ಹೈದರಾಬಾದ್: ಪ್ರೊ ಕಬಡ್ಡಿ ಲೀಗ್ನ 9ನೇ ಋತುವಿನ ಪ್ಲೇಆಫ್ಸ್ ಮತ್ತು ಫೈನಲ್ ಪಂದ್ಯವು ಮುಂದಿನ ತಿಂಗಳು ಮುಂಬಯಿಯಲ್ಲಿ ನಡೆಯಲಿದೆ ಎಂದು ಲೀಗ್ನ ಸಂಘ ಟಕರು ಗುರುವಾರ ತಿಳಿಸಿದ್ದಾರೆ.
ಡಿ. 13ರಂದು ಎಲಿಮಿನೇಟರ್ ಒಂದು ಮತ್ತು ಎಲಿಮಿನೇಟರ್ ಎರಡು ನಡೆಯಲಿದ್ದರೆ ಸೆಮಿಫೈನಲ್ಸ್ ಡಿ. 15 ರಂದು ಜರಗಲಿದೆ. ಅದ್ದೂರಿಯ ಫೈನಲ್ ಡಿ. 17ರಂದು ನಡೆಯಲಿದೆ.
ಹೈದರಾಬಾದ್ ಲೆಗ್ನ ಪಂದ್ಯಗಳು ಶುಕ್ರವಾರ ಆರಂಭವಾಗಲಿದ್ದು ಅಗ್ರ ನಾಲ್ಕು ಸ್ಥಾನಗಳಿಗಾಗಿ 12 ತಂಡ ಗಳು ತೀವ್ರ ಸ್ಪರ್ಧೆ ನೀಡಲಿವೆ. ಹೈದ
ರಾಬಾದ್ನ ಪಂದ್ಯಗಳು ಡಿ. 10ರ ವರೆಗೆ ಸಾಗಲಿದ್ದು ಪ್ಲೇಆಫ್ಗೆ ತೇರ್ಗಡೆಯಾಗುವ ತಂಡಗಳು ಯಾವುದೆಂದು ನಿರ್ಧಾರವಾಗಲದೆ.
ಸದ್ಯ ಅಂಕಪಟ್ಟಿಯಲ್ಲಿ ಬೆಂಗಳೂರು ಬುಲ್ಸ್ ಅಗ್ರಸ್ಥಾನದಲ್ಲಿದೆ. ಬುಲ್ಸ್ ಆಡಿದ 14 ಪಂದ್ಯಗಳಲ್ಲಿ 9ರಲ್ಲಿ ಜಯ ಸಾಧಿಸಿದ್ದು 51 ಅಂಕ ಹೊಂದಿದೆ. 49 ಅಂಕ ಹೊಂದಿರುವ ಪುನೇರಿ ಪಲ್ಟಾನ್ಸ್ ಎರಡನೇ ಮತ್ತು 48 ಅಂಕ ಗಳಿಸಿರುವ ಜೈಪುರ ಮೂರನೇ ಸ್ಥಾನದಲ್ಲಿದೆ.
Related Articles
ಶುಕ್ರವಾರ ಮೂರು ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ಪುನೇರಿ ತಂಡವು ಹರಿಯಾಣವನ್ನು ಎದುರಿಸಲಿದ್ದರೆ ದ್ವಿತೀಯ ಪಂದ್ಯದಲ್ಲಿ ಬಂಗಾಲ ವಾರಿಯರ್ ತಂಡವು ತೆಲುಗು ಟೈಟಾನ್ಸ್ ವಿರುದ್ಧ ಹೋರಾಡಲಿದೆ. ಮೂರನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವು ಗುಜರಾತ್ ತಂಡವನ್ನು ಎದುರಿಸಲಿದೆ.