ಲಂಡನ್: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ವಿಜೇತರಿಗೆ ನೀಡಲಾಗುವ ಬಹುಮಾನದ ಮೊತ್ತವನ್ನು ಬಹಿರಂಗ ಪಡಿಸಿದೆ. ಅಧಿಕೃತ ಹೇಳಿಕೆಯ ಪ್ರಕಾರ, ಒಂಬತ್ತು ತಂಡಗಳು 31.4 ಕೋಟಿ ರೂಪಾಯಿಗಳ ಬೃಹತ್ ಮೊತ್ತವನ್ನು ಹಂಚಿಕೊಳ್ಳುತ್ತವೆ,
ಲಂಡನ್ ನ ಓವಲ್ ನಲ್ಲಿ ಜೂನ್ 7 ರಿಂದ ಪ್ರಾರಂಭವಾಗುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಭಾರತವು ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಡಬ್ಲ್ಯು ಟಿಸಿ ಫೈನಲ್ ನ ವಿಜೇತರು ಸುಮಾರು ರೂ 13.22 ಕೋಟಿ ಬಹುಮಾನವನ್ನು ಪಡೆಯುತ್ತಾರೆ. ರನ್ನರ್ ಅಪ್ ತಂಡವು ಸುಮಾರು ರೂ 6.61 ಕೋಟಿ ಜೇಬಿಗಿಳಿಸುತ್ತಾರೆ.
“ಟೂರ್ನಮೆಂಟ್ ಬಹುಮಾನದ ಹಣದಲ್ಲಿ ಯಾವುದೇ ಬದಲಾವಣೆ ಇಲ್ಲ, ಇದು ಚಾಂಪಿಯನ್‌ಶಿಪ್‌ನ (2019-21) ಉದ್ಘಾಟನಾ ಆವೃತ್ತಿಯ ಒಟ್ಟು ಪರ್ಸ್ 3.8 ಮಿಲಿಯನ್ ಡಾಲರ್ (ಅಂದಾಜು ರೂ. 13.22 ಕೋಟಿ) ಯಂತೆಯೇ ಉಳಿದಿದೆ. 2021 ರಲ್ಲಿ ಸೌತಾಂಪ್ಟನ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತದ ವಿರುದ್ಧ ಎಂಟು ವಿಕೆಟ್ ಗಳ ಜಯ ಸಾಧಿಸಿದ ಕೇನ್ ವಿಲಿಯಮ್ಸನ್ ಅವರ ನ್ಯೂಜಿಲೆಂಡ್ ತಂಡವು 1.6 ಮಿಲಿಯನ್ ಡಾಲರ್ ಗೆ ಬಹುಮಾನ ನೀಡಲಾಗಿತ್ತು” ಎಂದು ಐಸಿಸಿ ಪ್ರಕಟನೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:‘Daam’ virus’ ಆಂಡ್ರಾಯ್ಡ್ ಫೋನ್‌ಗಳ ಕರೆ ದಾಖಲೆಗಳನ್ನು ಕದಿಯುತ್ತದೆ!
ಡಬ್ಲ್ಯುಟಿಸಿ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾವು ಅಂದಾಜು 3.72 ಕೋಟಿ ರೂ. ಪಡೆಯಲಿದೆ. ನಾಲ್ಕನೇ ಸ್ಥಾನದಲ್ಲಿ ತಮ್ಮ ಅಭಿಯಾನವನ್ನು ಪೂರ್ಣಗೊಳಿಸಿದ ಇಂಗ್ಲೆಂಡ್ ಅಂದಾಜು 2.9 ಕೋಟಿ ರೂ ಗಳಿಸುತ್ತದೆ.
ಐದನೇ ಸ್ಥಾನ ಗಳಿಸಿದ ಶ್ರೀಲಂಕಾ ಅಂದಾಜು ರೂ 1.65 ಕೋಟಿ ಗಳಿಸಲಿದೆ. ಉಳಿದ ತಂಡಗಳಾದ ನ್ಯೂಜಿಲೆಂಡ್ (ನಂ.6), ಪಾಕಿಸ್ತಾನ (ನಂ.7), ವೆಸ್ಟ್ ಇಂಡೀಸ್ (ನಂ.8), ಮತ್ತು ಬಾಂಗ್ಲಾದೇಶ (ನಂ.9) ತಲಾ $100,000 ಮೊತ್ತವನ್ನು (ಅಂದಾಜು 82.7 ಲಕ್ಷ ರೂ.) ಬಹುಮಾನವಾಗಿ ನೀಡಲಾಗುವುದು” ಎಂದು ಪ್ರಕಟಣೆ ತಿಳಿಸಿದೆ.