Advertisement

100ನೇ ಪಂದ್ಯ: ಗುಜರಾತ್‌ ವಿಜಯ

06:00 AM Dec 08, 2018 | |

ಹೈದರಾಬಾದ್‌: ಶುಕ್ರವಾರ ಮೊದಲ್ಗೊಂಡ ಪ್ರೊ ಕಬಡ್ಡಿಯ ಹೈದರಾಬಾದ್‌ ಆವೃತ್ತಿಯಲ್ಲಿ ಆತಿಥೇಯ ತೆಲುಗು ಟೈಟಾನ್ಸ್‌ ಸೋಲಿನ ಆರಂಭ ಕಂಡುಕೊಂಡಿದೆ. ಅದು ಗುಜರಾತ್‌  ವಿರುದ್ಧ 27-29ರಿಂದ ಎಡವಿತು. ಇದು ಪ್ರಸಕ್ತ ಪ್ರೊ ಕಬಡ್ಡಿ ಕೂಟದ 100ನೇ ಪಂದ್ಯವಾಗಿತ್ತು. ತಾರಾ ರೈಡರ್‌ಗಳಾದ ಪ್ರಪಂಚನ್‌ ಹಾಗೂ ಸಚಿನ್‌ ಸಾಹಸ ಮಯ ಆಟ ಪ್ರದರ್ಶಿಸಿ ಗುಜರಾತ್‌ ತಂಡವನ್ನು ಗೆಲುವಿನ ದಡ ಸೇರಿಸಿದರು. ಹೆಚ್ಚುವರಿ ಆಟಗಾರ ರಕ್ಷಿತ್‌ ಕೊನೆಯಲ್ಲಿ ತೆಲುಗು ಟೈಟಾನ್ಸ್‌ಗೆ 3 ಅಂಕ ತಂದುಕೊಟ್ಟು ಗೆಲುವಿನ ಆಸೆ ಚಿಗುರಿಸಿದರಾದರೂ ಇದರಿಂದ ಪ್ರಯೋಜನವಾಗಲಿಲ್ಲ.

Advertisement

ಗುಜರಾತ್‌ ಅಬ್ಬರದ ಆಟ
ಗುಜರಾತ್‌ ತಂಡದ ಪರ ತಾರಾ ರೈಡರ್‌ ಕೆ. ಪ್ರಪಂಚನ್‌ (10 ಅಂಕ) ಹಾಗೂ  ಸಚಿನ್‌ (9 ಅಂಕ) ರೈಡಿಂಗ್‌ ಮೂಲಕ ಎದುರಾಳಿ ಲೆಕ್ಕಾಚಾರವನ್ನೆಲ್ಲ ತಲೆಕೆಳಗಾಗಿಸಿದರು. ತೆಲುಗು ಟೈಟಾನ್ಸ್‌ನ ಅನುಭವಿ ರೈಡರ್‌ ರಾಹುಲ್‌ ಚೌಧರಿ ತಂಡದ ಪರ ವೈಯಕ್ತಿಕ ಸರ್ವಾಧಿಕ 8 ಅಂಕ ದಾಖಲಿಸಿದರು. ಉಳಿದಂತೆ ಎಲ್ಲ ರೈಡರ್‌ಗಳು ವಿಫ‌ಲವಾದ್ದರಿಂದ ಟೈಟಾನ್ಸ್‌ ಕೊನೆಯಲ್ಲಿ 2 ಅಂಕಗಳ ಅಂತರದಿಂದ ಪಂದ್ಯವನ್ನು ಕಳೆದುಕೊಂಡಿತು.

ಪಾಟ್ನಾ ಪೈರೇಟ್ಸ್‌ ಗೆಲುವು
ದ್ವಿತೀಯ ಪಂದ್ಯದಲ್ಲಿ  ಪಾಟ್ನಾ  ತಂಡ ಪುನೇರಿ ವಿರುದ್ಧ 53-36 ಅಂತರದ ಜಯ ಒಲಿಸಿಕೊಂಡಿತು.

ಇಂದಿನ ಪಂದ್ಯಗಳು
1. ಮುಂಬಾ-ಬೆಂಗಾಲ್‌
ಸ್ಥಳ: ಹೈದರಾಬಾದ್‌
ಆರಂಭ: ರಾತ್ರಿ 8.00

2. ತೆಲುಗು-ಜೈಪುರ್‌
ಸ್ಥಳ: ಹೈದರಾಬಾದ್‌
ಆರಂಭ: ರಾತ್ರಿ 9.00

Advertisement
Advertisement

Udayavani is now on Telegram. Click here to join our channel and stay updated with the latest news.

Next