Advertisement
ಗುರುವಾರ ತ್ಯಾಗರಾಜ್ ನ್ಪೋರ್ಟ್ಸ್ ಕಾಂಪ್ಲೆಕ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ಡೆಲ್ಲಿ ಚರಣದ ಕೊನೆಯ ದಿನದ ಮೊದಲ ಪಂದ್ಯದಲ್ಲಿ ಬುಲ್ಸ್ ಗೆದ್ದು ಮತ್ತೆ ಫಾರ್ಮ್ಗೆಮರಳಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಬೆಂಗಳೂರು ಜಾದೂ ಮಾಡಲಿಲ್ಲ. ಇನ್ನೊಂದು ಬಾರಿ ಕಳಪೆ ಪ್ರದರ್ಶನ ನೀಡಿತು. ಸತತ 3ನೇ ಸೋಲು ಅನುಭವಿಸಿತು.
ಮುಂಬಾ ಗೆಲುವಿನಲ್ಲಿ ಕಾಶಿಲಿಂಗ್ ಅಡಕೆ (17 ರೈಡಿಂಗ್ ಅಂಕ) ಹಾಗೂ ಸುರೀಂದರ್ ಸಿಂಗ್ (6 ಟ್ಯಾಕ್ಲಿಂಗ್ ಅಂಕ) ಪ್ರಮುಖ ಪಾತ್ರವಹಿಸಿದರು.
Related Articles
2ನೇ ಅವಧಿಯ ಆಟ ಆರಂಭವಾದ ಮೂರು ನಿಮಿಷ ದಲ್ಲಿ ಬೆಂಗಳೂರು ಮತ್ತೂಂದು ಸಲ ಆಲೌಟಾಯಿತು. ಆಗ ಮುಂಬಾ 29-17ರಿಂದ ಮುಂದಿತ್ತು. ಆದರೆ 2ನೇ ಅವಧಿಯಲ್ಲಿ ರೋಹಿತ್ 2 ಸಲ ಸೂಪರ್ ರೈಡಿಂಗ್ ಮಾಡಿದರು. ಆದರೆ ಪಂದ್ಯದ 9ನೇ ನಿಮಿಷ ಆಗಿದ್ದಾಗ ಸೂಪರ್ ಟ್ಯಾಕಲ್‌ಗೆ ರೋಹಿತ್ ಬಲಿಯಾದರು. ಇದ ರೊಂದಿಗೆ ಬೆಂಗಳೂರು ಮತ್ತೂಮ್ಮೆ ಆಲೌಟ್‌ಗೊಳಗಾಗುವ ಭೀತಿಗೆ ಸಿಲುಕಿತ್ತು. ಜತೆಗೆ ಸೋಲಿನ ಮುನ್ಸೂಚನೆಯೂ ದೊರೆತಿತ್ತು.
Advertisement
ಮೊದಲ ಅವಧಿಯಲ್ಲಿ ಕಾಶಿಲಿಂಗ್ ಮಿಂಚು:ಮೊದಲ ಅವಧಿಯ ಆರಂಭದಲ್ಲಿ ಎರಡೂ ತಂಡಗಳಿಂದ ಸಮಾನ ಹೋರಾಟ ಕಂಡು ಬಂತು. ಆದರೆ ಬರುಬರುತ್ತಾ ಮುಂಬಾ ಬಲಿಷ್ಠವಾಗ ತೊಡಗಿತು. ಮೊದಲ ಅವಧಿ 14ನೇ ನಿಮಿಷದಲ್ಲಿ ಬೆಂಗಳೂರು ತಂಡ ಆಲೌಟ್ ಆಯಿತು. ಈ ಅವಧಿಯಲ್ಲಿ ಬೆಂಗಳೂರು 13-23 ಅಂಕದಿಂದ ಹಿಂದಿತ್ತು. ಯು ಮುಂಬಾ ಮುನ್ನಡೆ ಪಡೆದುಕೊಂಡು ಗೆಲುವಿನ ಅತ್ಮವಿಶ್ವಾಸ ಹೆಚ್ಚಿಸಿಕೊಂಡಿತ್ತು. ಅದರಲ್ಲೂ ಕಾಶಿಲಿಂಗ್ ಅಡಕೆ ಮೊದಲ ಅವಧಿಯ 11ನೇ ನಿಮಿಷದಲ್ಲಿ 3 ಅಂಕ ಹಾಗೂ ಅದೇ ಅವಧಿಯ 18ನೇ ನಿಮಿಷದಲ್ಲಿ 4 ರೈಡಿಂಗ್ ಅಂಕ ಪಡೆಯುವ ಮೂಲಕ ಬುಲ್ಸ್ ಬೆವರಿಳಿಸಿದರು. ಇಲ್ಲಿಂದ ಮುಂಬಾ ಭಾರೀ ಮುನ್ನಡೆ ಪಡೆದುಕೊಂಡಿತು. ಮೊದಲ ಅವಧಿಯಲ್ಲಿ ರೋಹಿತ್ ಬೆಂಗಳೂರು ಪರ ರೈಡಿಂಗ್‌ನಿಂದ 6 ಅಂಕ ಗಳಿಸಿದ್ದು ಬಿಟ್ಟರೆ ಉಳಿದವರಿಂದ ನಿರೀಕ್ಷಿತ ಪ್ರದರ್ಶನ ಹೊರಹೊಮ್ಮಲಿಲ್ಲ. ಬೆಂಗಳೂರು ಬುಲ್ಸ್ ರಕ್ಷಣಾ ವಿಭಾಗ ಮತ್ತೂಮ್ಮೆ ಸಂಪೂರ್ಣ ಕೈಕೊಟ್ಟಿತು. ಇಂದಿನಿಂದ ಚೆನ್ನೈ ಚರಣ ಆರಂಭ
ಶುಕ್ರವಾರದಿಂದ ಪ್ರೊ ಕಬಡ್ಡಿ ಚೆನ್ನೈ ಚರಣ ಆರಂಭ ವಾಗಲಿದ್ದು ಆತಿಥೇಯ ತಮಿಳ್ ತಲೈವಾಸ್ ತಂಡಕ್ಕೆ ತವರಿನಲ್ಲಿ ಅಗ್ನಿಪರೀಕ್ಷೆ ಎದುರಾಗಲಿದೆ. – ಹೇಮಂತ್ ಸಂಪಾಜೆ