Advertisement

Pro Kabaddi 2024: ಯೋಧಾಸ್‌, ಪುನೇರಿ ಜಯಭೇರಿ

12:55 AM Oct 22, 2024 | Team Udayavani |

ಹೈದರಾಬಾದ್‌: ಸೋಮವಾರದ ಪ್ರೊ ಕಬಡ್ಡಿ ಪಂದ್ಯಗಳಲ್ಲಿ ಯುಪಿ ಯೋಧಾಸ್‌ ಮತ್ತು ಪುನೇರಿ ಪಲ್ಟಾನ್‌ ಜಯಭೇರಿ ಮೊಳಗಿಸಿವೆ.

Advertisement

ಯೋಧಾಸ್‌ 28-23 ಅಂತರದಿಂದ ದಬಾಂಗ್‌ ಡೆಲ್ಲಿಯನ್ನು ಕೆಡವಿ ಶುಭಾರಂಭ ಮಾಡಿತು. ಡೆಲ್ಲಿ ಮೊದಲ ಸೋಲನುಭವಿಸಿತು.

ಎರಡೂ ತಂಡಗಳು ಸಾಂ ಕ ಆಟದ ಮೂಲಕ ಗಮನ ಸೆಳೆದವು. ಯೋಧಾಸ್‌ ಪರ ರೈಡರ್‌ ಭವಾನಿ ರಜಪೂತ್‌ 7, ಡಿಫೆಂಡರ್‌ ಸಾಹುಲ್‌ ಕುಮಾರ್‌ 5, ನಾಯಕ ಸುರೇಂದರ್‌ ಗಿಲ್‌ 4 ಅಂಕ ಗಳಿಸಿದರು. ಡೆಲ್ಲಿ ಪರ ರೈಡರ್‌ ನವೀನ್‌ ಕುಮಾರ್‌, ನಾಯಕ ಆಶು ಮಲಿಕ್‌ ಮತ್ತು ಆಲ್‌ರೌಂಡರ್‌ ಆಶಿಷ್‌ ತಲಾ 4 ಅಂಕ ತಂದಿತ್ತರು.

ಪುನೇರಿ 2ನೇ ಜಯ
ದ್ವಿತೀಯ ಪಂದ್ಯದಲ್ಲಿ ಪುನೇರಿ ಪಲ್ಟಾನ್‌ 40-25 ಅಂತರದಿಂದ ಪಾಟ್ನಾ ಪೈರೆಟ್ಸ್‌ಗೆ ಸೋಲುಣಿಸಿತು. ಇದು ಪುನೇರಿಗೆ ಒಲಿದ ಸತತ 2ನೇ ಜಯ. ಪಾಟ್ನಾ ಮೊದಲ ಪಂದ್ಯದಲ್ಲೇ ಮುಗ್ಗರಿಸಿತು. ಪುನೇರಿ ಪರ ನಾಯಕ ಅಸ್ಲಾಮ್‌ ಇನಾಮಾªರ್‌ (9), ಮೋಹಿತ್‌ ಗೋಯತ್‌ (8) ಉತ್ತಮ ಪ್ರದರ್ಶನ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next