Advertisement

ಪ್ರೊ ಕಬಡ್ಡಿ: ಜೈಪುರ ಓಟಕ್ಕೆ ಡೆಲ್ಲಿ ಬ್ರೇಕ್‌

01:50 AM Aug 06, 2019 | Team Udayavani |

ಪಾಟಲಿಪುತ್ರ (ಬಿಹಾರ): ನವೀನ್‌ ಕುಮಾರ್‌ ಅವರ ಅಮೋಘ ರೈಡಿಂಗ್‌ (12 ಅಂಕ) ಹಾಗೂ ಚಂದ್ರನ್‌ ರಂಜಿತ್‌ ಅವರ ಆಲ್‌ರೌಂಡ್‌ (10 ಅಂಕ) ಪ್ರದರ್ಶನದಿಂದಾಗಿ ಪ್ರೊ ಕಬಡ್ಡಿ 7ನೇ ಆವೃತ್ತಿ ಪಾಟಲಿಪುತ್ರ ಚರಣದಲ್ಲಿ ದಬಾಂಗ್‌ ಡೆಲ್ಲಿ 35-24 ಅಂಕಗಳ ಅಂತರದಿಂದ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡವನ್ನು ಮಣಿಸಿದೆ. ಸತತ 4 ಜಯದಿಂದ ಬೀಗುತ್ತಿದ್ದ ಜೈಪುರ್‌ಗೆ ಎದುರಾದ ಮೊದಲ ಆಘಾತ ಇದಾಗಿದೆ. ಇತ್ತ ಡೆಲ್ಲಿ ತನ್ನ ಗೆಲುವಿನ ಸಂಖ್ಯೆಯನ್ನು ನಾಲ್ಕಕ್ಕೆ ಹೆಚ್ಚಿಸಿಕೊಂಡಿದೆ.

Advertisement

ಸೋಮವಾರ ಪಾಟಲಿಪುತ್ರ ನ್ಪೋರ್ಟ್ಸ್ ಕಾಂಪ್ಲೆಕ್ಸ್‌ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲ ಅವಧಿಯಿಂದಲೇ ಜೈಪುರ್‌ ಮೇಲೆ ಡೆಲ್ಲಿ ಸವಾರಿ ಮಾಡಿತು. ಮೊದಲ ಅವಧಿ ಮುಕ್ತಾಯಕ್ಕೆ ಡೆಲ್ಲಿ 16-10 ಅಂಕಗಳ ಅಂತರದ ಮುನ್ನಡೆ ಪಡೆದುಕೊಂಡಿತ್ತು. ಎರಡನೇ ಅವಧಿಯಲ್ಲೂ ಡೆಲ್ಲಿ ಇದೇ ಮುನ್ನಡೆ ಕಾಯ್ದುಕೊಂಡಿದ್ದಲ್ಲದೆ 11 ಅಂಕಗಳ ಅಂತರದಿಂದ ಜಯಭೇರಿ ಬಾರಿಸಿತು.

ಗುಜರಾತ್‌ಗೆ ಪುನೇರಿ ಗುದ್ದು
ತೀವ್ರ ಪೈಪೋಟಿಯಿಂದ ಕೂಡಿದ ದಿನದ ದ್ವಿತೀಯ ಮುಖಾಮುಖೀಯಲ್ಲಿ ಪುನೇರಿ ಪಲ್ಟಾನ್‌ 33-31 ಅಂತರದಿಂದ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ಗೆ ಸೋಲುಣಿಸಿತು.

Advertisement

Udayavani is now on Telegram. Click here to join our channel and stay updated with the latest news.

Next