Advertisement
ಹರ್ಯಾಣ ಸ್ಟೀಲರ್ 2ನೇ ಪಂದ್ಯದಲ್ಲಿ ಸಾಧಿಸಿದ ಮೊದಲ ಜಯ ಇದಾಗಿದೆ. ರೈಡರ್‌ಗಳಾದ ವಿನಯ್ (8 ಅಂಕ), ಸಿದ್ಧಾರ್ಥ್ ದೇಸಾಯಿ (7), ಡಿಫೆಂಡರ್‌ಗಳಾದ ಜೈದೀಪ್ ದಹಿಯಾ (6) ಮತ್ತು ಮೋಹಿತ್ (5) ಅವರ ಸಾಂ ಕ ಆಟ ಹರ್ಯಾಣ ಜಯದಲ್ಲಿ ನಿರ್ಣಾಯಕ ಪಾತ್ರ ವಹಿಸಿತು.ಬೆಂಗಳೂರು ತಂಡದಲ್ಲಿ ಎಂದಿ ನಂತೆ ರೈಡರ್ ಭರತ್ ಅವರದು ಏಕಾಂಗಿ ಹೋರಾಟವಾಗಿತ್ತು. ಅವರು ಅತ್ಯಧಿಕ 14 ಅಂಕ ತಂದಿ ತ್ತರು. ಡಿಫೆಂಡರ್ ಸುರ್ಜೀತ್ ಸಿಂಗ್ 5 ಅಂಕ ಗಳಿಸಿದರು.
ತೆಲುಗು ಟೈಟಾನ್ಸ್ ಸತತ 3ನೇ ಸೋಲಿನ ಆಘಾತಕ್ಕೆ ಸಿಲುಕಿದೆ. ದಿನದ 2ನೇ ಪಂದ್ಯದಲ್ಲಿ ಟೈಟಾನ್ಸ್ ವಿರುದ್ಧ ಯುಪಿ ಯೋಧಾಸ್ 48-33 ಅಂತರದ ಗೆಲುವು ಸಾಧಿಸಿತು.