Advertisement

Pro Kabaddi: ಬೆಂಗಳೂರು ಬುಲ್ಸ್‌ ಗೆ 10ನೇ ಸೋಲು

12:44 AM Feb 08, 2024 | Team Udayavani |

ಹೊಸದಿಲ್ಲಿ: ಬೆಂಗಳೂರು ಬುಲ್ಸ್‌ 10ನೇ ಪ್ರೊ ಕಬಡ್ಡಿ ಸೀಸನ್‌ನಲ್ಲಿ 10ನೇ ಸೋಲಿನ ಆಘಾತಕ್ಕೆ ಸಿಲುಕಿದೆ. ಬುಧವಾರದ ಪಂದ್ಯದಲ್ಲಿ ಪುನೇರಿ ಪಲ್ಟಾನ್ಸ್‌ 40-31 ಅಂತರದಿಂದ ಬುಲ್ಸ್‌ಗೆ ತಿವಿಯಿತು. ಪುನೇರಿ ಈಗಾಗಲೇ ಪ್ಲೇ ಆಫ್ ಪ್ರವೇಶಿಸಿದ್ದು, ಈ ಜಯದಿಂದ ಅಂಕಪಟ್ಟಿಯಲ್ಲಿ ಮತ್ತೆ ಜೈಪುರವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೆ ನೆಗೆಯಿತು (76 ಅಂಕ). ಆದರೆ ಮುಂದಿನ ಪಂದ್ಯವನ್ನು ಜೈಪುರ್‌ ಗೆದ್ದ ಕಾರಣ ಪುನೇರಿ ಅಷ್ಟೇ ಬೇಗ ಎರಡಕ್ಕಿಳಿಯಿತು.

Advertisement

ಪುನೇರಿ ಪರ ನಾಯಕ ಅಸ್ಲಾಂ ಮುಸ್ತಾಫಾ ಅತ್ಯುತ್ತಮ ಪ್ರದರ್ಶನ ನೀಡಿ 11 ಅಂಕ ಗಳಿಸಿದರು. ರೈಡರ್‌ಗಳಾದ ಆಕಾಶ್‌ ಶಿಂಧೆ 8, ಮೋಹಿತ್‌ ಗೋಯತ್‌ 7 ಅಂಕ ತಂದಿತ್ತರು. ಬೆಂಗಳೂರು ತಂಡದಲ್ಲಿ ಮಿಂಚಿದ್ದು ರೈಡರ್‌ ಸುಶೀಲ್‌ (9 ಅಂಕ) ಮತ್ತು ಡಿಫೆಂಡರ್‌ ಪ್ರತೀಕ್‌ (6 ಅಂಕ) ಮಾತ್ರ.

ದ್ವಿತೀಯ ಪಂದ್ಯದಲ್ಲಿ ಜೈಪುರ್‌ 27-22ರಿಂದ ದಬಾಂಗ್‌ ಡೆಲ್ಲಿಯನ್ನು ಮಣಿಸಿ ಪುನಃ ಅಗ್ರಸ್ಥಾನಿಯಾಯಿತು (77 ಅಂಕ). ಅರ್ಜುನ್‌ ದೇಶ್ವಾಲ್‌ 10 ಅಂಕಗಳೊಂದಿಗೆ ಮಿಂಚಿದರು. ಶುಕ್ರವಾರದಿಂದ ಕೋಲ್ಕತಾ ಆವೃತ್ತಿ ಮೊದಲ್ಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next