ಬೆಂಗಳೂರು: ಬೆಂಗಳೂರು ಬುಲ್ಸ್ ಪ್ರಸಕ್ತ ಪ್ರೊ ಕಬಡ್ಡಿ ಕೂಟದಲ್ಲಿ ಅಪರೂಪದ ಸೋಲನುಭವಿಸಿದೆ. ರವಿವಾರದ ಪಂದ್ಯದಲ್ಲಿ ಅದು ಯುಪಿ ಯೋಧಾಸ್ ಎದುರಿನ ಮುಖಾಮುಖಿಯನ್ನು 27-42 ಅಂತರದಿಂದ ಕಳೆದುಕೊಂಡಿತು.
ಇದು 8 ಪಂದ್ಯಗಳಲ್ಲಿ ಬುಲ್ಸ್‌ಗೆ ಎದುರಾದ ಕೇವಲ 2ನೇ ಸೋಲು.
ಯೋಧಾಸ್‌ಗೆ ಒಲಿದ ಕೇವಲ 2ನೇ ಜಯ. ಬುಲ್ಸ್ ನಾಯಕ ಪವನ್ ಸೆಹ್ರಾವತ್ ಪರಿಣಾಮ ಬೀರುವಲ್ಲಿ ವಿಫಲರಾದರು. 17 ರೈಡ್‌ಗಳಲ್ಲಿ ಅವರಿಗೆ ಬರೀ 5 ಅಂಕವನ್ನಷ್ಟೇ ತರಲು ಸಾಧ್ಯವಾಯಿತು. ಬದಲಿ ಆಟಗಾರನಾಗಿ ಕಣಕ್ಕಿಳಿದ ರೈಡರ್ ಭರತ್ ಗರಿಷ್ಠ 11 ಅಂಕ ಗಳಿಸಿ ಕೊಟ್ಟರು. ಯುಪಿ ಯೋಧಾಸ್ ಪರ ರೈಡರ್ ಶ್ರೀಕಾಂತ್ ಜಾಧವ್ 15 ಅಂಕ ತಂದಿತ್ತರು. ಸುರೇಂದರ್ ಗಿಲ್ ಮತ್ತು ಮೊಹಮ್ಮದ್ ತಾ ತಲಾ 5 ಅಂಕ ತಂದಿತ್ತರು.
ಇದನ್ನೂ ಓದಿ:ಅಭ್ಯಾಸಕ್ಕೆ ಇಳಿದ ಕೊಹ್ಲಿ: ನಿರ್ಣಾಯಕ ಮೂರನೇ ಟೆಸ್ಟ್‌ಗೆ ಮರಳುವ ಸಾಧ್ಯತೆ
ಪುನೇರಿಗೆ 3ನೇ ಜಯ: ಮೊದಲ ಪಂದ್ಯದಲ್ಲಿ ಪುನೇರಿ ಪಲ್ಟಾನ್ಸ್ 39-27 ಅಂತರದಿಂದ ಬೆಂಗಾಲ್ ಟೈಗರ್ಗೆ ಸೋಲುಣಿಸಿ ತನ್ನ 3ನೇ ಜಯವನ್ನು ದಾಖಲಿಸಿತು. ರೈಡರ್ ಅಸ್ಲಾಮ್ ಇನಾಮಾªರ್ ಅವರ ಅಮೋಘ ಪ್ರದರ್ಶನ ಪುನೇರಿ ಜಯದಲ್ಲಿ ಮಹತ್ವದ ಪಾತ್ರ ವಹಿಸಿತು. ಅವರು 23 ರೈಡ್ ನಡೆಸಿ 17 ಅಂಕ ತಂದರು. 4 ಬೋನಸ್ ಅಂಕವೂ ಇದರಲ್ಲಿ ಸೇರಿದೆ. ಡಿಫೆಂಡರ್ ಅಭಿನೇಶ್ ನಾದರಾಜನ್ 5 ಅಂಕ ಗಳಿಸಿದರು. ಬೆಂಗಾಲ್ ಪರ ನಾಯಕ ಮಣಿಂದರ್ ಸಿಂಗ್ 13 ರೈಡಿಂಗ್ ಅಂಕ ತಂದಿತ್ತರು.