Advertisement
ಇದರೊಂದಿಗೆ ಕೂಟದಲ್ಲಿ ಬೆಂಗಾಲ್ ಹುಲಿಗಳ ಅಬ್ಬರ ಜೋರಾಗಿದ್ದು, ಸದ್ಯ ಅಗ್ರಸ್ಥಾನಕ್ಕೆ ಏರಿದೆ (83). ದಬಾಂಗ್ ಡೆಲ್ಲಿ ಎರಡಕ್ಕೆ ಇಳಿಯಿತು (82).ಅತ್ಯಂತ ರೋಚಕವಾಗಿ ಸಾಗಿದ ದಿನದ ದ್ವಿತೀಯ ಪಂದ್ಯದಲ್ಲಿ ತೆಲುಗು ಟೈಟಾನ್ಸ್ 41-36 ಅಂತರಿಂದ ಯುಪಿ ಯೋಧಾವನ್ನು ಮಣಿಸಿ ಕೂಟ ಮುಗಿಸಿತು.
ಈಗಾಗಲೇ ಪ್ಲೇ ಆಫ್ ಹಂತಕ್ಕೇರಿರುವ ಬೆಂಗಾಲ್ ತನ್ನ ಸಾಮರ್ಥ್ಯಕ್ಕೆ ತಕ್ಕ ಆಟ ಪ್ರದರ್ಶಿಸಿತು. ಸುಕೇಶ್ ಹೆಗ್ಡೆ ರೈಡಿಂಗ್‌ನಿಂದ ಮಿಂಚಿದರೆ, ಮೊಹಮ್ಮದ್ ನಬಿಭಕ್Ò
(7 ಅಂಕ) ಆಲ್‌ರೌಂಡರ್ ಪ್ರದರ್ಶನ ನೀಡಿ ಗಮನ ಸೆಳೆದರು. ಉಳಿದಂತೆ ರಿಂಕು ನರ್ವಲ್ (5 ಟ್ಯಾಕಲ್ ಅಂಕ), ಸೌರಭ್ ಪಾಟೀಲ್ (4 ರೈಡಿಂಗ್ ಅಂಕ) ತಂಡದ ಜಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಮೊನಚಿಲ್ಲದ ತಲೈವಾಸ್
ತಾರಾ ಆಟಗಾರ ರಾಹುಲ್ ಚೌಧರಿ ಈ ಪಂದ್ಯದಲ್ಲೂ ಕಳಪೆ ನಿರ್ವಹಣೆ ನೀಡಿದ್ದು ತಮಿಳ್ ತಲೈವಾಸ್‌ಗೆ ಹಿನ್ನಡೆಯಾಗಿ ಪರಿಣಮಿಸಿತು. ಅವರು ಕೇವಲ 7 ರೈಡಿಂಗ್ ಅಂಕಗಳಿಸಲಷ್ಟೇ ಶಕ್ತರಾದರು. ಸಾಗರ್ (5 ಟ್ಯಾಕಲ್ ಅಂಕ), ವಿ. ಅಜಿತ್ ಕುಮಾರ್ (4 ರೈಡಿಂಗ್ ಅಂಕ) ಗಮನ ಸೆಳೆದರಾದರೂ ಅವರಿಂದಲೂ ಪರಿಪೂರ್ಣ ಆಟ ಹೊರಹೊಮ್ಮಲಿಲ್ಲ.