Advertisement
ಈ ಪ್ರಯುಕ್ತ ಸೋಮವಾರ ವಿವಿಧ ತಂಡಗಳ ಉಳಿಕೆ ಆಟಗಾರರ ಪಟ್ಟಿಯನ್ನು ಪ್ರಕಟಿಸಲಾಯಿತು. ಒಟ್ಟಾರೆ 29 ತಾರಾ ಆಟಗಾರರನ್ನು ಕ್ರಮವಾಗಿ ಉಳಿಸಿಕೊಳ್ಳಲಾಗಿದೆ. ಇತ್ತೀಚೆಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿರುವ ಅಜಯ್ ಠಾಕೂರ್ ತಮಿಳ್ ತಲೈವಾಸ್ ತಂಡದಲ್ಲಿ ಮುಂದುವರಿಯಲಿದ್ದಾರೆ. ಪಾಟ್ನಾ ಪೈರೇಟ್ಸ್ ತಂಡ ಖ್ಯಾತ ರೈಡರ್ ಪರ್‌ದೀಪ್ ನರ್ವಾಲ್‌ರನ್ನು ತನ್ನಲ್ಲೇ ಉಳಿಸಿಕೊಂಡಿದೆ. ಇನ್ನು ಬೆಂಗಳೂರು ಬುಲ್ಸ್ ತಂಡ ತಾರಾ ರೈಡರ್ ಪವನ್ ಸೆಹ್ರಾವತ್ ಹಾಗೂ ತಂಡದ ನಾಯಕ ರೋಹಿತ್ ಕುಮಾರ್ ಉಳಿಸಿಕೊಂಡಿದೆ. ಆದರೆ ಮತ್ತೋರ್ವ ಖ್ಯಾತ ರೈಡರ್ ಕಾಶಿಲಿಂಗ್ ಅಡಕೆಯನ್ನು ಬುಲ್ಸ್ ಹೊರಕ್ಕೆ ಹಾಕಿದೆ. ಉಳಿಕೆಯಾಗದವರು ಮುಂದಿನ ಹರಾಜಿನಲ್ಲಿ ಖರೀದಿಗೆ ಲಭ್ಯವಾಗಲಿದ್ದಾರೆ.
ಬೆಂಗಾಲ್ ವಾರಿಯರ್: ಬಲದೇವ್ ಸಿಂಗ್, ಮಣೀಂದರ್ ಸಿಂಗ್
ಬೆಂಗಳೂರು ಬುಲ್ಸ್:ರೋಹಿತ್ ಕುಮಾರ್, ಪವನ್ ಸೆಹ್ರಾವತ್, ಆಶಿಷ್ ಕುಮಾರ್
ದಬಾಂಗ್ ದಿಲ್ಲಿ: ಮೆರಾಜ್ ಶೇಖ್, ಜೋಗಿಂದರ್ ನರ್ವಾಲ್
ಗುಜರಾತ್ ಫಾರ್ಚೂನ್‌ಜೈಂಟ್ಸ್: ಸಚಿನ್, ಸುನಿಲ್ ಕುಮಾರ್
ಹರ್ಯಾಣ ಸ್ಟೀಲರ್: ಕುಲದೀಪ್ ಸಿಂಗ್, ವಿಕಾಸ್ ಕಾಂಡೋಲ
ಜೈಪುರ ಪಿಂಕ್‌ಪ್ಯಾಂಥರ್: ದೀಪಕ್ ನಿವಾಸ್ ಹೂಡಾ, ಸಂದೀಪ್ ಕುಮಾರ್
ಪಾಟ್ನಾ ಪೈರೇಟ್ಸ್: ಪ್ರದೀಪ್ ನರ್ವಾಲ್, ವಿಕಾಸ್ ಜಗ್ಲಾನ್, ತುಷಾರ್ ಪಾಟೀಲ್, ಜವಾಹರ್
ಪುನೇರಿ ಪಲ್ಟಾನ್: (ಉಳಿಕೆ ಆಟಗಾರರ ಪಟ್ಟಿ ಪ್ರಕಟಿಸಿಲ್ಲ)
ತಮಿಳ್ ತಲೈವಾಸ್: ಅಜಯ್ ಠಾಕೂರ್, ಮಂಜಿತ್ ಚಿಲ್ಲಾರ್. ವಿಕ್ಟರ್ ಒಬೈರೊ
ತೆಲುಗು ಟೈಟಾನ್ಸ್: ಅರ್ಮಾನ್, ಮೊಹೆÕನ್, ಫರ್ಹಾದ್ ರಹೀಂ, ಕೃಷ್ಣ ಮದನೆ
ಯು ಮುಂಬಾ: ಫಜಲ್ ಅತ್ರಾಚಲಿ, ರಾಜಗುರು, ಅರ್ಜುನ್ ದೆಶ್ವಾಲ್
ಯುಪಿ ಯೋಧಾ: ಅಮಿತ್, ಸಚಿನ್ ಕುಮಾರ್