Advertisement
ಒಟ್ಟು 6 ತಂಡಗಳು ದ್ವಿತೀಯ ಸುತ್ತು ತಲುಪಿವೆ. ಮೊದಲೆರಡು ಸ್ಥಾನ ಅಲಂಕರಿಸಿದ ಜೈಪುರ್ ಪಿಂಕ್ ಪ್ಯಾಂಥರ್ (82 ಅಂಕ) ಮತ್ತು ಪುನೇರಿ ಪಲ್ಟಾನ್ (80 ಅಂಕ) ನೇರವಾಗಿ ಸೆಮಿಫೈನಲ್‌ಗೆ ಬಂದಿವೆ. 3ರಿಂದ 6ನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್ ಸುತ್ತಿನಲ್ಲಿ ಅದೃಷ್ಟಪರೀಕ್ಷೆಗೆ ಇಳಿಯಲಿವೆ. ಇಲ್ಲಿ ಗೆದ್ದ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಸೋತ ತಂಡದ ಅಭಿಯಾನ ಕೊನೆಗೊಳ್ಳಲಿದೆ.
Related Articles
Advertisement
ದಬಾಂಗ್ ಡೆಲ್ಲಿ 6ನೇ ಸ್ಥಾನಿಯಾಗಿ ಲೀಗ್ ವ್ಯವಹಾರ ಮುಗಿಸಿದೆ. 10 ಪಂದ್ಯಗಳನ್ನು ಗೆದ್ದು, ಹತ್ತರಲ್ಲಿ ಸೋತಿದೆ. 2 ಪಂದ್ಯ ಡ್ರಾಗೊಂಡಿದೆ.
ಬುಲ್ಸ್ 2-0 ಮುನ್ನಡೆಲೀಗ್ ಹಂತದಲ್ಲಿ ಡೆಲ್ಲಿ ವಿರುದ್ಧ ಆಡಿದ ಎರಡೂ ಪಂದ್ಯಗಳಲ್ಲಿ ಬುಲ್ಸ್ ಜಯ ಸಾಧಿಸಿದ್ದರಿಂದ ಸಹಜವಾಗಿಯೇ ಹೆಚ್ಚಿನ ಆತ್ಮವಿಶ್ವಾಸ ಹೊಂದಿದೆ. ಎರಡೂ ಪಂದ್ಯಗಳ ಆರಂಭದಲ್ಲಿ ಡೆಲ್ಲಿಯೇ ಮುಂದಿದ್ದರೂ ಕೊನೆಯಲ್ಲಿ ಬುಲ್ಸ್ ತಿರುಗಿ ಬಿದ್ದು ಗೆಲುವು ಕಾಣುವಲ್ಲಿ ಯಶಸ್ವಿಯಾಗಿತ್ತು. ರೈಡರ್ ಭರತ್ ಪ್ರಮುಖ ಆಟಗಾರ. ವಿಕಾಸ್ ಕಂಡೋಲ ಗೇಮ್ ಚೇಂಜರ್ ಆಗಬೇಕಿದೆ. ಸೌರಭ್ ನಂದಲ್ ಉತ್ತಮ ಲಯದಲ್ಲಿದ್ದಾರೆ. ಅಮನ್ ಫಾರ್ಮ್ ಗೆ ಮರಳಿದ್ದರಿಂದ ಬುಲ್ಸ್ ಡಿಫೆನ್ಸ್‌ಗೆ ಹೆಚ್ಚಿನ ಬಲ ಬಂದಿದೆ. ರೈಟ್ ಕವರ್ ಮಾತ್ರ ದುರ್ಬಲ. ಇಲ್ಲಿ ನಾಯಕ ಮಹೇಂದರ್ ಸಿಂಗ್ ಮೇಲೆ ತುಸು ಒತ್ತಡವಿದೆ. ರಕ್ಷಣ ವಿಭಾಗ ನಿರೀಕ್ಷಿತ ಯಶಸ್ಸು ಪಡೆಯದಿರುವುದು ಡೆಲ್ಲಿ ಪಾಲಿಗೆ ತುಸು ಹಿನ್ನಡೆಯಾಗಿ ಪರಿಣಮಿಸಿದೆ. ಅಮಿತ್ ಹೂಡಾ ಮತ್ತು ಸಂದೀಪ್ ಧುಲ್ ಮೇಲೆ ಹೆಚ್ಚಿನ ಭಾರ ಬಿದ್ದಿದೆ. ಆದರೆ ರೈಡಿಂಗ್ ವಿಭಾಗ ಬಲಿಷ್ಠವಾಗಿದೆ.
ಈ ಎರಡು ತಂಡಗಳು ಪ್ರೊ ಕಬಡ್ಡಿ ಇತಿಹಾಸದಲ್ಲಿ 19 ಸಲ ಎದುರಾಗಿವೆ. ಡೆಲ್ಲಿ 9, ಬುಲ್ಸ್ 8 ಗೆಲುವು ಕಂಡಿದೆ. 2 ಪಂದ್ಯ ಟೈ ಆಗಿದೆ.