Advertisement
ದ್ವಿತೀಯ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಆರಂಭದಲ್ಲಿ ಭರ್ಜರಿಯಾಗಿ ಆಡಿ ಮೊದಲ ಅವಧಿಯಲ್ಲಿ ಮುನ್ನಡೆ ಸಾಧಿಸಿತ್ತು. ಆದರೆ ದ್ವಿತೀಯ ಅವಧಿಯಲ್ಲಿ ತಿರುಗಿ ಬಿದ್ದ ತಮಿಳು ತಲೈವಾಸ್ ಮುನ್ನಡೆ ಸಾಧಿಸಿತಲ್ಲದೇ ಅಂತಿಮವಾಗಿ ಪಂದ್ಯವನ್ನು 31-31 ಅಂಕಗಳಿಂದ ಟೈಗೊಳಿಸಲು ಯಶಸ್ವಿಯಾಯಿತು. ಇದು ಈ ಋತುವಿನ ಮೊದಲ ಎರಡು ಟೈ ಪಂದ್ಯಗಳಾಗಿವೆ.
ಪಾಟ್ನಾ ಪರ ಖ್ಯಾತ ದಾಳಿಗಾರ ಸಚಿನ್ ಉತ್ತಮ ದಾಳಿ ನಡೆಸಿದರು. ಅವರು 21 ಬಾರಿ ಎದುರಾಳಿಯ ಅಂಕಣದೊಳಗೆ ದಾಳಿ ಮಾಡಿದರು. ಈ ಪೈಕಿ ಸ್ಪರ್ಶದಿಂದ 7, ಬೋನಸ್ ರೂಪದಲ್ಲಿ 1 ಅಂಕ ಪಡೆದರು. ಒಟ್ಟಾರೆ ಅವರ ಅಂಕ 8. ಇವರಿಗೆ ಆಲ್‌ರೌಂಡರ್ ರೋಹಿತ್ ಗುಲಿಯ ಉತ್ತಮ ನೆರವು ನೀಡಿದರು. 11 ಬಾರಿ ದಾಳಿ ಮಾಡಿದ ರೋಹಿತ್ ಒಟ್ಟು 6 ಅಂಕಗಳನ್ನು ಪಡೆದರು. ಎರಡು ಬಾರಿ ಕ್ಯಾಚ್ ಯತ್ನ ನಡೆಸಿದರೂ ಅದರಲ್ಲಿ ಯಶಸ್ವಿಯಾಗಲಿಲ್ಲ. ಎಸ್.ವಿಶ್ವಾಸ್ 4 ಅಂಕ ಪಡೆದು, ದಾಳಿಯಲ್ಲಿ ಯಶಸ್ವಿಯೆನಿಸಿಕೊಂಡರು. ಪುನೇರಿ ಪರ ಮೂವರು ಉತ್ತಮ ದಾಳಿ ನಡೆಸಿದರು. ನಾಯಕ ಅಸ್ಲಾಮ್ ಇನಾಮಾªರ್ 13 ಬಾರಿ ಎದುರಾಳಿಗಳ ಕೋಟೆಯೊಳಗೆ ನುಗ್ಗಿ 7 ಅಂಕ ಗಳಿಸಿದರು. ಖ್ಯಾತ ದಾಳಿಗಾರ ಮೋಹಿತ್ ಗೋಯತ್ 15 ಬಾರಿ ಎದುರಾಳಿಗಳ ಅಂಕಣಕ್ಕೆ ನುಗ್ಗಿ 7 ಅಂಕ ಗಳಿಸಿದರು. ವಿಶೇಷವೆಂದರೆ ರಕ್ಷಣೆಯಲ್ಲೂ ಯಶಸ್ವಿಯಾದ ಅವರು 1 ಅಂಕ ಪಡೆದರು.
Related Articles
Advertisement