Advertisement
ಹಾಲಿ ಚಾಂಪಿಯನ್ ಪಟ್ನಾ ಪೈರೇಟ್ಸ್ ತಂಡದ ಮೇಲೆ ಉಗ್ರ ದಾಳಿ ಸಂಘಟಿಸಿದ್ದ ತಮಿಳ್ ತಲೈವಾಸ್ ತೆಲುಗು ಟೈಟಾನ್ಸ್‌ಗೆ 33-28 ಅಂಕಗಳಿಂದ ಶರಣಾಯಿತು. ರಾಹುಲ್ ಚೌಧರಿ ಮತ್ತೆ ಪ್ರಚಂಡ ರೈಡಿಂಗ್ ನಡೆಸಿದರು. ರಾಹುಲ್ 20 ಬಾರಿ ರೈಡ್ ಮಾಡಿದ್ದು ಗರಿಷ್ಠ 9 ಅಂಕ ಗಳಿಸಿದರು. ಮೊಸೆನ್ 7 ಅಂಕ, ನಿಲೇಶ್ ಸಾಲುಂಕೆ 5 ಅಂಕ ಪಡೆದು ತಂಡದ ಗೆಲುವಿಗೆ ಕೊಡುಗೆ ಸಲ್ಲಿಸಿದರು. ತಮಿಳ್ ಪರ ಅಜಯ್ 9 ಅಃಕ, ಅಮಿತ್ ಹೂಡ 6 ಅಂಕ ಮತ್ತು ಅತುಲ್ 5 ಅಂಕ ಪಡೆದರು. ತಮಿಳ್ ಸೋಮವಾರದ ಪಂದ್ಯದಲ್ಲಿ ಯುಪಿ ಯೋಧಾ ತಂಡಕ್ಕೆ ಶರಣಾಗಿತ್ತು. ಇಲ್ಲಿನ ಜವಾಹರ್‌ಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಗುಜರಾತ್ ಮತ್ತು ಡೆಲ್ಲಿ ತಂಡಗಳು ಜಿದ್ದಾಜಿದ್ದಿನ ಆಟ ಪ್ರದರ್ಶಿಸಿದವು. ಕೊನೆಯ ಹಂತದವರೆಗೆ ಎರಡೂ ತಂಡಗಳ ನಡುವೆ ಪೈಪೋಟಿ ನಡೆದಿತ್ತು. ಆದರೆ ಅಂತಿಮವಾಗಿ ಎರಡೂ ತಂಡಗಳು ಕೂಡ 32-32 ಅಂಕಗಳ ಅಂತರದ ಟೈಗೆ ಸಮಾಧಾನ ಪಟ್ಟುಕೊಳ್ಳಬೇಕಾಯಿತು. ಇದು ಕೂಟದಲ್ಲಿ ಎರಡನೇ ಟೈ ಎನ್ನುವುದು ವಿಶೇಷ. ಇದಕ್ಕೂ ಮೊದಲು ಪುನೇರಿ ಪಲ್ಟಾನ್ – ಯು ಮುಂಬಾ ತಂಡಗಳ ನಡುವಿನ ಪಂದ್ಯವೂ 32-32 ಅಂಕಗಳ ಅಂತರದಿಂದ ಟೈ ಆಗಿತ್ತು.
ಗುಜರಾತ್ ತಂಡದ ಪರ ರೈಡರ್ ಸಚಿನ್ (7 ಅಂಕ) ಮಿಂಚಿನ ಆಟ ಪ್ರದರ್ಶಿಸಿದರು. ಅವರಿಗೆ ಸುನಿಲ್ ಕುಮಾರ್ (4 ಅಂಕ) ಹಾಗೂ ರುತುರಾಜ್ (4 ಅಂಕ) ಉತ್ತಮ ಸಾಥ್ ನೀಡಿದರು. ಇದರಿಂದಾಗಿ ಗುಜರಾತ್ ಸೋಲು ಕಾಣುವುದು ತಪ್ಪಿತು. ಡೆಲ್ಲಿ ಪರ ಚಂದ್ರನ್ ಮಿಂಚು
ಡೆಲ್ಲಿ ತಂಡದ ತಾರಾ ಆಟಗಾರ ಮೆರಾಜ್ ಶೇಖ್ ವಿಫಲರಾದರು. ಕೇವಲ 1 ಅಂಕ ಪಡೆಯಲಷ್ಟೇ ಶಕ್ತರಾದರು. ಅವರಲ್ಲದೆ ಇತರೆ ಸ್ಟಾರ್ ಆಟಗಾರರಿಂದಲೂ ತಂಡಕ್ಕೆ ಯಶಸ್ಸು ಸಿಗಲಿಲ್ಲ. ಈ ಹಂತದಲ್ಲಿ ಹೆಚ್ಚುವರಿ ಆಟಗಾರನಾಗಿ ಕಣಕ್ಕೆ ಇಳಿದ ಚಂದ್ರನ್ ರಂಜಿತ್ 9 ಅಂಕವನ್ನು ರೈಡಿಂಗ್‌ನಿಂದ ತಂಡಕ್ಕೆ ತಂದುಕೊಟ್ಟು ತಂಡವನ್ನು ಸೋಲಿನಿಂದ ಪಾರು ಮಾಡಿದರು. 15 ಬಾರಿ ರೈಡ್ ಮಾಡಿದ್ದರು.