Advertisement
ಡಿ. 22ರಿಂದ ಡಿ. 25ರ ವರೆಗೆ ಪ್ರತೀ ದಿನ ತಲಾ 3 ಪಂದ್ಯಗಳು ನಡೆಯಲಿವೆ. ಬುಧವಾರ ಬೆಂಗಳೂರು ಬುಲ್ಸ್-ಯು ಮುಂಬಾವನ್ನು ಎದುರಿಸುವುದರೊಂದಿಗೆ ಕೂಟ ಆರಂಭವಾಗಲಿದೆ. ತೆಲುಗು ಟೈಟಾನ್ಸ್-ತಮಿಳ್ ತಲೈ ವಾಸ್, ಬೆಂಗಾಲ್ ವಾರಿಯರ್ಸ್-ಯುಪಿ ಯೋಧಾಸ್ ನಡುವೆ ಇನ್ನೆರಡು ಪಂದ್ಯಗಳು ನಡೆಯಲಿವೆ.
ಕೂಟದಲ್ಲಿ ಒಟ್ಟು 12 ತಂಡಗಳು ಪಾಲ್ಗೊಳ್ಳಲಿವೆ. ಡಿ. 22ರಿಂದ ಜ. 22ರ ವರೆಗಿನ ಮೊದಲರ್ಧದ ವೇಳಾಪಟ್ಟಿ ಬಿಡುಗಡೆಯಾಗಿದೆ. ಒಟ್ಟಾರೆ ಎರಡು ತಿಂಗಳು ಕೂಟ ನಡೆಯಲಿದೆ. ಇದು ಪ್ರೊ ಕಬಡ್ಡಿ ಇತಿಹಾಸದ ಸುದೀರ್ಘ ಕೂಟವಾಗಿದೆ. ಕೊರೊನಾದಿಂದ ನಲುಗಿದ ಕಬಡ್ಡಿ
ಎಲ್ಲ ಕ್ರೀಡೆಗಳಂತೆ ಪ್ರೊ ಕಬಡ್ಡಿಯೂ ಕೊರೊನಾದಿಂದ ಬಹಳ ನಲುಗಿದೆ. 2020ರಲ್ಲಿ ಇಡೀ ದೇಶ ಬಹುತೇಕ ಬಂದ್ ಆಗಿತ್ತು. ಹಿಂದಿನ ವರ್ಷಾಂತ್ಯದಿಂದ ಪರಿಸ್ಥಿತಿ ತುಸು ಬದಲಾಗಲು ಆರಂಭವಾಗಿತ್ತು. ಆದ್ದರಿಂದ ಪ್ರೊ ಕಬಡ್ಡಿಯನ್ನು ನಡೆಸಿರಲಿಲ್ಲ. ಈ ಬಾರಿಯೂ ಕೊರೊನಾ ಕಾಣಿಸಿಕೊಂಡಿದ್ದರಿಂದ ಮತ್ತೆ ಕೂಟ ರದ್ದಾಗಬಹುದೇ ಎಂಬ ಆತಂಕವಿತ್ತು. ಇದೀಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿರುವುದರಿಂದ ಕೂಟ ಜೈವಿಕ ಸುರûಾ ವಲಯದಲ್ಲಿ ನಡೆಯಲಿದೆ.
Related Articles
Advertisement
ಸೆಹ್ರಾವತ್ ನಾಯಕತ್ವದ ಬೆಂಗಳೂರು ಬಲಿಷ್ಠಪ್ರೊ ಕಬಡ್ಡಿ 6ನೇ ಋತುವಿನಲ್ಲಿ ಬೆಂಗಳೂರು ಬುಲ್ಸ್ ತಂಡ ಚಾಂಪಿಯನ್ ಆಗಿತ್ತು. 2ನೇ ಋತುವಿನಲ್ಲಿ ರನ್ನರ್‌ಅಪ್ ಆಗಿದೆ. ಮೊದಲ ಹಾಗೂ 7ನೇ ಋತುವಿನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಇತಿಹಾಸ ಬೆಂಗಳೂರಿಗಿದೆ.
ಈ ವರ್ಷ ಬೆಂಗಳೂರು ನೆಚ್ಚಿನ ತಂಡಗಳಲ್ಲೊಂದು. ಕೂಟದ ಪ್ರಮುಖ ಆಟಗಾರರಲ್ಲೊಬ್ಬರಾದ ಪವನ್ ಕುಮಾರ್ ಸೆಹ್ರಾವತ್ ತಂಡದ ನಾಯಕ. 6ನೇ, 7ನೇ ಋತುವಿನಲ್ಲಿ ಕ್ರಮವಾಗಿ ಅತೀ ಮೌಲ್ಯಯುತ ಆಟಗಾರ, ಅತ್ಯುತ್ತಮ ರೈಡರ್ ಪ್ರಶಸ್ತಿಯನ್ನು ಸೆಹ್ರಾವತ್ ಪಡೆದುಕೊಂಡಿದ್ದಾರೆ. ತಂಡದ ನೆರವಿಗೆ ಹಲವು ವಿದೇಶಿ ಆಟಗಾರರಿದ್ದಾರೆ. ಅದರಲ್ಲಿ ಇರಾನಿನ ಅಬೊಲ#ಜೆಲ್ ಮಗೊÕಡ್ಲು, ದಕ್ಷಿಣ ಕೊರಿಯದ ಡಾಂಗ್ ಜಿಯೋನ್ ಲೀ, ಬಾಂಗ್ಲಾದೇಶದ ಜಿಯಾವುರ್ ರೆಹಮಾನ್ ಪ್ರಮುಖರು. ಮಹೇಂದರ್ ಸಿಂಗ್ ಇನ್ನೊಬ್ಬ ಪ್ರಮುಖ ಆಟಗಾರ. ರಣಧೀರ್ ಸಿಂಗ್ ಅವರಿಂದ ತರಬೇತಾಗಿರುವ ಬುಲ್ಸ್ ಮೇಲೆ ನಿರೀಕ್ಷೆ ಹೆಚ್ಚಿದೆ. ಎದುರಾಳಿ ಮುಂಬಾವನ್ನು ನಿರ್ಲಕ್ಷಿಸುವಂತಿಲ್ಲ. ಅದೂ ಪ್ರಮುಖ ತಂಡಗಳಲ್ಲೊಂದು. ಈ ತಂಡಕ್ಕೆ ಫಜಲ್ ಅತ್ರಾಚೆಲಿ ನಾಯಕರಾಗಿದ್ದಾರೆ. ಪ್ರೊ ಕಬಡ್ಡಿ ಇತಿಹಾಸದ ಪ್ರಮುಖ ಕ್ಯಾಚರ್‌ಗಳಲ್ಲಿ ಅತ್ರಾಚೆಲಿ ಒಬ್ಬರು. ಈ ಬಾರಿಯ ಕೂಟ ಪೂರ್ಣವಾಗಿ ಸುರûಾ ವಲಯದಲ್ಲಿ ನಡೆಯಲಿದೆ. ಆದರೆ ಕೂಟದ ಗುಣಮಟ್ಟ ನಿಸ್ಸಂಶಯವಾಗಿ ವಿಶ್ವದರ್ಜೆಯದ್ದಾಗಿರಲಿದೆ. ಹಲವು ಹೊಸ ತಂತ್ರಜ್ಞಾನಗಳನ್ನು ಗುಣಮಟ್ಟ ವೃದ್ಧಿಗೆ ಬಳಸಿಕೊಳ್ಳುತ್ತಿದ್ದೇವೆ. ನಾವು ಪಂದ್ಯಗಳ ಸಂಖ್ಯೆಯನ್ನು ಕಡಿಮೆ ಮಾಡಿಲ್ಲ, ಆದರೆ ಒಟ್ಟಾರೆ ಕೂಟ ನಡೆಯುವ ದಿನಗಳನ್ನು ಸ್ವಲ್ಪ ಕಡಿಮೆ ಮಾಡಿದ್ದೇವೆ.
– ಅನುಪಮ್ ಗೋಸ್ವಾಮಿ,
ಪ್ರೊ ಕಬಡ್ಡಿ ಆಯುಕ್ತ