Advertisement
ದಿನದ ಇನ್ನೊಂದು ಪಂದ್ಯದಲ್ಲಿ ಹರಿಯಾಣ ಸ್ಟೀಲರ್ ತಂಡವು ಯು ಮುಂಬಾ ತಂಡವನ್ನು 47-30 ಅಂಕಗಳಿಂದ ಮಣಿಸಿದೆ. ಈ ಗೆಲುವಿ ನಿಂದ ಹರಿಯಾಣ ತಾನಾಡಿದ 22 ಪಂದ್ಯ ಗಳಿಂದ 16 ಪಂದ್ಯ ಗಳಲ್ಲಿ ಜಯಭೇರಿ ಬಾರಿಸಿ ಒಟ್ಟಾರೆ 84 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಹರಿಯಾಣ ಈ ಪಂದ್ಯದಲ್ಲಿ ರೈಡಿಂಗ್ ಮೂಲಕ 22 ಮತ್ತು ಟ್ಯಾಕಲ್ನಲ್ಲಿ 17 ಅಂಕ ಸಂಪಾದಿಸಿತು. ತಂಡದ ಶಿವಂ ಪತಾರೆ ರೈಡಿಂಗ್ನಲ್ಲಿ 9 ಅಂಕ ಸಹಿತ ಒಟ್ಟು 14 ಅಂಕ ಗಳಿಸಿದರೆ ವಿನಯ್ ಆರಂಕ ಪಡೆದರು. ಮುಂಬಾ ತಂಡದ ಸತೀಶ್ ಕಣ್ಣನ್ ರೈಡಿಂಗ್ನಲ್ಲಿ ಒಟ್ಟು 9 ಅಂಕ ಪಡೆದರು.
ತಮಿಳ್ ತಲೈವಾಸ್ ಪರ ಹಿಮಾಂಶು ಮತ್ತು ಮೋಯಿನ್ ಶಫಾ ಭರ್ಜರಿ ಪ್ರದರ್ಶನ ನೀಡಿದರು. ರೈಡರ್ ಹಿಮಾಂಶು 13 ಅಂಕ ಗಳಿಸಿದರೆ, ಮೋಯಿನ್ 9 ಅಂಕ ಗಳಿಸಿದರು. ಅಮಿರ್ ಹೊಸೈನ್ 4, ಸಾಯಿಪ್ರಸಾದ್, ಎಂ.ಅಭಿಷೇಕ್, ನಿತೇಶ್ ಕುಮಾರ್ ತಲಾ 3 ಅಂಕ ಗಳಿಸಿ ತಂಡವನ್ನು ಬೆಂಬಲಿಸಿದರು. ಬುಲ್ಸ್ ಪರ ಸುಶೀಲ್ 15 ಅಂಕ ಗಳಿಸಿ ಹೋರಾಟ ನೀಡಿದರಾದರೂ ಉಳಿದ ಆಟಗಾರರ ಬೆಂಬಲವಿಲ್ಲದೆ ತಂಡ ಸೊರಗಿತು. ಇಂದಿನ ಪಂದ್ಯ
1. ಗುಜರಾತ್ vs ಡೆಲ್ಲಿ
ಆರಂಭ: ರಾತ್ರಿ 8 ಗಂಟೆ
Related Articles
ಆರಂಭ: ರಾತ್ರಿ 9 ಗಂಟೆ
Advertisement
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್