Advertisement

ಕಳೆ ಗುಂದುತ್ತಿದೆಯೇ ಪ್ರೋ ಕಬಡ್ಡಿ?

03:25 AM Oct 27, 2018 | |

ಅಭಿಮಾನಿಗಳಲ್ಲಿ ಕ್ರೇಜ್‌ ಹುಟ್ಟಿಸಿದ್ದ, ಟೀವಿ ಟಿಆರ್‌ಪಿ ರೇಟ್‌ ಚಿಂದಿ ಉಡಾಯಿಸಿದ್ದ, ಕ್ರಿಕೆಟ್‌ ಬಳಿಕ ಅತ್ಯಂತ ಯಶಸ್ವಿ ಲೀಗ್‌ ಎನಿಸಿಕೊಂಡಿದ್ದ ಪ್ರೊ ಕಬಡ್ಡಿ ತನ್ನ 6ನೇ ಆವೃತ್ತಿಯಲ್ಲಿ ಭಾರೀ ಕುಸಿತ ಕಂಡಿದೆ ಎನ್ನುವ ವಿಷಯ ಚರ್ಚೆಕೆ ಕಾರಣವಾಗಿದೆ. 

Advertisement

ಕಬಡ್ಡಿ ಆರಂಭವಾಗಿ 4 ವರ್ಷಗಳು  ಕಳೆಯುತ್ತಿದ್ದಂತೆ ಕೂಟದಲ್ಲಿ ತಂಡಗಳ ಸಂಖ್ಯೆಯನ್ನು ಸಂಘಕರು ಏರಿಸಿದ್ದಾರೆ. ಜತೆಗೆ ನಡೆಯುವ ಪಂದ್ಯಗಳು ಕೂಡ ಏರಿಕೆಯಾಗಿವೆ. ಮೊದಲ ಆವೃತ್ತಿಯಲ್ಲಿ ಕೇವಲ 37 ದಿನಗಳು ನಡೆಯುತ್ತಿದ್ದ ಪ್ರೋ ಕಬಡ್ಡಿ ಇದೀಗ 2 ತಿಂಗಳಿಗೂ ಹೆಚ್ಚು ಕಾಲ ನಡೆಯುತ್ತದೆ. ಜತೆಗೆ ಪಂದ್ಯಗಳು ಒಂದು ರಾಜ್ಯದಿಂದ ಮತ್ತೂಂದು ರಾಜ್ಯಕ್ಕೆ ಶಿಫ್ಟ್ ಆಗುತ್ತಿರುವುದು ಅಭಿಮಾನಿಗಳಿಗೆ ತೀವ್ರ ಬೇಸರ ಉಂಟುಮಾಡಿದೆ.

ಆವೃತ್ತಿಗೆ 60 ಪಂದ್ಯಗಳು:
ಅಪ್ಪಟ ದೇಶಿ ಕ್ರೀಡೆಯಾದ ಕಬಡ್ಡಿ ಮೊದಲ ಆವೃತ್ತಿ ಜುಲೈ 26ಕ್ಕೆ ಆರಂಭವಾಗಿ ಆಗಸ್ಟ್‌ 31ಕ್ಕೆ ಮುಕ್ತಾಯವಾಯಿತು. ಆ ಆವೃತ್ತಿಯಲ್ಲಿ ಒಟ್ಟು 8 ತಂಡಗಳು ಭಾಗಿಯಾಗಿದ್ದು, 56 ಪಂದ್ಯಗಳು ಹಾಗೂ ಪ್ಲೇ ಆಫ್ 4 ಪಂದ್ಯ ಸೇರಿ ಒಟ್ಟು  60 ಪಂದ್ಯಗಳು ನಡೆದವು. ಫೈನಲ್‌ನಲ್ಲಿ ಜೈಪುರ ಪಿಂಕ್‌ ಫ್ಯಾಂಥರ್ ಕಪ್‌ ಮುಡಿಗೇರಿಸಿಕೊಂಡರು. ಮೊದಲ ಆವೃತ್ತಿ ಕೇವಲ 37 ದಿನಗಳಲ್ಲಿ ಮುಗಿದು ಅಭಿಮಾನಿಗಳಿಗೆ ಮನರಂಜನೆ ನೀಡಿತ್ತು. ಪ್ರೋ ಕಬಡ್ಡಿಯ ಎರಡು, ಮೂರು ಹಾಗೂ ನಾಲ್ಕನೇ ಆವೃತ್ತಿಯಲ್ಲೂ 8 ತಂಡಗಳಿಂದ ಕೂಡಿತ್ತು. ಜುಲೈ 18 ರಿಂದ ಆಗಸ್ಟ್‌ 23ರ ವರೆಗೂ ಒಟ್ಟು 36 ದಿನಗಳ ಕಾಲ 60 ಪಂದ್ಯ ನಡೆದವು.

ಒಂದೇ ವರ್ಷದಲ್ಲಿ ಎರಡೆರಡು ಆವೃತ್ತಿ:
ಪ್ರೋ ಕಬಡ್ಡಿxಗೆ ದಿನೇ ದಿನೆ ಅಭಿಮಾನಿಗಳು ಹೆಚ್ಚಾಗುತ್ತಿದ್ದ ಕಾರಣ ಪಂದ್ಯ ಆಯೋಜಕರು 2016ರಲ್ಲಿ  ಒಂದೇ ವರ್ಷದಲ್ಲಿ ನಾಲ್ಕು ಮತ್ತು ಐದನೇ ಆವೃತ್ತಿಯ ಪ್ರೋ ಕಬಡ್ಡಿ ಪಂದ್ಯಾವಳಿಗಳನ್ನು ಆಯೋಜನೆ ಮಾಡಲಾಯಿತು. ಆದರಿಂದ ವರ್ಷಕ್ಕೆ ಒಮ್ಮೆ  ಮಾತ್ರ ಇದ್ದ ಪ್ರೋ ಕಬಡ್ಡಿ ಪಂದ್ಯಾವಳಿಗಳು ಎರಡೆರಡು ಬಾರಿ ಆಯೋಜನೆ ಆದ್ದರಿಂದ ಕ್ರೀಡಾಭಿಮಾನಿಗಳಲ್ಲಿ ಕಬಡ್ಡಿ ಬಗ್ಗೆ ಇದ್ದ ಉತ್ಸಾಹ ಕಡಿಮೆಯಾಗ ತೊಡಗಿತು. ಇದನ್ನು ಅರಿತ ಆಯೋಜಕರು ಕಳೆದ ವರ್ಷ 2017ರಲ್ಲಿ ಒಂದೇ ಆವೃತ್ತಿಯನ್ನು ನಡೆಸಿ ಮತ್ತೆ ಅಭಿಮಾನಿಗಳನ್ನು ಕಬಡ್ಡಿಯತ್ತ ಸೆಳೆಯಲು ಮುಂದಾದರು. ಆದರೆ ತಂಡ, ಪಂದ್ಯ, ದಿನ ಹೆಚ್ಚಾದಂತೆ ಅಭಿಮಾನಿಗಳಿಗೆ ಕಬಡ್ಡಿ ಬಗ್ಗೆ ಉತ್ಸಾಹ ಕುಗ್ಗುತ್ತಾ ಹೋಯಿತು ಎಂದು ಅಂದಾಜಿಸಲಾಗಿದೆ. 

 ಮೊದಲಿನ ಆಸಕ್ತಿ ಕಾಣಿಸುತ್ತಿಲ್ಲ:
2014ರಲ್ಲಿ ಪ್ರೊ ಕಬಡ್ಡಿ ಲೀಗ್‌ ಆರಂಭವಾಗಿ ವಿವಿಧ ಕ್ರೀಡೆಗಳಿಗೆ ಸಿಗದ ಮನ್ನಣೆ ಕೆಲವೇ ವರ್ಷಗಳಲ್ಲಿ ಕಬಡ್ಡಿಗೆ ಸಿಕ್ಕಿದ್ದೇನೋ ನಿಜ ಹಾಗೂ  ಕಳೆದ ನಾಲ್ಕೈದು ವರ್ಷಗಳಿಂದ ಪೊ› ಕಬಡ್ಡಿ ಜೋರಾಗಿ ಸದ್ದು ಮಾಡಿತ್ತು. ಅಲ್ಲದೆ, ಪೊ› ಕಬಡ್ಡಿ ಪಂದ್ಯಾವಳಿಯನ್ನು ವೀಕ್ಷಿಸುವವರ ಸಂಖ್ಯೆ ಕೂಡ ಹೆಚ್ಚಾಗಿತ್ತು, ಪ್ರೊ ಕಬಡ್ಡಿಯ ಸೊಬಗನ್ನು ವೀಕ್ಷಿಸಲು ನಗರಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಜನರು ಕಾಯುತ್ತಾ ಕುಳಿತು, ಪಂದ್ಯ ಪ್ರಾರಂಭವಾಯಿತೆಂದರೆ ಹಳ್ಳಿ ಜನರು ಮನೆ ಅಥವಾ ಅಂಗಡಿ ಮುಂಭಾಗದಲ್ಲಿ ಟಿವಿ ನೋಡಲು ಆಸಕ್ತಿ ತೋರಿಸುತ್ತಿದ್ದರು ಆದರೆ ಐದು ಮತ್ತು ಆರನೇ ಆವೃತ್ತಿ ನೋಡಲು ಜನ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. 5ನೇ ಆವೃತ್ತಿ ಮಾತ್ರ ಸ್ವಲ್ಪ ವಿಭಿನ್ನವಾಗಿ ಮಾಡಲು ಹೋಗಿ ಮ್ಯಾನೇಜ್‌ ಮೆಂಟ್‌ ಸ್ವಲ್ಪ ಎಡವಟ್ಟು ಮಾಡಿಕೊಂಡಿದ್ದಂತೂ ಸುಳ್ಳಲ್ಲ. 

Advertisement

ಈ ಹಿಂದಿನ ನಾಲ್ಕು ಆವೃತ್ತಿಗೆ ಹೊಲಿಸಿಕೊಂಡರೆ ಐದನೇ ಆವೃತ್ತಿ ಎಂದು ಮುಗಿಯುವುದೋ ಎಂಬ ನಿರುತ್ಸಾಹದಿಂದ ಅಭಿಮಾನಿಗಳು ಕಾಯುತ್ತಿದ್ದರು. ಇದಕ್ಕೆಲ್ಲಾ ಕಾರಣ ಅತಿಯಾದ ಆತ್ಮ ವಿಶ್ವಾಸ ಆಯೋಜಕರೂ 2017ರಲ್ಲಿ ಈ ಹಿಂದೆ ಇದ್ದ 8 ತಂಗಳ ಜೊತೆ ಮತ್ತೆ ನಾಲ್ಕು ಹೊಸ ತಂಡಗಳಾದ ಹರ್ಯಾಣ ಸ್ಟೀಲರ್, ಗುಜರಾತ್‌ ಫಾರ್ಚೂನ್‌ಜೈಂಟ್ಸ್‌,  ಯು.ಪಿ ಯೋಧ, ತಮಿಳ್‌ ತಲೈವಾಸ್‌ಗೆ ಅವಕಾಶ ನೀಡಿದರು, ಇದರಿಂದ ಒಟ್ಟು 12 ತಂಡಗಳು ಕೂಟದಲ್ಲಿ ಭಾಗವಹಿಸಿದವು. ಕೂಟದಲ್ಲಿ ತಂಡಗಳು ಹೆಚ್ಚಾದಂತೆ ಪಂದ್ಯಗಳು ಹಾಗೂ ಪಂದ್ಯಾವಳಿಗಳು ನಡೆಯುವ ದಿನಗಳು ಸಹ ಹೆಚ್ಚಾಗಿ ಅಭಿಮಾನಿಗಳಿಗೆ ಬೇಸರ, ಕಿರಿಕಿರಿಯಾಗ ತೊಡಗಿತು. ಐದನೇ ಆವೃತ್ತಿಯಲ್ಲಿ ಒಟ್ಟು 138 ಪಂದ್ಯಗಳ ಆಯೋಜನೆ ಹಾಗೂ ಬಿಡುವು ಕೊಡದೇ ಸುದೀರ್ಘ‌ ಮೂರುವರೆ ತಿಂಗಳು ದೇಶದ 11 ರಾಜ್ಯಗಳಲ್ಲಿ ಪ್ರೋ ಕಬಡ್ಡಿ ಪಂದ್ಯಗಳು ನಡೆದಿದ್ದು, ಕಬಡ್ಡಿ ಅಭಿಮಾನಿಗಳಲ್ಲಿ ಆಟದ ಬಗ್ಗೆ ಇದ್ದ ಆಸಕ್ತಿ ಕಡಿಮೆಯಾಗಲು ಕಾರಣವಾಯಿತು ಎಂದರೆ ತಪ್ಪಾಗಲಾರದು.

ಧನಂಜಯ ಆರ್‌.ಮಧು 

Advertisement

Udayavani is now on Telegram. Click here to join our channel and stay updated with the latest news.

Next