Advertisement

ಅ. 7ರಿಂದ ಬೆಂಗಳೂರಿನಲ್ಲಿ ಪ್ರೊ ಕಬಡ್ಡಿ; ಕಂಠೀರವ ಒಳಾಂಗಣದಲ್ಲಿ ಪಂದ್ಯಗಳು

12:08 PM Sep 22, 2022 | Team Udayavani |

ಬೆಂಗಳೂರು: 9 ತಂಡಗಳು ಪಾಲ್ಗೊಳ್ಳಲಿರುವ 9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ ಅ. 7ರಂದು ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ.

Advertisement

ಕೂಟದ ಆಯೋಜಕ ಮಾಷಲ್‌ ಸ್ಪೋರ್ಟ್ಸ್ ಮೊದಲರ್ಧದ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಅಕ್ಟೋಬರ್‌-ನವೆಂಬರ್‌ ಅವಧಿಯಲ್ಲಿ ಒಟ್ಟು 66 ಪಂದ್ಯಗಳು ನಡೆಯಲಿವೆ. 2ನೇ ಹಂತದ ವೇಳಾಪಟ್ಟಿ ಅಕ್ಟೋಬರ್‌ ಕೊನೆಯ ವಾರದಲ್ಲಿ ಪ್ರಕಟವಾಗಲಿದೆ.

ಅ. 7ರ ಉದ್ಘಾಟನಾ ಪಂದ್ಯದಲ್ಲಿ ದಬಾಂಗ್‌ ಡೆಲ್ಲಿ-ಯು ಮುಂಬಾ ತಂಡಗಳು ಸೆಣಸಲಿವೆ. ಎರಡನೇ ಪಂದ್ಯದಲ್ಲಿ ಆತಿಥೇಯ ಬೆಂಗಳೂರು ಬುಲ್ಸ್‌-ತೆಲುಗು ಟೈಟಾನ್ಸ್‌ ಎದುರಾಗಲಿವೆ.

3ನೇ ಪಂದ್ಯದಲ್ಲಿ ಜೈಪುರ ಪಿಂಕ್‌
ಪ್ಯಾಂಥರ್ಸ್‌- ಯುಪಿ ಯೋಧಾಸ್‌ ಮುಖಾಮುಖಿಯಾಗಲಿವೆ. ಅ. 8 ಮತ್ತು 9ರಂದೂ 3 ಪಂದ್ಯಗಳನ್ನು ಆಡಲಾಗುವುದು. ಹೀಗಾಗಿ ಕೂಟದ ಮೊದಲೆರಡು ದಿನಗಳಲ್ಲೇ ಎಲ್ಲ 12 ತಂಡಗಳ ಆಟವನ್ನೂ ಕಾಣಬಹುದು.

 

ಪ್ರೇಕ್ಷಕರಿಗೆ ಪ್ರವೇಶ
ಈ ಬಾರಿ ಕಬಡ್ಡಿ ಪ್ರಿಯರಿಗೆ ಸಂತೋಷದ ಸುದ್ದಿಯೊಂದಿದೆ. ಕೊರೊನಾದಿಂದಾಗಿ ಕಳೆದ ವರ್ಷ ಪ್ರೇಕ್ಷಕರಿಗೆ ಪ್ರವೇಶ ಇರಲಿಲ್ಲ. ಎಲ್ಲ ಪಂದ್ಯಗಳು ಬೆಂಗಳೂರಿನ ಜೈವಿಕ ಸುರಕ್ಷಾವಲಯದಲ್ಲೇ ನಡೆದಿದ್ದವು. ಈ ಬಾರಿ ವೀಕ್ಷಕರಿಗೆ ಪ್ರವೇಶ ಲಭಿಸಲಿದೆ. ಇದಕ್ಕಾಗಿ ಸಂಘಟಕರು ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಪಂದ್ಯಗಳು ಮುಗಿದ ಅನಂತರ, ಅ. 28ರಿಂದ ಪುಣೆಯ ಛತ್ರಪತಿ ಶಿವಾಜಿ ಕ್ರೀಡಾ ಸಂಕೀರ್ಣದಲ್ಲಿ ಪಂದ್ಯಗಳು ಆರಂಭವಾಗಲಿವೆ.

ಈ ಬಗ್ಗೆ ಮಾತನಾಡಿದ ಮಾಷಲ್‌ ಸ್ಪೋರ್ಟ್ಸ್ ಆಯುಕ್ತ ಅನುಪಮ್‌ ಗೋಸ್ವಾಮಿ, “ಭಾರತೀಯರಿಗೆ ಕಬಡ್ಡಿಯ ಅದ್ಭುತ ಅನುಭವ ನೀಡಲು ನಾವು ಸಜ್ಜಾಗಿದ್ದೇವೆ. ಟಿಕೆಟ್‌ಗಳನ್ನು ಬುಕ್‌ ಮೈ ಶೋನಲ್ಲಿ ಖರೀದಿಸಬಹುದು’ ಎಂದು ತಿಳಿಸಿದ್ದಾರೆ.

ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌, ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಕೂಟ ನೇರಪ್ರಸಾರವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next