Advertisement

Pro Kabaddi; ಅ. 9, 10: ಆಟಗಾರರ ಹರಾಜು: 4 ವಿಭಾಗಗಳಾಗಿ ಆಟಗಾರರ ವಿಂಗಡಣೆ

11:15 PM Sep 08, 2023 | Team Udayavani |

ಮುಂಬಯಿ: ಪ್ರೊ ಕಬಡ್ಡಿ 10ನೇ ಸೀಸನ್‌ಗಾಗಿ ಆಯ್ಕೆಗಾರರ ಹರಾಜು ಪ್ರಕ್ರಿಯೆ ಅ. 9 ಮತ್ತು 10ರಂದು ಮುಂಬಯಿಯಲ್ಲಿ ನಡೆಯಲಿದೆ. ಶುಕ್ರವಾರ ಕೂಟದ ಸಂಘಟಕರು ಇದನ್ನು ಪ್ರಕಟಿಸಿದರು.

Advertisement

ದೇಶಿ ಹಾಗೂ ವಿದೇಶಿ ಆಟಗಾರರನ್ನು ಎ, ಬಿ, ಸಿ, ಡಿ ಎಂದು 4 ವಿಭಾಗಗಳಾಗಿ ವಿಂಗಡಿಸಲಾಗಿದೆ. ಕ್ರಮವಾಗಿ 30 ಲಕ್ಷ ರೂ., 20 ಲಕ್ಷ ರೂ., 13 ಲಕ್ಷ ರೂ. ಹಾಗೂ 9 ಲಕ್ಷ ರೂ. ಮೂಲ ಬೆಲೆಯನ್ನು ನಿಗದಿ ಮಾಡಲಾಗಿದೆ. ಆಟಗಾರರನ್ನು ಆಲ್‌ರೌಂಡರ್, ಡಿಫೆಂಡರ್ ಮತ್ತು ರೈಡರ್ ಎಂದೂ ವಿಂಗಡಿಸಲಾಗಿದೆ. ಹರಾಜು ಪ್ರಕ್ರಿಯೆ ಸೆ. 8, 9ರಂದು ನಡೆಯಬೇಕಿತ್ತು. ಆದರೆ ಏಷ್ಯಾಡ್‌ ತಯಾರಿಗಾಗಿ ಇದನ್ನು ಮುಂದೂಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next