Advertisement
ಎಂಜಿಎಂ ಕಾಲೇಜಿನ ಮುದ್ದಣ್ಣ ಮಂಟಪದಲ್ಲಿ ರವಿವಾರ ನಡೆದ 40ನೇ ರಾಜ್ಯಮಟ್ಟದ ನಾಟಕೋತ್ಸವ ಸ್ಪರ್ಧೆಯ ಬಹುಮಾನ ವಿತರಣೆ ಮತ್ತು “ಕಲಾಂಜಲಿ’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ನಾಟಕಗಳು ಸಂಸ್ಕೃತಿಯನ್ನು ಪ್ರತಿ ಬಿಂಬಿಸುತ್ತವೆ. ಪುಸ್ತಕ ರೂಪದಲ್ಲಿರುವ ಕಥೆಗಳಿಗೆ ಅಭಿನಯ ಸೇರಿಸಿದರೆ ನಾಟಕವಾಗುತ್ತದೆ ಎಂದರು. ರಂಗಭೂಮಿ ಅಧ್ಯಕ್ಷ ಡಾ| ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ತೀರ್ಪುಗಾರರನ್ನು ಗೌರವಿಸಲಾಯಿತು.
“ನೀರು ಕುಡಿಸಿದ ನೀರೆಯರು’ ನಾಟಕಕ್ಕೆ ಪ್ರಥಮ ಬಹುಮಾನ ಲಭಿಸಿತು. “ಮೀಡಿಯಾ’ ನಾಟಕ ದ್ವಿತೀಯ ಬಹುಮಾನ ಮತ್ತು “ಮರಗಿಡ ಬಳ್ಳಿ’ ನಾಟಕ ತೃತೀಯ ಬಹುಮಾನಗಳಿಗೆ ಪಾತ್ರವಾದವು.
ಹಿರಿಯ ರಂಗಭೂಮಿ ನಟ ಶ್ರೀನಿವಾಸ ಶೆಟ್ಟಿಗಾರ್ ಉಪಸ್ಥಿತರಿದ್ದರು. ರಂಗಭೂಮಿಯ ಉಪಾಧ್ಯಕ್ಷ ನಂದಕುಮಾರ್ ಎಂ. ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಕಾರ್ಯಕ್ರಮ ನಿರೂಪಿಸಿದರು.