Advertisement

ಪ್ರೊ ಕಬಡ್ಡಿ: ಹರ್ಯಾಣ ವಿರುದ್ಧ ಪುನೇರಿಗೆ ರೋಚಕ ಜಯ

06:05 AM Nov 29, 2018 | Team Udayavani |

ಪುಣೆ: 6ನೇ ಆವೃತ್ತಿ ಪ್ರೊ ಕಬಡ್ಡಿ ಕೂಟದಲ್ಲಿ ಬುಧವಾರ ಪುನೇರಿ ಪಲ್ಟಾನ್‌ ತಂಡ 35-33 ಅಂಕಗಳಿಂದ ಎದುರಾಳಿ ಹರ್ಯಾಣ ಸ್ಟೀಲರ್ಸ್‌ ತಂಡವನ್ನು ಸೋಲಿಸಿತು. ಎರಡೂ ತಂಡಗಳಿಗೂ ಗೆಲುವು ಅನಿವಾರ್ಯವಾಗಿದ್ದ ಪಂದ್ಯದಲ್ಲಿ ಪುನೇರಿ ಮೇಲುಗೈ ಸಾಧಿಸಿತು. ಪ್ರಬಲ ಹೋರಾಟ ನೀಡಿದರೂ ಕೇವಲ 2 ಅಂಕಗಳ ಅಂತರದಿಂದ ಹರ್ಯಾಣ ತಂಡ ಸೋಲನುಭವಿಸಿತು.

Advertisement

ಪುನೇರಿ ತಂಡ ಸಂಘಟಿತವಾಗಿ ಹೋರಾಟ ನಡೆಸಿತು. ಆ ತಂಡದಲ್ಲಿ ವೈಯಕ್ತಿಕವಾಗಿ ಹೇಳಿಕೊಳ್ಳುವಂತಹ ಪ್ರದರ್ಶನ ಬರದಿದ್ದರೂ ಒಗ್ಗೂಡಿ ಆಡಿದ್ದರಿಂದ ಗೆಲುವು ಸುಲಭವಾಯಿತು. ರಕ್ಷಣಾ ವಿಭಾಗದಲ್ಲಿ ಖ್ಯಾತಿ ಪಡೆದಿರುವ ಸಂದೀಪ್‌ ನರ್ವಾಲ್‌ ಬುಧವಾರ ಹರ್ಯಾಣ ಕೋಟೆಯೊಳಗೆ ಪದೇ ಪದೇ ನುಗ್ಗಿ 6 ಅಂಕಗಳಿಸಿದರು. ಕೇವಲ ಒಮ್ಮೆ ಮಾತ್ರ ಎದುರಾಳಿ ಆಟಗಾರನನ್ನು ಕೋಟೆಯೊಳಗೆ ಕೆಡವಿಕೊಂಡು 1 ಅಂಕಗಳಿಸಿದರು. ಇದಕ್ಕೆ ಹೋಲಿಸಿದರೆ ಹರ್ಯಾಣ ಆಟಗಾರ ಮೋನುಗೋಯತ್‌ ಅತ್ಯುತ್ತಮ ದಾಳಿ ನಡೆಸಿದರು. ಅವರು 20 ಬಾರಿ ಎದುರಾಳಿ ಕೋಟೆಯೊಳಕ್ಕೆ ನುಗ್ಗಿ 10 ಅಂಕಗಳಿಸಿದರು.

ಈ ಗೆಲುವಿನ ಮೂಲಕ ಪುನೇರಿ ಎ ವಲಯದಲ್ಲಿ 3ನೇ ಸ್ಥಾನದಲ್ಲಿದೆ. ಅದು ಆಡಿರುವ 17 ಪಂದ್ಯಗಳಲ್ಲಿ 7 ಗೆದ್ದು, 8 ಸೋತು, 2 ಪಂದ್ಯ ಟೈ ಮಾಡಿಕೊಂಡಿದೆ. ಹರ್ಯಾಣ 16 ಪಂದ್ಯಗಳಲ್ಲಿ 5 ಪಂದ್ಯ ಮಾತ್ರ ಗೆದ್ದು, 10 ಪಂದ್ಯ ಸೋತಿದೆ. 1 ಪಂದ್ಯ ಟೈಗೊಂಡಿದೆ. ಅದು 5ನೇ ಸ್ಥಾನದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next