಶ್ರೀರಾಮ್, ರೋಹಿತ್ ಬಲಿಯನ್,ಹದಿ ತಾಜಿಕ್, ಆದಿನಾಥ್ ಗಾವಳಿ, ಇ. ಸುಭಾಷ್, ಸುರೇಂದರ್ ಸಿಂಗ್, ಶಿವ್ ಓಮ್, ಗೌರವ್ ಕುಮಾರ್, ಮೋಹಿತ್ ಬಲ್ಯನ್, ಅನಿಲ್. ತೆಲುಗು ಟೈಟಾನ್ಸ್
ನಾಯಕ: ವಿಶಾಲ್ ಭಾರಧ್ವಾಜ್
ರಾಹುಲ್ ಚೌಧರಿ, ಅಬೋಝರ್ ಮೊಹಜೆರ್ಮಿ ಘನಿ, ಫರ್ಹಾದ್ ರಹಿಮಿ ಮಿಲಗರ್ದನ್, ರಾಕೇಶ್ ಸಿಂಗ್ ಕುಮಾರ್, ಮನೋಜ್ ಕುಮಾರ್, ಸಂಕೇತ್ ಚೌಹಾಣ್, ಮಹೇಂದರ್ ರೆಡ್ಡಿ, ನಿಲೇಶ್ ಸಾಲುಂಕೆ, ಮೊಹೆನ್ ಮಗ ಸೌದೂಜಫಾರಿ, ರಕ್ಷಿತ್, ಸೋಮ್ ಬೀರ್, ಕಮಲ್ ಸಿಂಗ್, ಅಂಕಿತ್ ಬೇನಿವಾಲ್, ಆನಂದ್.