Advertisement
“ಉದಯವಾಣಿ ದೀಪಾವಳಿ ಧಮಾಕ 2023′ ಸ್ಪರ್ಧೆಯಲ್ಲಿ ವಿಜೇತರಾದ ಅದೃಷ್ಟಶಾಲಿಗಳಿಗೆ ಮಂಗಳೂರಿನ ಲೇಡಿಹಿಲ್‌ನಲ್ಲಿರುವ ಎಸ್.ಎಲ್.ಶೇಟ್ ಡೈಮಂಡ್ ಹೌಸ್‌ನಲ್ಲಿ ಶನಿವಾರ ನಡೆದ ಬಹುಮಾನ ವಿತರಿಸುವ ಸಮಾರಂಭದಲ್ಲಿ ಅವರು ಮಾತನಾಡಿದರು.
Related Articles
Advertisement
ಸಂಬಂಧ ಗಟ್ಟಿಗೊಳಿಸುವ ಶಕ್ತಿಡೈಮಂಡ್ ಹೌಸ್‌ನ ದೀಪ್ತಿ ಶೇಟ್ ಅವರು ಮಾತ ನಾಡಿ, ಚಿನ್ನ ಮತ್ತು ಬೆಳ್ಳಿಗೆ ನಮ್ಮ ಸಂಬಂಧವನ್ನು ಗಟ್ಟಿಗೊಳಿಸುವ ಶಕ್ತಿ ಇದೆ. “ಉದಯವಾಣಿ’ ಪತ್ರಿಕೆ ಮತ್ತು “ಎಸ್‌ಎಲ್ ಶೇಟ್’ ಸಂಸ್ಥೆ ಇಂತಹ ಶ್ರೇಷ್ಠ ಕಾರ್ಯವನ್ನು ಒಟ್ಟಾಗಿ ಮಾಡುತ್ತಿದೆ ಎಂದರು. ಡೈಮಂಡ್ ಹೌಸ್ ಪಾಲುದಾರರಾದ ಶರತ್ ಶೇಟ್, ಪ್ರಸಾದ್ ಶೇಟ್, ಪ್ರಸನ್ನ ಶೇಟ್ ಉಪಸ್ಥಿತರಿದ್ದರು. “ಉದಯವಾಣಿ’ ಮ್ಯಾಗಜಿನ್ ವಿಭಾಗ ಮತ್ತು ಸ್ಪೆಷಲ್ ಇನಿಶಿಯೇಟಿವ್ಸ್‌ನ ಉಪಾಧ್ಯಕ್ಷ ರಾಮಚಂದ್ರ ಮಿಜಾರು ಪ್ರಸ್ತಾವನೆಗೈದು, “ಉದಯವಾಣಿ”ಯ ದೀಪಾವಳಿ ವಿಶೇಷಾಂಕ ಕರ್ನಾ ಟಕ ಮಾತ್ರವಲ್ಲದೆ, ಕೇರಳ, ಮಹಾರಾಷ್ಟ್ರ ದಲ್ಲೂ ಓದುಗರನ್ನು ಹೊಂದಿದೆ. ಹಬ್ಬಕ್ಕೆ ಸಿಹಿ, ಸಂತೋಷದ ಜತೆಗೆ ಓದುಗರಿಗೆ ಸಾಹಿತ್ಯ ಸಂಸ್ಕೃತಿಯನ್ನು ವಿಶೇಷಾಂಕ ನೀಡುತ್ತಿದೆ ಎಂದರು. “ಉದಯವಾಣಿ’ಯ ಮಂಗಳೂರು ರೀಜನಲ್ ಮ್ಯಾನೇಜರ್ ಸತೀಶ್ ಮಂಜೇಶ್ವರ ಬಹುಮಾನ ವಿಜೇತರ ವಿವರ ವಾಚಿಸಿದರು. ಮುಖ್ಯ ವರದಿಗಾರ ವೇಣು ವಿನೋದ್ ಕೆ.ಎಸ್. ಸ್ವಾಗತಿಸಿ, ಎಸ್.ಎಲ್. ಶೇಟ್ ಡೈಮಂಡ್ ಹೌಸ್‌ನ ಶನಾಯಾ ಶೇಟ್ ವಂದಿಸಿದರು. ಹಿರಿಯ ವರದಿಗಾರ ದಿನೇಶ್ ಇರಾ ಕಾರ್ಯಕ್ರಮ ನಿರೂಪಿಸಿದರು. ದೀಪಾವಳಿ ಧಮಾಕಾ ವಿಜೇತರು
ಬಂಪರ್ ಬಹುಮಾನ:ಸುದೇಷ್ಣಾ ಮಂಗಳೂರು.
ಪ್ರಥಮ: ಕೆ.ವಿ. ಶಿವಕುಮಾರ್ ನಂಜನಗೂಡು, ರಾಕೇಶ್ ಜಪ್ಪಿನಮೊಗರು.
ದ್ವಿತೀಯ: ಆಕಾಶ್ ಕುಲಕರ್ಣಿ ಸತ್ತೂರು, ಧಾರವಾಡ, ಭವಾನಿ ಉಳ್ಳಾಲ, ಹರೀಶ್ ಐತಾಳ ಸುರತ್ಕಲ್.
ತೃತೀಯ: ಉಮೇಶ್ ಕುಂಜಿಬೆಟ್ಟು ಉಡುಪಿ, ನಾಗಭೂಷಣ ವಾಕೂಡ ಕೊಕ್ಕರ್ಣೆ, ಸುದರ್ಶನ್ ಶಿವರಾಮ ಶೆಟ್ಟಿ ಮೂಡುಬೆಳ್ಳೆ, ಪದ್ಮಿನಿ ಕೆ. ಮಂಗಳೂರು. ಪ್ರೋತ್ಸಾಹಕರ ಬಹುಮಾನ: ಎಸ್.ವಿ.ರತನ ಶಿವಮೊಗ್ಗ, ಸಂತೋಷ್ ವಿಷ್ಣು ಮಡಿವಾಳ ಮಂಕಿ (ಉತ್ತರ ಕನ್ನಡ), ನಿಧಿ ಯಲಹಂಕ ಬೆಂಗಳೂರು, ಪ್ರತಿಮಾ ಕೆ.ಪಿ. ಕಾಸರಗೋಡು, ಸತ್ಯೇಂದ್ರ ಕೂಸ ಪೂಜಾರಿ ಮುಂಬಯಿ, ಪಿ. ನರಸಿಂಹಲು ಸಿಂಧನೂರು, ಸಂಧ್ಯಾ ಸವಣೂರು ಕಡಬ, ಪುಟ್ಟಣ್ಣ ಪೂಜಾರಿ ನಾಲ್ಕೂರು ಸುಳ್ಯ, ಅಬ್ದುಲ್ ರಜಾಕ್ ಅನಂತಾಡಿ ಬಂಟ್ವಾಳ, ಕೃಷ್ಣ ಮಟ್ಟಾರು ಕಾಪು, ರೇವತಿ ಮಯ್ನಾಡಿ ಬೈಂದೂರು, ಶೋಭಿತಾ ಹೊಸ್ಮಾರು ಕಾರ್ಕಳ, ಚೈತ್ರಾ ಮಚ್ಚಿನ ಬೆಳ್ತಂಗಡಿ, ಕುಶಲ ವಿ. ಮೊಲಿ ಮೂಡುಬಿದಿರೆ, ಕೌಶಿಕ್ ಉಳ್ಳಂಜೆ ಕಟೀಲು, ಜಯಶ್ರೀ ಯು. ಕೋಟೇಶ್ವರ, ಬೀನಾ ಫೆರ್ನಾಂಡಿಸ್ ಮಂಗಳೂರು, ಅಣ್ಣಪ್ಪ ನಾಯಕ್ ಹೆಬ್ರಿ, ಬಿ.ಅಶೋಕ್ ಶೆಟ್ಟಿ ಬೆಂಗಳೂರು, ತನುಶ್ರೀ ಕೆ.ವಿ. ಕೊಳ್ತಿಗೆ ಪುತ್ತೂರು. “ಉದಯವಾಣಿ’ ದೀಪಾವಳಿ ವಿಶೇಷಾಂಕದಲ್ಲಿ ಕೇಳಿದ್ದ ಪ್ರಶ್ನೆಗಳಿಗೆ ಉತ್ತರಿಸಿ, ಕಳುಹಿಸಿದ್ದೆ. ನನಗೆ ಬಹುಮಾನ, ಅದೂ ಬಂಪರ್ ಬಹುಮಾನ ಬರುತ್ತದೆ ಎಂದುಕೊಂಡಿರಲಿಲ್ಲ. ಅದೃಷ್ಟಶಾಲಿಯಾಗಿ ಆಯ್ಕೆಯಾಗಿರುವುದು ಖುಷಿ ತಂದಿದೆ.
– ಸುದೇಷ್ಣಾ. ಮಂಗಳೂರು, ಬಂಪರ್ ಬಹುಮಾನ ವಿಜೇತರು “ಉದಯವಾಣಿ, ತರಂಗ, ತುಷಾರ, ತುಂತುರು’ ಸೇರಿದಂತೆ “ಉದಯವಾಣಿ’ ಬಳಗದ ವಿವಿಧ ಪತ್ರಿಕೆಗಳನ್ನು 30 ವರ್ಷಗಳಿಂದ ಖರೀದಿಸಿ, ಓದಿ, ಸಂಗ್ರಹಿಸಿ ಇಟ್ಟಿದ್ದೇನೆ. ರಾಜ್ಯಾದ್ಯಂತ ಓದುಗರನ್ನು ತನ್ನೊಂದಿಗೆ ಬೆಸೆಯುತ್ತಿರುವ ಪತ್ರಿಕೆಯಾಗಿದ್ದು, ಪ್ರತೀವರ್ಷ ದೀಪಾವಳಿ- ಯುಗಾದಿ ವಿಶೇಷಾಂಕವನ್ನೂ ಖರೀದಿಸುವೆ. ಈ ಬಾರಿ ಪ್ರಥಮ ಬಹುಮಾನ ಪಡೆಯು ತ್ತೇನೆ ಎಂಬ ಕಲ್ಪನೆ ಇರಲಿಲ್ಲ. ಬಹು ಮಾನ ದೊರೆತದ್ದು ಖುಷಿ ತಂದಿದೆ.
– ಕೆ.ವಿ. ಶಿವಕುಮಾರ್, ನಂಜನಗೂಡು
ಪ್ರಥಮ ಬಹುಮಾನ ವಿಜೇತರು “ಉದಯವಾಣಿ’ ಪತ್ರಿಕೆಯಿಂದಲೇ ಪ್ರಾಥಮಿಕ ಶಾಲಾ ಹಂತದಲ್ಲಿ ಓದುವ ಹವ್ಯಾಸ ಆರಂಭ ವಾಯಿತು. ರಾಜ್ಯದಲ್ಲೇ ಅತ್ಯುತ್ತಮ ವಿಶ್ವಾಸಾರ್ಹ ಪತ್ರಿಕೆ ಇದು. ಈ ಬಾರಿಯ ವಿಶೇಷಾಂಕವನ್ನು ಓದಲೇ ಬೇಕು ಎಂಬ ಉದ್ದೇಶದಿಂದ ಖರೀ ದಿಸಿದ್ದೆ. ಅದರಲ್ಲಿದ್ದ ದೀಪಾವಳಿ ಧಮಾಕದ ಕೂಪನ್ ಅನ್ನು ತುಂಬಿ ಕಳುಹಿಸಿದ್ದೆ. ಬಹುಮಾನ ಒಲಿದಿರುವುದು ನನ್ನ ಅದೃಷ್ಟ.
– ಅಬ್ದುಲ್ ರಜಾಕ್, ಅನಂತಾಡಿ ಬಂಟ್ವಾಳ, ಪ್ರೋತ್ಸಾಹಕರ ಬಹುಮಾನ ವಿಜೇತರು