Advertisement
ಜೈಪುರ್ 31-26 ಅಂತರದಿಂದ ಪುನೇರಿಯನ್ನು ಕೆಡವಿತು. ರೈಡರ್ ಅರ್ಜುನ್ ದೇಶ್ವಾಲ್ 11 ಅಂಕಗಳೊಂದಿಗೆ ಜೈಪುರ್ ತಂಡದ ಹೀರೋ ಎನಿಸಿದರು. ನಾಯಕ ಸಂದೀಪ್ ಧುಲ್ ಮತ್ತು ಆಲ್‌ರೌಂಡರ್ ಸಾಹುಲ್ ಕುಮಾರ್ ತಲಾ 4 ಅಂಕ ಗಳಿಸಿದರು. ಇದು ಜೈಪುರ್ 7 ಪಂದ್ಯಗಳಲ್ಲಿ ಸಾಧಿಸಿದ 3ನೇ ಜಯ.
Related Articles
Advertisement
ಇದನ್ನೂ ಓದಿ:ದೇಶದ ಜಿಡಿಪಿಗೆ ಶೇ.9.2ರ ನಿರೀಕ್ಷೆ; ಶರವೇಗದ ಅರ್ಥ ವ್ಯವಸ್ಥೆಯತ್ತ ದಾಪುಗಾಲು
ಹರ್ಯಾಣ ಪರ ಸಂಘಟಿತ ಆಟ ಕಂಡುಬಂತು. ಆಲ್‌ರೌಂಡರ್ ಮೀತು ದಾಳಿಯಲ್ಲಿ ಮಿಂಚಿದರು. 15 ಬಾರಿ ಎದುರಾಳಿ ಅಂಕಣಕ್ಕೆ ದಾಳಿ ಮಾಡಿ 10 ಅಂಕ ಸಂಪಾದಿಸಿದರು. ಆದರೆ ತಂಡ ರಕ್ಷಣೆಯಲ್ಲಿ ಮಿಂಚಲಿಲ್ಲ. ವಿಕಾಸ್ ಕಂಡೋಲ 16 ಬಾರಿ ದಾಳಿ ಮಾಡಿ 9 ಅಂಕ ಸಂಪಾದಿಸಿದರು. ರಕ್ಷಣೆಯಲ್ಲಿ ಮೋಹಿತ್ (4), ಸುರೇಂದರ್ ನಾಡಾ (3) ಉತ್ತಮ ಪ್ರದರ್ಶನ ನೀಡಿದರು.
ಬೆಂಗಾಲ್ ಪರ ಮಣಿಂದರ್ ಸಿಂಗ್ ಅಮೋಘ ದಾಳಿ ಸಂಘಟಿಸಿದರು. ಅವರು 25 ಬಾರಿ ಎದುರಾಳಿ ಅಂಕಣದೊಳಕ್ಕೆ ನುಗ್ಗಿ 14 ಅಂಕ ಸಂಪಾದಿಸಿದರು. ಮೊಹಮ್ಮದ್ 10 ಬಾರಿ ದಾಳಿ ನಡೆಸಿ 6 ಅಂಕ ಗಳಿಸಿದರು.