Advertisement

ಪ್ರೊ ಕಬಡ್ಡಿ-7: ಇಂದು ಉದ್ಘಾಟನೆ, ನಾಳೆಯಿಂದ ಸ್ಪರ್ಧೆ

09:22 AM Jul 20, 2019 | Sriram |

ಹೈದರಾಬಾದ್‌: ಪ್ರೊ ಕಬಡ್ಡಿ 7ನೇ ಆವೃತ್ತಿ ಹೈದರಾಬಾದ್‌ನಲ್ಲಿ ಶುಕ್ರವಾರ ಉದ್ಘಾಟ ನೆಗೊಳ್ಳಲಿದೆ. ಶನಿವಾರದಿಂದ ಪಂದ್ಯಗಳು ಅಧಿಕೃ ತವಾಗಿ ಆರಂಭವಾಗಲಿವೆ. ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್‌ ತಂಡ ವನ್ನು ಯು ಮುಂಬಾ ಎದುರಿಸಲಿದೆ. ಅದೇ ದಿನ ನಡೆಯಲಿರುವ ಮತ್ತೂಂದು ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ಹಾಗೂ ಪಾಟ್ನಾ ಪೈರೇಟ್ಸ್‌ ತಂಡಗಳು ಸೆಣಸಾಟ ನಡೆಸಲಿವೆ.

Advertisement

ಹೈದರಾಬಾದ್‌ನ ಗಚ್ಚಿಬೌಲಿ ಕ್ರೀಡಾಂಗಣದಲ್ಲಿ ಈ ಪಂದ್ಯಗಳು ಸಾಗಲಿವೆ. ಭರ್ತಿ 3 ತಿಂಗಳ ಕಾಲ 12 ತಂಡಗಳು, 12 ನಗರಗಳಲ್ಲಿ ಕಾಲೆಳೆದಾಟದ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿವೆ.

2 ವರ್ಷದ ಬಳಿಕ ಬೆಂಗಳೂರಲ್ಲಿ ಪಂದ್ಯ
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಆತಿಥೇಯ ಬೆಂಗಳೂರು ಬುಲ್ಸ್‌ಗೆ ಆತಿಥ್ಯ ವಹಿಸಲು ಕಳೆದೆರಡು ವರ್ಷ ಅವಕಾಶ ಸಿಕ್ಕಿರಲಿಲ್ಲ. ಇದರಿಂದ ಬೆಂಗಳೂರು ಪಂದ್ಯಗಳು 2017ರಲ್ಲಿ ನಾಗ್ಪುರಕ್ಕೆ ವರ್ಗಾವಣೆಗೊಂಡಿದ್ದವು.

2018ರಲ್ಲೂ ಬೆಂಗಳೂರಿನಲ್ಲಿ ಪಂದ್ಯಗಳ ಆತಿಥ್ಯ ವಹಿಸಲು ಸಾಧ್ಯವಾಗದೆ ಬೇರೆ ರಾಜ್ಯಕ್ಕೆ ವರ್ಗಾವಣೆ ಮಾಡಲಾಗಿತ್ತು. ಕಂಠೀರವ ಕ್ರೀಡಾಂಗಣದಲ್ಲಿ ಬೇರೆ ಕೂಟ ಇದ್ದುದರಿಂದ ಪ್ರೊ ಕಬಡ್ಡಿಗೆ ಅವಕಾಶ ನೀಡಿಲ್ಲ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹೇಳಿತ್ತು. ಒಟ್ಟಾರೆ ಎಲ್ಲ ಬೆಳವಣಿಗೆಗಳಿಂದ ರಾಜ್ಯದ ಕಬಡ್ಡಿ ಅಭಿಮಾನಿಗಳು ಬೇಸರಕ್ಕೆ ಒಳಗಾಗಿದ್ದರು. ಇದೀಗ ಮತ್ತೆ ಬೆಂಗಳೂರಿಗೆ ಆತಿಥ್ಯದ ಅವಕಾಶ ಸಿಕ್ಕಿದೆ. ಹೀಗಾಗಿ ಅಭಿಮಾನಿಗಳು ಬಹಳ ಖುಷಿಯಿಂದ ಪಂದ್ಯ ವೀಕ್ಷಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಬೆಂಗಳೂರು ಆವೃತ್ತಿಯ ಪಂದ್ಯಗಳು ಆ. 31ರಿಂದ ಆರಂಭವಾಗಲಿವೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next