Advertisement

Pro Kabaddi; ಬುಲ್ಸ್‌ಗೆ 3ನೇ ಜಯ: ಟೈಟಾನ್ಸ್‌ಗೆ 6ನೇ ಸೋಲು

11:42 PM Dec 24, 2023 | Team Udayavani |

ಚೆನ್ನೈ: ಬೆಂಗಳೂರು ಬುಲ್ಸ್‌ ಬಹಳ ದಿನಗಳ ಬಳಿಕ ಗೆಲುವಿನ ನಗು ಬೀರಿದೆ. ರವಿವಾರದ ತನ್ನ 8ನೇ ಪ್ರೊ ಕಬಡ್ಡಿ ಮುಖಾಮುಖಿಯಲ್ಲಿ ತೆಲುಗು ಟೈಟಾನ್ಸ್‌ಗೆ 33-31 ಅಂಕಗಳ ಆಘಾತವಿಕ್ಕಿತು. ಟೈಟಾನ್ಸ್‌ 6ನೇ ಸೋಲಿನಿಂದ ತತ್ತರಿಸಿತು.

Advertisement

ಬುಲ್ಸ್‌ ಸಾಂ ಕ ಆಟದ ಮೂಲಕ ಯಶಸ್ಸು ಸಾಧಿಸಿತು. ಡಿಫೆಂಡರ್‌ ಸುರ್ಜಿತ್‌ ಸಿಂಗ್‌ (7), ರೈಡರ್‌ಗಳಾದ ಭರತ್‌ (6), ವಿಕಾಸ್‌ ಖಂಡೋಲ (5) ಮತ್ತು ನೀರಜ್‌ ನರ್ವಾಲ್‌ (5) ಉತ್ತಮ ಪ್ರದರ್ಶನವಿತ್ತರು. ಟೈಟಾನ್ಸ್‌ ಪರ ನಾಯಕ ಪವನ್‌ ಸೆಹ್ರಾವತ್‌ ಅತ್ಯಧಿಕ 13 ಅಂಕ ತಂದಿತ್ತರು.

ಮುಂಬಾ ಗೆಲುವು
ಮೊದಲ ಪಂದ್ಯದಲ್ಲಿ ಯು ಮುಂಬಾ 39-37 ಅಂತರದಿಂದ ಬೆಂಗಾಲ್‌ ವಾರಿಯರ್ಗೆ ಸೋಲುಣಿ ಸಿತು. ಆಲ್‌ರೌಂಡರ್‌ ಆಮೀರ್‌ ಮೊಹಮ್ಮದ್‌ (8), ರೈಡರ್‌ ಗುಮಾನ್‌ ಸಿಂಗ್‌ (6), ಡಿಫೆಂಡರ್‌ ಮಹೇಂದರ್‌ ಸಿಂಗ್‌ (5) ಅವರ ಸಾಂ ಕ ಆಟ ಮುಂಬಾ ಜಯದಲ್ಲಿ ಪ್ರಮುಖ ಪಾತ್ರ ವಹಿಸಿತು.
ಬೆಂಗಾಲ್‌ ನಾಯಕ ಮಣಿಂದರ್‌ ಸಿಂಗ್‌ 1,300 ರೈಡ್‌ ಪಾಯಿಂಟ್‌ ದಾಖಲೆ ಸ್ಥಾಪಿಸಿದರು.

ಇಂದಿನ ಪಂದ್ಯಗಳು
1. ಡೆಲ್ಲಿ-ಬೆಂಗಾಲ್‌  ಆರಂಭ: ರಾತ್ರಿ 8.00

2. ತಮಿಳ್‌-ಹರ್ಯಾಣ  ಆರಂಭ: ರಾತ್ರಿ 9.00

Advertisement

ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next