Advertisement

ತವರಲ್ಲಿ ಸಿಡಿದ ದಬಾಂಗ್‌ ಡೆಲ್ಲಿ

12:41 AM Aug 25, 2019 | Team Udayavani |

ಹೊಸದಿಲ್ಲಿ: ಪವನ್‌ ಸೆಹ್ರಾವತ್‌ ಮಿಂಚಿನ ರೈಡಿಂಗ್‌ ಹೊರತಾಗಿಯೂಬೆಂಗಳೂರು ಬುಲ್ಸ್‌  33-31 ಅಂಕಗಳ ಅಂತರದಿಂದ ಆತಿಥೇಯ ದಬಾಂಗ್‌ ಡೆಲ್ಲಿ ವಿರುದ್ಧ ಮುಗ್ಗರಿಸಿತು.

Advertisement

ತ್ಯಾಗರಾಜ ನ್ಪೋರ್ಟ್ಸ್ ಕಾಂಪ್ಲೆಕ್ಸ್‌ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಮೊದಲ ಪಂದ್ಯದಲ್ಲಿ ನವೀನ್‌ ಕುಮಾರ್‌ (13 ಅಂಕ) ಅಬ್ಬರದ ರೈಡಿಂಗ್‌, ರೈಡರ್‌ ಮಿರಾಜ್‌ ಶೇಖ್‌ (5 ಅಂಕ) ಸಮಯೋಚಿತ ರೈಡಿಂಗ್‌ ಪ್ರದರ್ಶನ ಹಾಗೂ ರವೀಂದರ್‌ ಪಹಲ್‌ (4 ಅಂಕ) ಅದ್ಭುತ ಟ್ಯಾಕಲ್‌ನಿಂದ ಡೆಲ್ಲಿ ಗೆದ್ದು ಬಂದಿತು.

ದಿನದ ಇನ್ನೊಂದು ಪಂದ್ಯದಲ್ಲಿ ತೆಲುಗು ಟೈಟಾನ್ಸ್‌ 24-21ರಿಂದ ಜೈಪುರ್‌ ಪಿಂಕ್‌ ಪ್ಯಾಂಥರ್ಗೆ ಸೋಲುಣಿಸಿತು. ಇದು ಟೈಟಾನ್ಸ್‌ಗೆ ಒಲಿದ 3ನೇ ಜಯ.

ಪವನ್‌ ಬಿರುಗಾಳಿ ರೈಡಿಂಗ್‌
ಪವನ್‌ ಸೆಹ್ರಾವತ್‌ ಮತ್ತೂಮ್ಮೆ ರೈಡಿಂಗ್‌ನಲ್ಲಿ ಮಿಂಚಿದರು. ಎಂದಿ ನಂತೆ ಬಿರುಸಿನ ದಾಳಿಗಿಳಿದ ಅವರು ಏಕಾಂಗಿಯಾಗಿ ಹೋರಾಡಿದರು. ಒಟ್ಟಾರೆ 28 ರೈಡ್‌ ಮಾಡಿದ ಅವರು 17 ಸಲ ಯಶಸ್ವಿಯಾಗಿ ಅಂಕ ತಂದರು. 7 ಸಲ ವಿಫ‌ಲರಾದರು. 12 ಟಚ್‌ ಪಾಯಿಂಟ್‌ ಪಡೆದ ಪವನ್‌ 5 ಸಲ ಬೋನಸ್‌ ಕಲೆಹಾಕಿದರು.

ಆದರೆ ತಂಡದ ನಾಯಕ ರೋಹಿತ್‌ ಕುಮಾರ್‌ 6 ಸಲ ರೈಡಿಂಗ್‌ ಮಾಡಿದರೂ ಅಂಕ ಗಳಿಸ ದಿದ್ದುದು ಬುಲ್ಸ್‌ಗೆ ಹಿನ್ನಡೆಯಾಗಿ ಪರಿಣಮಿಸಿತು. ರಕ್ಷಣಾ ವಿಭಾ ಗದಲ್ಲೂ ಬೆಂಗಳೂರು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಅಂತಿಮವಾಗಿ ಬೆಂಗಳೂರು ಕೇವಲ 3 ಅಂಕ ಅಂತರದಿಂದ ಸೋಲನುಭವಿಸಿತು. ಇದು ಬೆಂಗಳೂರಿಗೆ ಎದುರಾದ 5ನೇ ಸೋಲು.

Advertisement
Advertisement

Udayavani is now on Telegram. Click here to join our channel and stay updated with the latest news.

Next