Advertisement
ಆರಂಭದಲ್ಲೇ ಕಂಗಾಲುಮೊದಲ ಗೆಲುವಿನ ಖುಷಿಯಲ್ಲಿದ್ದ ಬುಲ್ಸ್ ಬಹಳ ಆತ್ಮವಿಶ್ವಾÓ ದಿಂದ ಆಡಲಿಳಿಯಿತು. ಆದರೆ ಪಾಟ್ನಾ ವಿರುದ್ಧದ ಪ್ರದರ್ಶನ ಪುನರಾವರ್ತನೆಗೊಂಡೀತೆಂಬ ನಿರೀಕ್ಷೆ ಸುಳ್ಳಾಯಿತು.
ಬೆಂಗಳೂರು 2ನೇ ಅವಧಿಯಲ್ಲಿಯೂ ಚೇತರಿಸಿಕೊಳ್ಳಲಿಲ್ಲ. ನಿರಂತರ ವೈಫಲ್ಯವನ್ನು ಅನುಭವಿಸುತ್ತ ಸಾಗಿತು. ರೈಡರ್ ಪವನ್ ಸೆಹ್ರಾವತ್ (8 ಅಂಕ), ಸುಮಿತ್ ಸಿಂಗ್ (5 ಅಂಕ) ಹಾಗೂ ಡಿಫೆಂಡರ್ ಮಹೇಂದ್ರ ಸಿಂಗ್ (4 ಅಂಕ) ಮಿಂಚಿ ದರೂ ನಾಯಕ ರೋಹಿತ್ ಕುಮಾರ್ ರೈಡಿಂಗ್‌ನಲ್ಲಿ ಭಾರೀ ವೈಫಲ್ಯ ಅನುಭವಿಸಿದರು. 12 ರೈಡಿಂಗ್‌ನಿಂದ ಕೇವಲ 4 ಅಂಕ ಮಾತ್ರ ತರಲು ಸಾಧ್ಯವಾಯಿತು. 5 ಬಾರಿ ಎದುರಾಳಿ ಕೋಟೆಯೊಳಗೆ ಸಿಲುಕಿದ ಇವರು ಮತ್ತೆ 5 ಬಾರಿ ಯಾವುದೇ ಅಂಕ ಪಡೆಯಲಾಗದೆ ವಾಪಸ್ ಆಗಿದ್ದರು. ಗುಜರಾತ್ ಪರ ಹೆಚ್ಚುವರಿ ಆಟಗಾರನಾಗಿ ಕಣಕ್ಕೆ ಇಳಿದ ಸೋನು ರೈಡಿಂಗ್‌ನಿಂದ 5 ಅಂಕ ಪಡೆದು ಗಮನ ಸೆಳೆದರು.
Related Articles
ಕಳೆದ ಸಲ ಬುಲ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ರೈಡರ್ ಪವನ್ ಸೆಹ್ರಾವತ್ ಪ್ರೊ ಕಬಡ್ಡಿಯಲ್ಲಿ 350 ರೈಡಿಂಗ್ ಪಾಯಿಂಟ್ ದಾಟಿ ವೈಯಕ್ತಿಕ ದಾಖಲೆ ನಿರ್ಮಿಸಿದ್ದಾರೆ.
Advertisement