ನಾಯಕ ಆಶು ಮಲಿಕ್ 14 ಅಂಕ ಗಳಿಸಿ ಡೆಲ್ಲಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಹರ್ಯಾಣ ಪರ ರೈಡರ್ ಸಿದ್ಧಾರ್ಥ್ ದೇಸಾಯಿ 11 ಅಂಕ ತಂದಿತ್ತರು.
Advertisement
ದಿನದ 2ನೇ ಪಂದ್ಯದಲ್ಲಿ ತಮಿಳ್ ತಲೈವಾಸ್ ಆತಿಥೇಯ ತೆಲುಗು ಟೈಟಾನ್ಸ್ ತಂಡವನ್ನು 54-29 ಅಂಕಗಳ ಭಾರೀ ಅಂತರದಿಂದ ಕೆಡವಿತು. ಇದರೊಂದಿಗೆ ಟೈಟಾನ್ಸ್ 16 ಪಂದ್ಯಗಳಲ್ಲಿ 14ನೇ ಸೋಲನುಭವಿಸಿ ತನ್ನ ಸಂಕಟವನ್ನು ಮುಂದುವರಿಸಿತು. ತಮಿಳ್ 15 ಪಂದ್ಯಗಳಲ್ಲಿ 6ನೇ ಜಯ ಸಾಧಿಸಿತು. ತಲೈವಾಸ್ ಪರ ಅಜಿಂಕ್ಯ ಪವಾರ್ 11, ನಾಯಕ ಸಾಗರ್ 8 ಅಂಕ ಗಳಿಸಿದರು.